Uncategorized

ಧರ್ಮದ ಆಧಾರದಲ್ಲಿ ಹೊಡೆದಾಡುವವರು ಗಡಿ ಕಾಯುವ ಯೋಧರನ್ನು ನೋಡಿ ಪಾಠ ಕಲಿಯಲಿ : ಯೋಧ ಝುಬೈರ್ ಹಳೆ ನೇರಂಕಿ

ಬಿ ಎಂ ಮಹಮ್ಮದ್ ಮದನಿ ಸ್ಮರಣಾರ್ಥ ಚೊಂಬುಗುಡ್ಡೆ ಪ್ರೇಂಡ್ಸ್, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸೌಹಾರ್ದ ರಕ್ತದಾನ ಶಿಬಿರ ಹಾಗೂ ಭಾರತ ದೇಶದ ರಕ್ಷಣೆಯ ಪಣತೊಟ್ಟ ವೀರ ಸೇನಾನಿ, ಕರಾವಳಿ ಕರ್ನಾಟಕದ ಹೆಮ್ಮೆಯ ಪುತ್ರ “ಝಭೇರ್ ಹಳೆನೇರಂಕಿ” ಇವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನೂರುಲ್ ಹುದಾ ಮದ್ರಾಸ ಚೊಂಬುಗುಡ್ಡೆ ಇದರ ಸಭಾಂಗಣದಲ್ಲಿ ಬಹಳ ಯಶಸ್ವಿಯಾಗಿ ಜರುಗಿತು.

ಸಾರ್ವಜನಿಕ ಸೌಹಾರ್ದ ಆಶಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಚೊಂಬುಗುಡ್ಡೆ ಯುವಕರ ಬಳಗ “ಚೊಂಬುಗುಡ್ಡೆ ಪ್ರೆಂಡ್ಸ್” ಹಾಗೂ ಹಲವಾರು ರಕ್ತದಾನ ಶಿಬಿರಗಳ ನೇತೃತ್ವ ವಹಿಸಿರುವ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಜಂಟಿಯಲ್ಲಿ ನಡೆದ  ಈ ಒಂದು ಸುಂದರ ಕಾರ್ಯಕ್ರಮದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮವು ಜನಮನ ಸೆಳೆಯುವಂತಿತ್ತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಝುಬೈರ್ ಹಳೆನೇರಂಕಿ ಇವರು ಕರಾವಳಿ ಕರ್ನಾಟಕದಲ್ಲಿ ಕೋಮು ಕೋಮು ಎಂದು ವಿಷ ಬಿತ್ತುವವರು, ಭಾರತ ದೇಶಕ್ಕಾಗಿ ಹಗಲಿರುಳು ಗಡಿ ಕಾಯುವ ಯೋಧರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ.  ಅಲ್ಲಿ ಯೋಧರಲ್ಲಿ ಹಲವು ಜಾತಿ ಧರ್ಮದವರಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತೇವೆ. ಈ ಸೌಹಾರ್ದ ಇಲ್ಲಿಗೂ ಅನ್ವಯಗೊಳ್ಳಲಿ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು  ಡಾ ಅಬ್ದುಲ್ ಶರೀಫ್, ಪ್ರಿನ್ಸಿಪಾಲರು, ಪಿ ಎ  ಇಂಜಿನಿಯರಿಂಗ್ ಕಾಲೇಜು ನೆರವೇರಿಸಿದರು.  ಸಿದ್ಧೀಕ್ ಅಹಸನಿ, ಖತೀಬರು ಚೆಂಬುಗುಡ್ಡೆ ಜುಮಾ ಮಸೀದಿ ದುಆ ಆಶೀರ್ವಚನಗೈದರು. ಡಾ: ಮುರಳಿ ಮೋಹನ್ ಚೊಂಟ್ಟಾರು ಅವರು ರಕ್ತದಾನದ ಕುರಿತು ಮಾಹಿತಿ ಭಾಷನ ಮಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಹಾಜಿ ಅಬ್ದುಲ್ ರಶೀದ್, ಅಧ್ಯಕ್ಷರು ಉಳ್ಳಾಲ ದರ್ಗಾ , ಡಾ  ಯು ಟಿ ಇಫ್ತಿಕಾರ್ , ರೆವ್ ಫಾದರ್ ಕುಮಾರ್ ಕೊಟಿಯನ್, ಬಾಝಿಲ್ ಡಿ ಸೋಜ, ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರು ಬ್ಲಡ್ ಡೊನರ್ಸ್ ಮಂಗಳೂರು  ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಕ್ರಿಯ ಕಾರ್ಯಕರ್ತರಾದ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಮುಸ್ತಫ  ಕೆ ಸಿ ರೋಡ್, ಸಮೀರ್ ಕಡವಿನಬಾಗಿಲು ಸೇರಿದಂತೆ ಹಲವು ಯುವಕರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕರು ರಕ್ತದಾನ ಮಾಡಿ ಸಹಕರಿಸಿದರು.ಝಹೀರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ  ವಂದಿಸಿದರು

ವರದಿ : ಬ್ಲಡ್ ಡೋನರ್ಸ್ ಮಂಗಳೂರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group