ವಿದೇಶ ಸುದ್ದಿ

ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಕಲ್ಲಡ್ಕದ ಹಿಂದೂ ಯುವಕನ ಬಿಡುಗಡೆಗೆ ಸಹಕರಿಸಿದ ಇಂಡಿಯನ್ ಸೋಶಿಯಲ್ ಫೋರಂ ಹಾಗೂ ರಿಯಾಝ್ ಫರಂಗಿಪೇಟೆ

ಬಂಟ್ವಾಳ : ಮೂರುತಿಂಗಳ ಹಿಂದೆ  ಸೌದಿ ಅರೇಬಿಯಾದ ಖಮೀಸ್ ಮುಷಾಯತ್ ಎಂಬಲ್ಲಿಗೆ ಉದ್ಯೋಗಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿಯ ಸುಕುಮಾರ್ ಶೆಟ್ಟಿಗಾರ್ ಎಂಬವರಿಗೆ ಅವರ ಮಾಲಕನು ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದನು. ಈ ವಿಚಾರವನ್ನು ಸುಕುಮಾರನು ತನ್ನ ಗೆಳೆಯರೊಂದಿಗೆ ಫೋನು ಮೂಲಕ ತಿಳಿಸಿದ್ದರು. ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತ ಶಾಕಿರ್ ಹಕ್ ನೆಲ್ಯಾಡಿ ಎಂಬವರು ತನ್ನ  ಫೇಸ್ಬುಕ್ ವಾಲ್ ನಲ್ಲಿ ಪ್ರಸಾರ ಮಾಡಿದ್ದರು. ಇದನ್ನು ಮನಗಂಡು ಮುಕ್ತ ಮನಸ್ಸಿನಿಂದ ಏನಾದರೂ ಮಾಡಿ ಸಹಾಯ ಮಾಡಬೇಕೆಂದು ನಿರ್ಧರಿಸಿದ ಎಸ್ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿಯೂ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ರಿಯಾಝ್ ಫರಂಗಿಪೇಟೆ ಯವರು ಅನಿವಾಸಿ ಭಾರತೀಯ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫೋರಮ್ ಇದರ ಅಧ್ಯಕ್ಷರಾದ ಹಾಗೂ  ಇಂಡಿಯನ್ ಕಾನ್ಸುಲೇಟ್  ಸಮಿತಿಯ ಸದಸ್ಯರಾದ ಹನೀಪ್ ಮಂಜೇಶ್ವರ ಹಾಗೂ  ಸಕ್ರಿಯ ಕಾರ್ಯಕರ್ತರಾದ ತನ್ವೀರ್ ಮೈಂದಾಳರವರಿಗೆ ವಿಷಯ ತಿಳಿಸಿ ಈ ಬಗ್ಗೆ ಸಹಕರಿಸುವಂತೆ ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಸಮಾಜ ಸೇವಕರ ತಂಡವು ಮಾರ್ಚ್ 17 ರಿಂದ  ನಿರಂತರವಾದ ಪ್ರಯತ್ನ ಮತ್ತು ಕಾನೂನಾತ್ಮಕವಾದ ಪ್ರಕ್ರಿಯೆಯ ಮೂಲಕ ಕೊನೆಗೂ ಸುಕುಮಾರ್ ಕಲ್ಲಡ್ಕ ರವರನ್ನು ಸಂಕಷ್ಟದಿಂದ ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ

 

ಇಂಡಿಯನ್ ಸೋಶಿಯಲ್ ಫೋರಂ  ಪದಾದಿಕಾರಿಗಳು   ಸುಕುಮಾರ್ ರವರನ್ನು ಸಂಪರ್ಕಿಸಿದಾಗ ಸೌದಿ‌ಮಾಲಕ ದೈಹಿಕವಾಗಿ ಹಲ್ಲೆ ನಡೆಸಿರುವುದು ತಿಳಿದು ಕೂಡಲೆ  ಸ್ಥಳಕ್ಕೆ ತಲುಪಿ, ಅವರನ್ನು ಆಸ್ಪತ್ರೆ ಗೆ  ಸೇರಿಸಿ ಅವರ ಆಸ್ಪತ್ರೆ ವೆಚ್ಚವನ್ನು ಕೂಡಾ  ಭರಿಸಿರುತ್ತಾರೆ ಮತ್ತು   ಊರಿಗೆ  ತಲುಪುವ ವಿಮಾನಯಾನ‌ ಟಿಕೆಟ್ ವ್ಯವಸ್ಥೆ  ಮಾಡಿ ಸುಕುಮಾರ್ ರವರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಪ್ರಕ್ರಿಯೆಯಲ್ಲಿದೆ . ಈ ಮಧ್ಯೆ ರಿಯಾಝ್ ಫರಂಗಿಪೇಟೆ ಯವರು ಸುಕುಮಾರ್ ಕಲ್ಲಡ್ಕ ಇವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನೂ ಹೇಳಿರುತ್ತಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group