ರಾಷ್ಟ್ರೀಯ ಸುದ್ದಿ

ಪ್ರಣಬ್ ಮುಖರ್ಜಿ ಆರೆಸ್ಸೆಸ್ ಸಭೆಗೆ ಭಾಗವಹಿಸಿದಂತೆ ಕಾಂಗ್ರೆಸ್ ತಡೆಯಬೇಕು: ಎಸ್.ಡಿ.ಪಿ.ಐ

ವರದಿಗಾರ (ಮೇ.30): ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಪ್ರಣಬ್ ಮುಖರ್ಜಿಯವರು ಜೂನ್ 7ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ವತಿಯಿಂದ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಒಪ್ಪಿಕೊಂಡಿರುವುದಾಗಿ ವರದಿಯಾಗಿದ್ದು, ಮುಖರ್ಜಿಯವರು ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸದಂತೆ ಮನವೊಲಿಸಬೇಕೆಂದು ಎಸ್‍ಡಿಪಿಐ ಕಾಂಗ್ರೆಸ್‍ನ್ನು ಆಗ್ರಹಿಸಿದೆ.

ದೇಶವನ್ನು ಕೋಮು ಆಧಾರದಲ್ಲಿ ಧ್ರುವೀಕರಣಗೊಳಿಸುತ್ತಿರುವ ಈ ಸಂದಿಘ್ನ ಸ್ಥಿತಿಯಲ್ಲಿ ಕೇಸರಿ ಪಡೆಗಳು ದ್ವೇಷ ರಾಜಕೀಯದಲ್ಲಿ ನಿರತವಾಗಿದೆ. ದೇಶದ ಬಹುಧರ್ಮೀಯ ವ್ಯವಸ್ಥೆಗೆ ಸವಾಲಾಗಿ ಕೋಮುವಾದ ಬೆಳೆದಿದೆ. 2010ರಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅಧಿವೇಶನದಲ್ಲಿ ಭಯೋತ್ಪಾದಕರು ಮತ್ತು ಆರೆಸ್ಸೆಸ್ ಸಹಭಾಗಿ ಸಂಘಟನೆಗಳಿಗಿರುವ ಸಂಪರ್ಕದ ಬಗ್ಗೆ ಯುಪಿಎ ಸರಕಾರ ತನಿಖೆ ನಡೆಸಬೇಕೆಂಬ ನಿರ್ಣಯವನ್ನು ಸ್ವಯಂ ಪ್ರಣಬ್ ಮುಖರ್ಜಿಯವರು ಮಂಡಿಸಿದ್ದರು. ಆರ್‍ಎಸ್‍ಎಸ್ ಸಂಘಟನೆಯ ವಿಶ್ವಾಸರ್ಹತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮುಖರ್ಜಿಯವರೇ ಈಗ ಅವರ ಸಭೆಗೆ ಭಾಗವಹಿಸುವುದು ಆಘಾತಕಾರಿಯಾಗಿದೆ.

ದೇಶದ ಒಟ್ಟು ಹಿತದೃಷ್ಠಿಯಲ್ಲಿ ಪ್ರಣಬ್ ಮುಖರ್ಜಿಯವರು ಈ ಸಭೆಯಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿ ಯಶಸ್ವಿ ಸಾಧಿಸಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group