ರಾಷ್ಟ್ರೀಯ ಸುದ್ದಿ

ಶಾಂತಿ, ಅಹಿಂಸೆಗೆ ಅಂತಿಮ ಜಯ: ಪ್ರಧಾನಿ ಮೋದಿ

ವರದಿಗಾರ (ಜೂ.25): ಶಾಂತಿ ಹಾಗೂ ಅಹಿಂಸೆಗೆ ಅಂತಿಮ ಜಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಂಸೆ ಮತ್ತು ಕ್ರೌರ್ಯದಿಂದ ಎಂದಿಗೂ ಯಾವ ಸಮಸ್ಯೆಗೂ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘1919ರಲ್ಲಿ ನಡೆದ ಜಲಿಯನ್‌ ವಾಲಾ ಬಾಗ್‌ ನರಮೇಧ ಕ್ರೌರ್ಯ ಮತ್ತು ಹಿಂಸೆಯ ಪರಮಾವಧಿಯ ಸಂಕೇತ’. ಇದರೊಂದಿಗೆ ಶಾಂತಿ, ಅಹಿಂಸೆ, ತ್ಯಾಗ ಮತ್ತು ಬಲಿದಾನಕ್ಕೆ ಅಂತಿಮ ಜಯ ಎಂಬ ಸತ್ಯದ ನಿದರ್ಶನವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾದ ಜಲಿಯನ್‌ವಾಲಾ ಬಾಗ್‌ ಘಟನೆಗೆ ಮುಂದಿನ ವರ್ಷ ನೂರು ವರ್ಷ ತುಂಬಲಿದೆ.

ಆ ಹಿನ್ನೆಲೆಯಲ್ಲಿ ಪ್ರಧಾನಿ ಈ ವಿಷಯವನ್ನು ಭಾನುವಾರ ಪ್ರಸಾರವಾದ ‘ಮನ್ ಕಿ ಬಾತ್’  ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಮಾತನಾಡಿದ್ದಾರೆ.

ಅಮೃತಸರದ ಜಲಿಯನ್‌ವಾಲಾ ಬಾಗ್‌ ಎಂಬಲ್ಲಿ ಬ್ರಿಟಿಷ್‌ ಸೇನೆ ನಡೆಸಿದ ಅಮಾನುಷ ಗುಂಡಿನ ದಾಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಅಮಾಯಕ ಭಾರತೀಯರು ಬಲಿಯಾಗಿದ್ದರು.

Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group