ರಾಜ್ಯ ಸುದ್ದಿ

ಕೇಂದ್ರ ಸರಕಾರದ ವಿಫಲತೆಯನ್ನು ಮರೆಮಾಚುವ ಹುನ್ನಾರವೇ ಗುಂಪು ಹಿಂಸಾ ಹತ್ಯೆ- ಜಿಗ್ನೇಶ್ ಮೆವಾನಿ

ವರದಿಗಾರ-ಬೆಂಗಳೂರು: ದೇಶಾದ್ಯಂತ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯು ಕೇಂದ್ರ ಸರಕಾರದ ವಿಫಲತೆಗಳನ್ನು ಮರೆಮಾಚುವ ಹುನ್ನಾರವಾಗಿದೆ ಎಂದು ಊನ ಚಳುವಳಿಯ ನೇತೃತ್ವ ವಹಿಸಿದ್ದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಅವರು ಬೆಂಗಳೂರಿನ SDPI ರಾಜ್ಯ ಕಛೇರಿಯಲ್ಲಿ ನಡೆದ ಪ್ರಸಕ್ತ ಕರ್ನಾಟಕ ಮತ್ತು ಮುಂದಿನ ಚುನಾವಣಾ ವಿಷಯಗಳ ಕುರಿತು ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರವನ್ನು ಹಿಡಿಯಲು ಜನರ ಮುಂದೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ, 15 ಲಕ್ಷದ ಅಚ್ಚೇ ದಿನ್ ಭರವಸೆ ಹೀಗೆ ಹಲವು ರೂಪಗಳಲ್ಲಿ ಜನರನ್ನು ತನ್ನೆಡೆಗೆ ಸೆಳೆದಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಅವುಗಳೆಲ್ಲವನ್ನು ಮರೆತು ನೋಟ್ ಬ್ಯಾನ್ ಮತ್ತು ಜಿ ಎಸ್ ಟಿ ಯಂತಹಾ ಜನ ವಿರೋಧಿ ನೀತಿಗಳಿಂದ ಯುವಜನರ ಆಕ್ರೋಶವನ್ನು ಬೇರೆಡೆಗೆ ಸೆಳೆಯಲು ಹೆಣೆದ ತಂತ್ರವೇ ಗೋ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಗುಂಪು ಹಿಂಸೆ ಎಂದು ಅವರು ಹೇಳಿದ್ದಾರೆ.

ದಲಿತರು-ಮುಸ್ಲಿಮರು ಐಕ್ಯರಾಗಲು ಕರೆ

ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ದಲಿತರು ಹಾಗೂ ಮುಸ್ಲಿಮರು ಒಂದಾಗಬೇಕಾಗಿದೆ. ಹೀಗಾದರೆ ಮಾತ್ರವೇ ಸಂಘಪರಿವಾರವನ್ನು ಬುಡಸಮೇತ ಕಿತ್ತೆಸೆಯಬಹುದೆಂದು ಜಿಗ್ನೇಶ್ ಹೇಳಿದ್ದಾರೆ. ಮುಸ್ಲಿಮರು ಮತ್ತು ದಲಿತರು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಬಿರಿಯಾನಿ ಹಂಚಿದರೆ ಮಾತ್ರ ಸಾಲದು. ಐಕ್ಯತೆಯೆಂಬುವುದು ಹೃದಯಪೂರ್ವಕವಾಗಿರಬೇಕು ಎಂದು ಹೇಳಿದರು.
ಸಭೆಯಲ್ಲಿ SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಉಪಾಧ್ಯಕ್ಷ ದೇವನೂರ್ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ರಾಜ್ಯ ಸಂಚಾಲಕ ನೂರ್ ಶ್ರೀಧರ್, ಸಾಮಾಜಿಕ ಹೋರಾಟಗಾರ ಸಿರಿಮನೆ ನಾಗರಾಜ್, SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಅಲ್ಫೋನ್ಸೋ ಫ್ರಾಂಕೋ, ರಹೀಂ ಪಟೇಲ್, ಅಕ್ರಂ ಹಸನ್ ,ರಾಜ್ಯ ಸಮಿತಿ ಸದಸ್ಯರಾದ ಡಾ. ಅವಾಝ್ ಶರೀಫ್, ಎ ಎಂ ಅಥಾವುಲ್ಲಾ, ಅಮೀನ್ ಮೊಹ್ಸಿನ್, ಅನ್ವರ್ ಸಾದಾತ್ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group