ರಾಷ್ಟ್ರೀಯ ಸುದ್ದಿ

ತ್ರಿವಳಿ ತಲಾಖಿನ ಬಗ್ಗೆ ಸುಪ್ರೀಂ ತೀರ್ಪು: ವಾಸ್ತವವೇನು?

ನವದೆಹಲಿ : ಸುಪ್ರೀಂ ಕೋರ್ಟಿನ ಪಂಚಪೀಠದ ಇಂದಿನ ತ್ರಿವಳಿ ತಲಾಖಿನ ಕುರಿತಾಗಿನ ತೀರ್ಪು ಜನ ಸಾಮಾನ್ಯರೆಡೆಯಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಮುಖ್ಯ ನಾಯಮೂರ್ತಿ ಜೆ ಎಸ್ ಖೇಹರ್ ಮತ್ತು ನ್ಯಾಯಮೂರ್ತಿ ನಝೀರ್ ಅಹ್ಮದ್ ತ್ರಿವಳಿ ತಲಾಖಿಗೆ ಸಾಂವಿಧಾನಿಕ ಮಾನ್ಯತೆ ಇದೆ ಮಾತ್ರವಲ್ಲ ಇದೊಂದು ವೈಯುಕ್ತಿಕ ಹಕ್ಕು ಎಂದು ತೀರ್ಪಿತ್ತರೆ, ಇತರೆ ಮೂರು ಮಂದಿ ನ್ಯಾಯಮೂರ್ತಿಗಳಾದ ಯು ಯು ಲಲಿತ್, ನಾರಿಮನ್ ಮತ್ತು ಜೋಸೆಫ್ ಕುರಿಯನ್ ಇದಕ್ಕೆ ತದ್ವಿರುದ್ಧ ತೀರ್ಪನ್ನು ಓದಿದರು. ಹೀಗಾಗಿ ತ್ರಿವಳಿ ತಲಾಖಿನ ಸಾಂವಿಧಾನಿಕ ಮಾನ್ಯತೆ 3-2 ಅಂತರದಲ್ಲಿ ರದ್ದಾದಂತಾಗಿದೆ.

ಹಾಗಾದರೆ ಮುಂದೇನು?

ಸದ್ಯದ ಸುಪ್ರೀಂ ತೀರ್ಪಿನ ಪ್ರಕಾರ ಮುಸ್ಲಿಂ ವೈಯುಕ್ತಿಕ ಕಾನೂನಿನಡಿಯಲ್ಲಿ ಸಂವಿಧಾನಿಕ ಸಿಂಧುತ್ವವಿದ್ದ ತ್ರಿವಳಿ ತಲಾಖನ್ನು ಆರು ತಿಂಗಳ ಮಟ್ಟಿಗೆ ಅಮಾನತಿನಲ್ಲಿರಿಸಲಾಗಿದೆ. ಈ ಆರು ತಿಂಗಳೊಳಗಾಗಿ ಕೇಂದ್ರ ಸರಕಾರ ಈ ಕುರಿತಾಗಿ ಸ್ಪಷ್ಟ ಕಾನೂನೊಂದನ್ನು ಜಾರಿಗೊಳಿಸಲುಬೇಕಾದ ಕರಡು ನೀತಿಯನ್ನು ರೂಪಿಸಬೇಕೆಂದು ನಿರ್ದೇಶನ ನೀಡಿದೆ. ಹೀಗಾಗಿ ಮುಂದಿನ ಆರು ತಿಂಗಳಲ್ಲಿ ಮುಸ್ಲಿಮರ ತ್ರಿವಳಿ ತಲಾಖಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ನಂತರ ಕೇಂದ್ರ ಸರಕಾರ ರೂಪಿಸುವ ಕಾನೂನಿನಡಿಯಲ್ಲಿ ಜಾರಿಯಲ್ಲಿರುತ್ತದೆ. ಇಲ್ಲಿ ಎಲ್ಲರೂ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕೇಂದ್ರ ಸರಕಾರದ ರೂಪಿಸುವ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದೆ ಮತ್ತು ಕೋರ್ಟ್ ನಿರ್ದೇಶನದ ಪ್ರಕಾರ ಕೇಂದ್ರ ಸರಕಾರ ಕಾನೂನು ರಚಿಸುವಾಗ ಮುಸ್ಲಿಂ ಶರಿಯಾ ಕಾನೂನು, ಮುಸ್ಲಿಂ ಸಂಘಟನೆಗಳ ಮತ್ತು ಧಾರ್ಮಿಕ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ.

ಒಟ್ಟಿನಲ್ಲಿ ತಮ್ಮ ಚುನಾವಣಾ ಪ್ರಚಾರದಲ್ಲಿ ತ್ರಿವಳಿ ತಲಾಖ್, ಸಮಾನ ಸಿವಿಲ್ ಕೋಡ್ ಮತ್ತು ಶರೀಅತ್ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಂಡಿದ್ದ ಬಿಜೆಪಿ, ಮುಂದಿನ ಹಲವು ರಾಜ್ಯಗಳ ಚುನಾವಣೆಯಲ್ಲಿ ಇಂದಿನ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡಾ ಪಕ್ಷದ ಪರವಾಗಿನ ಪ್ರಚಾರಕ್ಕೆ ಬಳಸುವುದರಲ್ಲಿ ಸಂಶಯವಿಲ್ಲ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group