ಸುಳ್ಳು ಸುದ್ದಿ ಹರಡುವ ‘ಪೋಸ್ಟ್ ಕಾರ್ಡ್’ ಸ್ಥಾಪಕನ ಬಂಧನ !

ವರದಿಗಾರ(29.03.2018): ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಕುಖ್ಯಾತವಾಗಿರುವ ಅಂತರ್ಜಾಲ ತಾಣ ‘ಪೋಸ್ಟ್ ಕಾರ್ಡ್’ (postcard.news) ಸ್ಥಾಪಕ ಇಂದು ಕರ್ನಾಟಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ‘ಪೋಸ್ಟ್ ಕಾರ್ಡ್’ ಸ್ಥಾಪಕನಾದ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಐಪಿಸಿ ಸೆಕ್ಷನ್153A, 295A ಹಾಗೂ 120B ಪ್ರಕಾರ ಬಂಧಿಸಲಾಗಿದೆ.
ಮಾರ್ಚ್ 13 ರಂದು ಶ್ರವಣಬೆಳಗೊಳಕ್ಕೆ ಬಂದಿದ್ದ ಜೈನ ಮುನಿಯೊಬ್ಬರು ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದರು. ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಈ ‘ಪೋಸ್ಟ್ ಕಾರ್ಡ್ ಸ್ಯೂಸ್’, ಜೈನ ಮುನಿಯ ಗಾಯಗೊಂಡಿದ್ದ ಚಿತ್ರವನ್ನುಪಯೋಗಿಸಿಕೊಂಡು, ‘ಜೈನ ಮುನಿಯೊಬ್ಬರು ಮುಸ್ಲಿಮ್ ಯುವಕರಿಂದ ದಾಳಿಗೊಳಗಾಗಿ ಗಾಯಗೊಂಡಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಯಾರೂ ಸುರಕ್ಷಿತರಲ್ಲ‘ ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದರು. ಇದರ ವಿರುದ್ಧ ಗಫಾರ್ ಬೇಗ್ ಎಂಬ ವ್ಯಕ್ತಿ ದೂರು ನೀಡಿದ್ದರು. ಅದೇ ರೀತಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸಿದ್ದಕ್ಕಾಗಿ ಎಫ್ ಐ ಆರ್ ದಾಖಲಾಗಿತ್ತು. ಬೆಂಗಳೂರು ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ ಈ ಕುರಿತು ಸ್ಪಷ್ಟನೆ ನೀಡಿದ್ದು, ವಿಕ್ರಮ್ ಹೆಗ್ಡೆ ಎರಡು ಪ್ರಕರಣಗಳಲ್ಲಿ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಬಂಧನಕ್ಕೊಳಪಟ್ಟಿದ್ದಾನೆ ಎಂದು ಹೇಳಿದ್ದಾರೆ
ಬಿಜೆಪಿ ಸಂಸದ ಪ್ರತಾಪ ಸಿಂಹ ಆತನ ಬಂಧನವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲೂ ಕೂಡಾ ಪ್ರತಾಪ್ ಸಿಂಹ ಅವರು, ವಿಕ್ರಮ್ ಹೆಗ್ಡೆಯನ್ನು ಸೆಕ್ಷನ್ 66A ಪ್ರಕಾರ ಬಂಧಿಸಲಾಗಿದೆಯೆಂದು ಸುಳ್ಳು ಮಾಹಿತಿಯನ್ನು ನೀಡುವ ಟ್ವೀಟ್ ಮಾಡಿದ್ದಾರೆ.
Today morning Coward Congress Govt (Karnataka) arrested @mvmeet Mahesh Vikram Hegde under unconnected IT act 66, that too by using CCB! Shame on you @INCKarnataka. pic.twitter.com/SZGUJKsfzi
— Pratap Simha (@mepratap) March 29, 2018
ಪ್ರತಾಪ್ ಸಿಂಹ, ಮಹೇಶ್ ವಿಕ್ರಮ್ ಹೆಗ್ಡೆಯನ್ನು ಸೆಕ್ಷನ್ 66A ಪ್ರಕಾರ ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆನ್ನುವುದು ಸತ್ಯಕ್ಕೆ ದೂರವಾಗಿದ್ದು, ಹೆಗ್ಡೆಯನ್ನು ಸೆಕ್ಷನ್ 154A (ಧಾರ್ಮಿಕ ಗುಂಪುಗಳ ಮಧ್ಯೆ ಧ್ವೇಷವನ್ನು ಉದ್ರೇಕಿಸುವ ಪ್ರಯತ್ನ), ಸೆಕ್ಷನ್ 295A (ಉದ್ದೇಶಪೂರ್ವಕವಾಗಿ ಭಾವನೆಗಳನ್ನು ಕೆರಳಿಸುವ ಪ್ರಯತ್ನ) ಹಾಗೂ ಸೆಕ್ಷನ್ 120B ( ಕ್ರಿಮಿನಲ್ ಪಿತೂರಿ) ಪ್ರಕಾರ ಬಂಧಿಸಲಾಗಿದೆ.
‘ಪೋಸ್ಟ್ ಕಾರ್ಡ್ ನ್ಯೂಸ್’ ಸುಳ್ಳು ಮಾಹಿತಿಗಳ ಮೂಲಕ ಜನರ ದಿಕ್ಕು ತಪ್ಪಿಸಿ, ಆ ಮೂಲಕ ಬಿಜೆಪಿಗೆ ನೆರವಾಗಿವ ಕಾರ್ಯವನ್ನು ಮಾಡುತ್ತಿತ್ತು. ಕಳೆದ ನವಂಬರ್ ನಲ್ಲಿ ಇದರ ಮುಖ್ಯಸ್ಥರ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸಿದ್ದರ ಕುರಿತು ಎಫ್ ಐ ಆರ್ ದಾಖಲಾಗಿತ್ತು. ಬಿಜೆಪಿಯ ಹಿರಿಯ ನಾಯಕರೇ ಈ ‘ಫೇಕ್ ಸುದ್ದಿಗಳ ಫ್ಯಾಕ್ಟರಿ’ಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದು ಮಹತ್ವದ ಅಂಶವಾಗಿದೆ. ‘ಪೋಸ್ಟ್ ಕಾರ್ಡ್ ನ್ಯೂಸ್’ ಬಿಜೆಪಿಯೇತರ ರಾಜ್ಯಗಳನ್ನು ಅದರಲ್ಲೂ ಮುಖ್ಯವಾಗಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳನ್ನು ಗುರಿಯಾಗಿಸಿ ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿತ್ತು. ಈ ಸುಳ್ಳು ಸುದ್ದಿಗಳ ತಾಣದ ಸ್ಥಾಪಕರಿಬ್ಬರೂ ಕನ್ನಡಿಗರಾಗಿದ್ದು, ಬಿಜೆಪಿಯ ಹಲವು ನಾಯಕರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಬಿಜೆಪಿ ಶಾಸಕ, ಸಂಸದರೇ ಇವರ ಜಾಲತಾಣಕ್ಕೆ ಪ್ರಚಾರಕರು! ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂಧನಕ್ಕೊಳಗಾದ ಹೆಗ್ಡೆಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ ಎನ್ನುವುದು ಇನ್ನೊಂದು ಆಘಾತಕಾರಿ ವಿಚಾರವಾಗಿದೆ.
ಇವರಿಬ್ಬರೆಂದರೆ ವಿರೋಧಿಗಳು ಬೆಚ್ಚುತ್ತಾರೆ, ಏಕೆಂದರೆ ….https://t.co/e47cSNyep6
ಹ್ಯಾಟ್ಸಾಪ್ @mvmeet & @vivekshettym pic.twitter.com/eNYYtLWuew
— Pratap Simha (@mepratap) September 2, 2017
