ಕೇಂದ್ರ ಸಚಿವರಿಂದ ಕೊಲೆ ಆರೋಪಿಗೆ ಮಾಲಾರ್ಪನೆ ಖಂಡನೀಯ: ಎಂ.ಕೆ. ಪೈಝಿ

ವರದಿಗಾರ-ಜು.12: ಜಾನುವಾರು ವರ್ತಕ ಅಲೀಮುದ್ದೀನ್ ಅನ್ಸಾರಿ ಯವರ ಗುಂಪು ಹಿಂಸಾ ಹತ್ಯಾ ಆರೋಪಿಗೆ ಮಾಲಾರ್ಪನೆ ಮಾಡಿದ ಘಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾರವರು ಜಾಮೀನಿನ ಮೇಲೆ ಹೊರಬಂದ ಆರೋಪಿಗೆ ಸಿಹಿ ತಿಂಡಿ ತಿನ್ನಿಸಿ ಮಾಲಾರ್ಪನೆ ಮಾಡಿದ್ದಾರೆ. ಆರೋಪಿಗಳನ್ನು ಈ ರೀತಿಯಲ್ಲಿ ಗೌರವಿಸುವುದು ಫ್ಯಾಶನ್ ಆಗುತ್ತಿದ್ದು, ಸಚಿವರ ಈ ನಡೆ ಆಶ್ಚರ್ಯಕರವಾಗಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ಯಾವ ಸಂದೇಶವನ್ನು ಸಚಿವರು ನೀಡುತ್ತಿದ್ದಾರೆ ಎಂದು ಅವರು ಪ್ರಶಿಸಿದ್ದಾರೆ.
ನೆಲದ ಕೂನೂನನ್ನು ಗೌರವಿಸಬೇಕಾದ ಸಚಿವರು ಮತ್ತು ಬಿಜೆಪಿಯು ಸರಕಾರದ ವರ್ಚಸ್ಸಿಗೆ ಕುಂದು ತರುತ್ತದೆ. ಕೇಂದ್ರ ಕೂಡಲೇ ಸಚಿವರನ್ನು ವಜಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹಿಂಸಾ ಹತ್ಯೆಯ ಘಟನೆಗಳು ಜಾರ್ಖಂಡ್ ರಾಜ್ಯದಲ್ಲಿ ಅತೀ ಹೆಚ್ಚು ನಡೆದಿದೆ. ಅಪರಾಧಿಗಳಿಗೆ ಮುಕ್ತ ಸ್ವಾತಂತ್ಯ್ರ ನೀಡಿ ಸಂತ್ರಸ್ತರಿಗೆ ನ್ಯಾಯ ನಿರಾಕರಿಸಲಾಗುತ್ತಿದೆ. ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದ್ದರೂ ಗುಂಪು ಹಿಂಸಾ ಆರೋಪಿಗಳು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಗೋರಕ್ಷಣೆಯ ಹೆಸರಲ್ಲಿ ಅಪರಾಧಿಗಳನ್ನು ಗೌರವಿಸಿ ಧರ್ಮ ರಕ್ಷಕರು ಎಂದು ಬಿಂಬಿಸಲಾಗುತ್ತಿದೆ. ಸಚಿವರ ಈ ಮನಸ್ಥಿತಿ ದೇಶಾದ್ಯಂತ ಅರಾಜಕತೆಗೆ ಮತ್ತು ಹಿಂಸೆಗೆ ದಾರಿ ಮಾಡಿ ಕೊಡುತ್ತಿದೆ ಎಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
