ಜಿಲ್ಲಾ ಸುದ್ದಿ

ರಾಜಕೀಯ ಬಲಾಢ್ಯರ ಕೈಯಿಂದ ಅಧಿಕಾರ ಮರಳಿ ಪಡೆಯಲು ಎಸ್‍ಡಿಪಿಐ ಬಂದಿದೆ: ದೇವನೂರು ಪುಟ್ಟನಂಜಯ್ಯ

ಎಸ್‍ಡಿಪಿಐ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಚುನಾವಣಾ ಕಚೇರಿ ಉದ್ಘಾಟನೆ

ವರದಿಗಾರ (ಎಪ್ರಿಲ್.25): ದಲಿತರು ಮತ್ತು ಮುಸ್ಲಿಮರನ್ನು ರಾಜಕೀಯ ಮುಖ್ಯವಾಹಿನಿಯಿಂದ ತಡೆದಿರುವ ಇಲ್ಲಿನ ರಾಜಕೀಯ ಬಲಾಢ್ಯರ ಕೈಯಿಂದ ಅಧಿಕಾರ ಮರಳಿ ಪಡೆಯಲು ಇರುವ ಹೆಬ್ಬಾಗಿಲನ್ನು ಎಸ್‍ಡಿಪಿಐ ತೆರೆದುಕೊಟ್ಟಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಹೇಳಿದ್ದಾರೆ.

ಅವರು ಮಂಗಳವಾರ ಮೈಸೂರಿನ ಉದಗಿರಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಅಲ್ಪಸಂಖ್ಯಾತರಾದ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ಸಮುದಾಯದವರನ್ನು ಎಲ್ಲಾ ರಾಜಕೀಯ ಪಕ್ಷಗಳು ದಮನಿಸಲು ಪ್ರಯತ್ನಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಸ್‍ಡಿಪಿಐ ಅವರಿಗೆ ಆತ್ಮಸ್ಥೈರ್ಯವನ್ನು ನೀಡುತ್ತಾ, ರಾಜಕೀಯದಲ್ಲಿ ಸಬಲೀಕರಣಗೊಳಿಸುವ ಎಲ್ಲಾ ರೀತಿಯ ಕಾರ್ಯತಂತ್ರವನ್ನು, ಪ್ರಬುದ್ಧತೆಯನ್ನು ನೀಡಿ ಭದ್ರತೆಯಿರುವ ನಾಳೆಯ ದಿನಗಳಿಗಾಗಿ ಸಜ್ಜುಗೊಳಿಸುತ್ತಿದೆ. ಎಸ್‍ಡಿಪಿಐ ಯು ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ರಾಜ್ಯದಲ್ಲೆಡೆ ಶೋಷಿತರ ಧ್ವನಿಯಾಗಿ ಗುರುತಿಸಲ್ಪಟ್ಟಿರುವ ಅಬ್ದುಲ್ ಮಜೀದ್ ರನ್ನು ಬಹುಮತಗಳಿಂದ ಚುನಾಯಿಸುವುದರ ಮೂಲಕ ದೇಶದಲ್ಲೇ ನವ ಇತಿಹಾಸವನ್ನು ನಿರ್ಮಾಣ ಮಾಡಬೇಕಾಗಿದೆ. ಆ ಮೂಲಕ ಶುದ್ಧ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕಾಗಿದೆ ಎಂದು ಪುಟ್ಟನಂಜಯ್ಯ ಹೇಳಿದರು.

ಎಸ್‍ಡಿಪಿಐ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮಾತನಾಡಿ, ಜನತೆಯ ಸೇವಕನಾಗಿ ಅಬ್ದುಲ್ ಮಜೀದ್ ರನ್ನು ನರಸಿಂಹರಾಜ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಜನತೆಯ ಧ್ವನಿಯಾಗಿ ಅಬ್ದುಲ್ ಮಜೀದ್ ರನ್ನು ವಿಧಾನಸೌಧಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.

ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಜನತೆ ಬಡತನದಿಂದ ಮತ್ತು ಮೂಲಭೂತ ಹಕ್ಕುಗಳಿಂದ ನಿರಂತರವಾಗಿ ವಂಚಿಸಲ್ಪಟ್ಟು ನೋವಿನ ಬದುಕನ್ನು ಸಾಗಿಸುತ್ತಿದ್ದಾರೆ. ಕುಡಿಯಲು ನೀರು, ಸಮರ್ಪಕ ಆರೋಗ್ಯ ಕೇಂದ್ರ, ಶಾಲೆ ಮತ್ತು ಇನ್ನಿತರ ಜನತೆಯ ಮುಖ್ಯ ಬೇಡಿಕೆಗಳೇ ಇಲ್ಲದಿರುವುದು ನಿರಂತರವಾಗಿ ಆಯ್ಕೆಯಾಗುತ್ತಿರುವ ಜನಪ್ರತಿನಿಧಿಯ ನಿಷ್ಕ್ರೀಯತೆಯನ್ನು ಎತ್ತಿ ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ಜನತೆಯ ಮುಖದಲ್ಲಿ ಮಂದಹಾಸವನ್ನು ತರಲು ಅಬ್ದುಲ್ ಮಜೀದ್ ಗೆಲುವು ಈ ಕ್ಷೇತ್ರದಲ್ಲಿ ಅನಿವಾರ್ಯವಾಗಿದ್ದು ಅಬ್ದುಲ್ ಮಜೀದ್ ರನ್ನು ಚುನಾಯಿಸುವಂತೆ ಅಪ್ಸರ್ ಕೊಡ್ಲಿಪೇಟೆ ಕರೆ ನೀಡಿದರು.

ಎಸ್‍ಡಿಪಿಐ ಮೈಸೂರು ನಗರಾಧ್ಯಕ್ಷ ಆಝಾಂ ಪಾಶ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಆಲೂರು ಮಲ್ಲಣ್ಣ, ಕಾರ್ಯದರ್ಶಿ ಕೌಶನ್ ಬೇಗ್, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಕಾಪೋರೇಟರ್ ಎಸ್.ಸ್ವಾಮಿ, ಪ್ರಸನ್ನ ಚಕ್ರವರ್ತಿ, ಮೌಲನಾ ಇಸ್ಮಾಯಿಲ್, ಅಕ್ರಂ ಷರೀಫ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಎಸ್‍ಡಿಪಿಐ ಮೈಸೂರು ಜಿಲ್ಲಾ ಮಾಧ್ಯಮ ಸಂಯೋಜಕ ತಬ್ರೇಝ್ ಸೇಠ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group