ರಾಷ್ಟ್ರೀಯ ಸುದ್ದಿ

ಟ್ಯಾಕ್ಸಿಗಳಲ್ಲಿ ‘ಚೈಲ್ಡ್ ಲಾಕ್’ : ಅತ್ಯಾಚಾರಿ, ಅಪಹರಣಕಾರರಿಗೆ ನೆರವಾಗುತ್ತಿದೆಯೇ?

ವರದಿಗಾರ: ಜನರ ಸುರಕ್ಷತೆಗೆ ಬೇಕಾಗಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ-ಆನ್ವೇಷಣೆಗಳು ನಡೆಯುತ್ತಿರುವಾಗ ಅದನ್ನು ದುರುಪಯೋಗ ಪಡೆಸುವ ಕೆಲವು ಕಿರಾತಕರೂ ಇದ್ದಾರೆ. ಕಾರುಗಳಲ್ಲಿರುವ ಚೈಲ್ಡ್ ಲಾಕ್ ತಂತ್ರಜ್ಞಾನವೂ ದುರುಪಯೋಗಗೊಳ್ಳುತ್ತಿದೆ.

ಕಾರಿನಲ್ಲಿ ಚೈಲ್ಡ್ ಲಾಕ್ ಮಾಡಿದರೆ ಚಾಲಕನ ಸಹಾಯವಿಲ್ಲದೆ ಕಾರಿನ ಬಾಗಿಲು ಪ್ರಯಾಣಿಕರಿಗೆ ಒಳಗಿನಿಂದ ತೆರೆಯುವುದು ಅಸಾಧ್ಯ.

ಇತ್ತೀಚೆಗೆ ಪುಣೆಯ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಇಬ್ಬರು ಮಹಿಳೆಯರನ್ನು ಆಫೀಸಿನ ಕಾರಿನ ಚಾಲಕ ಲಾಕ್ ಮಾಡಿ ಅಪಹರಣ ಯತ್ನ ನಡೆಸಿದ ನಂತರ ‘ಚೈಲ್ಡ್ ಲಾಕ್ ಸಿಸ್ಟಮ್’ ಮತ್ತೆ ಚರ್ಚೆಯಲ್ಲಿದೆ.

‘ಮಿರರ್ ನೌ’ ಚಾನೆಲಿನ ಫಾಯೆ ಡಿಸೋಝ ವೀಡಿಯೋ ಮೂಲಕ ಜನರ ಸುರಕ್ಷತೆಗಾಗಿ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಪ್ರಯಾಣಿಕರು ಕಾರಿನಲ್ಲಿ ಕುಳಿತುಕೊಳ್ಳುವ ಮೊದಲೇ ಕಾರಿನ ಬಾಗಿಲಲ್ಲಿರುವ ‘ಚೈಲ್ಡ್ ಲಾಕ್ ಸಿಸ್ಟಮ್’ ಕಡೆ ಗಮನ ಹರಿಸಬೇಕೆಂದು ಅವರು ಹೇಳುತ್ತಾರೆ. ಅದೇ ರೀತಿ ‘ಚೈಲ್ಡ್ ಲಾಕ್’ನ ಕಡೆ ಗಮನಹರಿಸುವಂತೆ ಸೂಚನೆಗಳನ್ನು ಎಲ್ಲಾ ಟ್ಯಾಕ್ಸಿಗಳಲ್ಲಿ ಲಗತ್ತಿಸುವುದಕ್ಕಾಗಿ ಕ್ರಮ ಕೈಗೊಳ್ಳಬೇಕು ಅಥವಾ ಟ್ಯಾಕ್ಸಿಗಳಲ್ಲಿ ‘ಚೈಲ್ಡ್ ಲಾಕ್ ಸಿಸ್ಟಮ್’ ನಿಷೇಧಗೊಳಿಸುವಂತೆ ಅವರು ಸರಕಾರವನ್ನು ಕೇಳಿಕೊಂಡರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group