ರಾಷ್ಟ್ರೀಯ ಸುದ್ದಿ

ಕೇವಲ 94 ನಿಮಿಷಗಳಲ್ಲಿ 323.5 ಕಿ.ಮೀ ದೂರದಿಂದ ತಂದ ಜೀವಂತ ಹೃದಯ; ಬಾಲಕಿಗೆ ಕಸಿ ಹೃದಯ ಜೋಡಣೆಯಲ್ಲಿ ಯಶಸ್ವಿಯಾದ ಪೊರ್ಟೀಸ್ ಆಸ್ಪತ್ರೆ

ವರದಿಗಾರ (ಜೂ.25): ಜೀವಂತ ಹೃದಯವೊಂದನ್ನು ಔರಂಗಾಬಾದ್ನಿಂದ ಸುಮಾರು 323.5 ಕಿ.ಮೀ ದೂರದಲ್ಲಿರುವ ಮುಂಬೈಗೆ ಕೇವಲ 94 ನಿಮಿಷಗಳಲ್ಲಿ ಸಾಗಿಸಿ 4 ವರ್ಷದ ಬಾಲಕಿಗೆಹೃದಯ ಕಸಿ ಶಸ್ತ್ರಚಿಕಿತ್ಸೆ’ ಯನ್ನು ಮಾಡುವಲ್ಲಿ ಪೊರ್ಟೀಸ್ ಆಸ್ಪತ್ರೆ ಯಶಸ್ವಿಯಾಗಿದ್ದು ಎಲ್ಲರ ಗಮನ ಸೆಳೆದಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ 13 ವರ್ಷದ ಬಾಲಕನೊಬ್ಬನನ್ನು ಔರಂಗಾಬಾದ್ನಲ್ಲಿರುವ ಮಹಾತ್ಮಾ ಗಾಂಧಿ ಮೆಡಿಕಲ್ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತಪಟ್ಟಿದ್ದ ಬಾಲಕನ ಹೃದಯವನ್ನು 4 ವರ್ಷದ ಬಾಲಕಿಗೆ ಜೋಡಿಸಲಾಗಿದ್ದು, ಜಲ್ನಾದ ಬಾಲಕಿಯನ್ನು ನಿಗಾವಣೆಯಲ್ಲಿ ಇರಿಸಲಾಗಿದೆಎಂದು ಆಸ್ಪತ್ರೆಯ ಮೂಲಗಳು ಹೇಳಿಕೆ ನೀಡಿದೆ.

ಜೂನ್ 22ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಔರಂಗಾಬಾದ್ವಿಮಾನ ನಿಲ್ದಾಣದತ್ತ ಹೃದಯವನ್ನು ಅಂಬ್ಯುಲೆನ್ಸ್ ಸಾಗಿಸಲಾಯಿತು. ಆಸ್ಪತ್ರೆಯಿಂದ 4.8 ಕಿ.ಮೀ ಅಂತರವನ್ನು ಕೇವಲ 4 ನಿಮಿಷಗಳಲ್ಲಿ ತಲುಪಲಾಯಿತು. ಅಲ್ಲಿಂದ ವಿಮಾನದ ಮೂಲಕ 3.05 ವೇಳೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ತರಲಾಯಿತು.

ವಿಮಾನ ನಿಲ್ದಾಣದಿಂದ ಫೋರ್ಟೀಸ್ಆಸ್ಪತ್ರೆವರೆಗಿನ 18 ಕಿ.ಮೀ. ದೂರದ ಮಾರ್ಗದಲ್ಲಿ ತಡೆರಹಿತ ವ್ಯವಸ್ಥೆ ಕಲ್ಪಿಸಿ ಕೇವಲ 19 ನಿಮಿಷಗಳಲ್ಲಿ ತಲುಪಲಾಯಿತು. ಮಧ್ಯಾಹ್ನ 3.24ಕ್ಕೆ ಹೃದಯ ಆಸ್ಪತ್ರೆಯನ್ನು ತಲುಪಿದ್ದು ಯಶಸ್ವಿಯಾಗಿ 4 ವರ್ಷದ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group