ರಾಷ್ಟ್ರೀಯ ಸುದ್ದಿ

ಉತ್ತರಪ್ರದೇಶ; ತಬಸ್ಸುಮ್ ಹಸನ್ ಭರ್ಜರಿ ಗೆಲುವು: ಬಿಜೆಪಿಗೆ ಮುಖಭಂಗ

ವರದಿಗಾರ (ಮೇ.31):  ಕೇಂದ್ರದ ಎನ್‌ಡಿಎ ಸರ್ಕಾರವು ನಾಲ್ಕು ವರ್ಷಗಳನ್ನು ಪೂರ್ತಿಗೊಳಿಸಿದ ಬೆನ್ನಿಗೇ ನಡೆದ ಲೋಕಸಭೆಯ ನಾಲ್ಕು ಮತ್ತು ವಿವಿಧ ವಿಧಾನಸಭೆಗಳ ಹತ್ತು ಕ್ಷೇತ್ರಗಳ ಉಪಚುನಾವಣೆಯ ಬಹುತೇಕ ಸ್ಥಾನಗಳಲ್ಲಿ ಬಿಜೆಪಿ ಹೀನಾಯ ಸೋಲನ್ನನುಭವಿಸಿದೆ.

ಕೈರಾನಾ(ಉತ್ತರಪ್ರದೇಶ) ಇಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ತಬಸ್ಸುಮ್‌ ಹಸನ್‌ ವಿಜಯ ಸಾಧಿಸಿದ್ದು, ಬಿಜೆಪಿ ಮುಖಭಂಗಕ್ಕೀಡಾಗಿದೆ. ಈ ಬಾರಿ, ಸಮಾಜವಾದಿ ಪಕ್ಷ, ಕಾಂಗ್ರೆಸ್‌, ಬಿಎಸ್‌ಪಿ ಸೇರಿ ಎಲ್ಲ ವಿರೋಧ ಪಕ್ಷಗಳು ತಬಸ್ಸಮ್‌ ಅವರನ್ನು ಬೆಂಬಲಿಸಿದ್ದವು. ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಅರಳಿತ್ತು.

ಕೈರಾನ ಕ್ಷೇತ್ರದಲ್ಲಿ ಬಿಜೆಪಿಯ ಎದುರಾಳಿಯಾಗಿ ಸ್ಪರ್ಧಿಸಿದ್ದ ತಬಸ್ಸುಮ್ ಹಸನ್ ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗು ಬಿಎಸ್ಪಿ ಬೆಂಬಲ ಸೂಚಿಸುವುದರ ಮೂಲಕ ವಿಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿ ತಬಸ್ಸುಮ್ ಕಣಕ್ಕಿಳಿದಿದದರು.

ಬಿಜೆಪಿ ಸಂಸದರಾಗಿದ್ದ ಹುಕುಂ ಸಿಂಗ್ ನಿಧನದ ಬಳಿಕ ತೆರವಾಗಿದ್ದ ಕೈರಾನ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಯಾಗಿ ಹುಕುಂ ಸಿಂಗ್ ಪುತ್ರಿ ಮೃಗಾಂಕ ಅವರನ್ನು ಚುನಾವಣಾ ಕಣಕ್ಕಿಳಿಸಿತ್ತು.

ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಪಡೆದವರು

ಮಹೇಸ್ತಲಾ (‍ಪಶ್ಚಿಮ ಬಂಗಾಳ)– ಟಿಎಂಸಿ ಪಕ್ಷ : ದುಲಾಲ್‌ ಚಂದ್ರ ದಾಸ್‌

ಗೋಮಿಯಾ (ಜಾರ್ಖಂಡ್‌) – ಜೆಎಂಎಂ : ಬಬಿತಾ ದೇವಿ

ಸಿಲಿ (ಜಾರ್ಖಂಡ್‌ ) – ಜೆಎಂಎಂ : ಸೀಮಾ ದೇವಿ

ಜೋಕಿಹಾತ್‌ (ಬಿಹಾರ) – ಆರ್‌ಜೆಡಿ : ಶಹನವಾಜ್‌

ಅಂಪತಿ (ಮೇಘಾಲಯ) – ಕಾಂಗ್ರೆಸ್‌ : ಮಿಯಾನಿ ಡಿ ಸಿರಾ

ಶಾಹ್‌ಕೋಟ್‌ (ಪಂಜಾಬ್‌) – ಕಾಂಗ್ರೆಸ್‌ : ಹರ್‌ದೇವ್‌ ಸಿಂಗ್‌ ಲಡಿ

ಪಲೂಸ್‌ ಕಡೆಗಾವ್‌ (ಮಹಾರಾಷ್ಟ್ರ) – ಕಾಂಗ್ರೆಸ್‌ : ವಿಶ್ವಜೀತ್‌ ಪತಂಗರಾವ್‌

ಚೆಂಗನ್ನೂರು (ಕೇರಳ) – ಸಿಪಿಎಂ : ಸೆಜಿ ಚೆರಿಯನ್‌

ಥರಾಲಿ (ಉತ್ತರಾಖಂಡ) – ಬಿಜೆಪಿ : ಮುನ್ನಿದೇವಿ ಶಾ

ನೂರ್‌ಪುರ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷ : ನೈಮ್‌ ಉಲ್‌ ಹಸನ್‌

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group