ಮೋದಿ ಔರಂಗಜೇಬ್ ಗಿಂತಲೂ ಕ್ರೂರಿ: ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ

43 ವರ್ಷಗಳ ನಂತರ ತುರ್ತು ಪರಿಸ್ಥಿಯ ಬಗ್ಗೆ ಮಾತನಾಡುವುದರಿಂದ ‘ಅಚ್ಚೇ ದಿನ್’ ಬರುವುದಿಲ್ಲ
‘ಮೋದಿ ಜನವಿರೋಧಿ ಆಡಳಿತವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ’
ವರದಿಗಾರ (ಜೂ.26): ‘ಪ್ರಧಾನಿ ನರೇಂದ್ರ ಮೋದಿಯವರು ಮೊಘಲ್ ದೊರೆ ಔರಂಗಜೇಬ್ ಗಿಂತ ಕ್ರೂರಿ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲಾ ಹೇಳಿದ್ದಾರೆ.
ತುರ್ತು ಪರಿಸ್ಥಿತಿಗೆ ಜೂನ್ 25 ಕ್ಕೆ 43 ವರ್ಷ ಸಂದ ನೆನಪಿಗಾಗಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು, ‘ತುರ್ತು ಪರಿಸ್ಥಿತಿ ಭಾರತೀಯ ಇತಿಹಾಸದ ಕರಾಳ ಅಧ್ಯಾಯ. ಒಂದು ಕುಟುಂಬದ ಅಧಿಕಾರ ದಾಹಕ್ಕಾಗಿ ದೇಶವನ್ನೇ ಜೈಲು ಮಾಡಲಾಯ್ತು’ ಎಂದಿದ್ದರು.
ಈ ಕುರಿತು ಪ್ರತಿಕ್ರಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲಾ, ”ನರೇಂದ್ರ ಮೊದಿಯವರು ಮೊಘಲ್ ದೊರೆ ಔರಂಗಜೇಬ್ ಗಿಂತಲೂ ಕ್ರೂರಿ. 43 ವರ್ಷಗಳ ತುರ್ತುಪರಿಸ್ಥಿತಿಯ ಬಗ್ಗೆ ಪಾಠ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ದೂಷಿಸಲು ಹೊರಟ ಅವರು, ಅವರ ಆಡಳಿತಾವಧಿಯಲ್ಲಾದ ಕಪ್ಪು ಚುಕ್ಕೆಗಳನ್ನು ಮತ್ತು ಜನವಿರೋಧಿ ಆಡಳಿತವನ್ನುಮರೆಮಾಚಲು ಯತ್ನಿಸುತ್ತಿದ್ದಾರೆ. 43 ವರ್ಷಗಳ ನಂತರ ತುರ್ತು ಪರಿಸ್ಥಿಯ ಬಗ್ಗೆ ಮಾತನಾಡುವುದರಿಂದ ‘ಅಚ್ಚೇ ದಿನ್’ ಬರುವುದಿಲ್ಲ’ ಎಂದು ಸುರ್ಜೆವಾಲಾ ಲೇವಡಿ ಮಾಡಿದ್ದಾರೆ.
ಇಂದು ಬೆಳಿಗ್ಗೆ ಮುಂಬೈಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ‘ಗುಲಾಮಗಿರಿ ಮತ್ತು ಒಂದು ಕುಟುಂಬದ ಅಧಿಕಾರ ದಾಹದಿಂದ ದೇಶ ಜೈಲಾಗುವ ಪರಿಸ್ಥಿತಿ 1975 ರಲ್ಲಿ ತಲೆದೂರಿತ್ತು. ಆದರೆ ತುರ್ತು ಪರಿಸ್ಥಿಯ ವಿರುದ್ಧ ಮಹಿಳೆ, ಪುರುಷರು ಎನ್ನದೆ ಎಲ್ಲರೂ ಸಮನಾಗಿ ಹೋರಾಡಿದ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಗೆದ್ದಿತು’ ಎಂದು ಹೇಳಿದ್ದರು.
