ರಾಜ್ಯ ಸುದ್ದಿ

ಬಜರಂಗಿ ಭಯೋತ್ಪಾದಕರಿಂದಲೇ ದನದ ವ್ಯಾಪಾರಿ ಹುಸೇನಬ್ಬರ ಕೊಲೆ ! ಮೃತದೇಹ ಹಾಡಿಯಲ್ಲೆಸೆಯಲು ಹಿರಿಯಡ್ಕ ಪೊಲೀಸರ  ಸಹಕಾರ !!

ವರದಿಗಾರ ( ಜೂ. 3) :  ದನದ ವ್ಯಾಪಾರಿ ಜೋಕಟ್ಟೆಯ ಹುಸೇನಬ್ಬರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದ ಪೊಲೀಸರು ಭೇದಿಸಿದ್ದು, ಬಜರಂಗದಳದ ಕಿರಾತಕರಿಂದಲೇ ಹುಸೇನಬ್ಬರ ಸಾವು ಸಂಭವಿಸಿದ್ದು, ಮೃತಪಟ್ಟಾಗ ಪೊಲೀಸ್ ಜೀಪಿನಲ್ಲಿದ್ದ ಹುಸೇನಬ್ಬರ ಮೃತದೇಹವನ್ನು ಒಂದೂ ವರೆ ಕಿ ಮೀ ದೂರದ ಹಾಡಿಯಲ್ಲೆಸೆಯಲು ಹಿರಿಯಡ್ಕ ಪೊಲೀಸರೇ ಬಜರಂಗಿ ಗೂಂಡಾಗಳೊಂದಿಗೆ ಕೈಜೋಡಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಹಿರಿಯಡ್ಕ ಪೊಲೀಸ್ ಠಾಣಾ ಎಸ್ಸೈ ಡಿ ಎನ್ ಕುಮಾರ್ ಸೇರಿದಂತೆ ಇತರೆ ಇಬ್ಬರು ಪೊಲೀಸರನ್ನು ಈ ಪ್ರಕರಣದ ಕುರಿತಂತೆ ಬಂಧಿಸಲಾಗಿದ್ದು, ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದಂತಾಗಿದೆ.

ಹಿರಿಯಡ್ಕ ಎಸ್ಸೈ ಡಿ ಎನ್ ಕುಮಾರ್, ಠಾಣಾ ಜೀಪು ಚಾಲಕ ಗೋಪಾಲ್ ಗೋಪಾಲ್ ಹೆಡ್ ಕಾನ್ಸ್ಟೇಬಲ್ ಮೋಹನ್ ಕೋತ್ವಾಲ್ ಹಾಗೂ ಬಜರಂಗೀ ಭಯೋತ್ಪಾದಕರಾದ ಪೆರ್ಡೂರು ಪಕಾಲು ಚೇತನ್ ಯಾನೆ ಚೇತನ್ ಆಚಾರ್ಯ, ಅಲಂಗಾರು ಶೈಲೇಶ್ ಶೆಟ್ಟಿ, ಕೆನ್ನೆತುಬೈಲಿನ ಗಣೇಶ್ ನಾಯ್ಕರನ್ನು ಬಂಧಿಸುವುದರೊಂದಿಗೆ 10 ಮಂದಿಯನ್ನು ಇದುವರೆಗೆ ಬಂಧಿಸಿದಂತಾಗಿದೆ.

ಆರೋಪಿಗಳು ನೀಡಿದ ಮಾಹಿತಿಯಂತೆ ಪ್ರಕರಣ ನಡೆದ ದಿನ ಬೆಳಗ್ಗೆ 4 ಗಂಟೆಗೆ ದನಗಳನ್ನು ಸಾಗಿಸಿಕೊಂಡು ಬರುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಬಜರಂಗೀ ಭಯೋತ್ಪಾದಕರು ಹಿರಿಯಡ್ಕ ಪೊಲೀಸರ ಸಮಕ್ಷಮದಲ್ಲೇ ಸೀನರಬೆಟ್ಟು ಎಂಬಲ್ಲಿ ತಡೆದಿದ್ದರು. ಆ ವೇಳೆ ವಾಹನದಲ್ಲಿದ್ದ ಮೂವರು ಓಡಿ ತಪ್ಪಿಸಿಕೊಂಡಿದ್ದು, ಹಿರಿಯರಾಗಿದ್ದ ಹುಸೇನಬ್ಬರು ಬಜರಂಗಿ ಕಿರಾತಕರ ಕೈಯ್ಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪೊಲೀಸರ ಎದುರಲ್ಲೇ ಬಜರಂಗೀ ಗೂಂಡಾಗಳು ಹುಸೇನಬ್ಬರ ಮೇಲೆ ಹಲ್ಲೆ ನಡೆಸಿ, ಸ್ಕಾರ್ಪಿಯೋ ವಾಹನವನ್ನು ಧ್ವಂಸಗೊಳಿಸಿದ ನಂತರ ಹುಸೇನಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಜೀಪಿನಲ್ಲಿದ್ದ ಹುಸೇನಬ್ಬರು ಆ ವೇಳೆ ಮೃತಪಟ್ಟಿದ್ದರು. ನಂತರ ಪೊಲೀಸ್ ಠಾಣೆಗೆ ಬಂದಿದ್ದ ಬಜರಂಗದಳದ ಗೂಂಡಾಗಳಾದ ಪ್ರಸಾದ್ ಕೊಂಡಾಡಿ ಹಾಗೂ ಇತರರು ಸೇರಿಕೊಂಡು ಮೃತದೇಹವನ್ನು ಘಟನೆ ನಡೆದ ಸ್ಥಳದಿಂದ ಒಂದೂ ವರೆ ಕಿ ಮೀ ದೂರದ ಹಾಡಿಯಲ್ಲೆಸೆದು ಬಂದಿದ್ದಾರೆ. ಹುಸೇನಬ್ಬರ ಸಾವು ಪೊಲೀಸ್ ಜೀಪಿನಲ್ಲಿಯೇ ಸಂಭವಿಸಿದ್ದರೂ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡದ ಪೊಲೀಸರು ಹುಸೇನಬ್ಬರ ನಿಶ್ಚಲ ದೇಹವನ್ನು ಹಾಡಿಯಲ್ಲೆಸೆಯಲು ಬಜರಂಗೀ ಭಯೋತ್ಪಾದಕರೊಂದಿಗೆ ಪೊಲೀಸರೇ ಶಾಮೀಲಾಗಿರುವುದು ಇಡೀ ಜಿಲ್ಲೆಯಾದ್ಯಂತ ಜನರು ಪೊಲೀಸರನ್ನು ಸಂಶಯದಿಂದ ನೋಡುವಂತೆ ಮಾಡಿದೆ.  ಆರೋಪಿಗಳೆಲ್ಲರೂ ತಾವು ಮಾಡಿರುವ ಕೃತ್ಯಗಳನ್ನು ತಪ್ಪೊಪ್ಪಿಕೊಂಡಿದ್ದು, ಅದರಂತೆ ಅವರನ್ನು ಬಂಧಿಸಿದ್ದಾರೆ ಎಂದು ಈ ಪ್ರಕರಣವನ್ನು ಅತ್ಯದ್ಭುತವಾಗಿ ಭೇದಿಸಿದ ದಕ್ಷ ಅಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಈ ನಡುವೆ ‘ವರದಿಗಾರ’ ತಂಡಕ್ಕೆ ದೊರೆತ ಮೃತದೇಹ ಸಿಕ್ಕ ಸ್ಥಳದ ಚಿತ್ರಗಳನ್ನು ಗಮನಿಸಿ ಇದೊಂದು ಹೃದಯಾಘಾತದಿಂದ ನಡೆದ ಮರಣವಲ್ಲ ಎಂದು ‘ವರದಿಗಾರ’ ಅನುಮಾನ ವ್ಯಕ್ತಪಡಿಸಿತ್ತು. ಈ ಪ್ರಕರಣವನ್ನು ಎಸ್ಪಿ ಭೇದಿಸುವುದರೊಂದಿಗೆ ನಮ್ಮ ತಂಡದ ಅನುಮಾನ ನಿಜವಾಗಿದೆ.

ಎಸ್ಪಿ ಲಕ್ಷ್ಮಣ್ ನಿಂಬರಗಿ ಅಬಿನಂದನಾರ್ಹರು ; ಎಸ್ ಡಿ ಪಿ ಐ : ಪೊಲೀಸರೇ ಈ ಕೊಲೆ ಪ್ರಕರಣದಲ್ಲಿ ಬಜರಂಗಿಗಳೊಂದಿಗೆ ಶಾಮೀಲಾಗಿದ್ದರೂ ಕೂಡಾ ಯಾವುದೇ ಒತ್ತಡಗಳಿಗೆ ಬಲಿಯಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಈ ಪ್ರಕರಣದಲ್ಲಿ ಅಬಿನಂದನಾರ್ಹರು ಎಂದು ದ ಕ ಜಿಲ್ಲಾ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರು ಲಕ್ಷ್ಮಣ್ ನಿಂಬರಗಿಯವರನ್ನು ಶ್ಲಾಘಿಸಿದ್ದಾರೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ, ಈ ರೀತಿಯ ಸಮಾಜಘಾತುಕ ಶಕ್ತಿಗಳಿಗೆ ಒಂದು ಎಚ್ಚರಿಕೆಯ ಸಂದೇಶ ಕಳುಹಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ:

ದನದ ವ್ಯಾಪಾರಿ ಹುಸೇನಬ್ಬರ ನಿಗೂಢ ಸಾವು : ಘಟನಾ ಸ್ಥಳದ ಚಿತ್ರಗಳು ಸಂಶಯಗಳನ್ನು ದಟ್ಟವಾಗಿಸುತ್ತಿದೆಯೇ ?

ದನದ ವ್ಯಾಪಾರಿ ಹುಸೇನಬ್ಬರ ನಿಗೂಢ ಸಾವು : ಘಟನಾ ಸ್ಥಳದ ಚಿತ್ರಗಳು ಸಂಶಯಗಳನ್ನು ದಟ್ಟವಾಗಿಸುತ್ತಿದೆಯೇ ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group