ರಾಷ್ಟ್ರೀಯ ಸುದ್ದಿ

‘ಮೋದಿ ಮುಕ್ತವಾದರೆ, ನಮಗೆ ಮೂರನೇ ಬಾರಿ ಸ್ವಾತಂತ್ರ್ಯ ಸಿಕ್ಕಂತೆ’:ರಾಜ್‌ ಠಾಕ್ರೆ

ಮೋದಿ ಮುಕ್ತ ಭಾರತಕ್ಕೆ ಪ್ರತಿಪಕ್ಷಗಳು ಒಂದಾಗಲು ರಾಜ್‌ ಠಾಕ್ರೆ ಕರೆ

ವರದಿಗಾರ (ಮಾ.19): 2019ರಲ್ಲಿ ದೇಶದಲ್ಲಿ ಮೋದಿ ಮುಕ್ತ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಕರೆ ನೀಡಿದ್ದಾರೆ.

ಮುಂಬೈಯ ಶಿವಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಾ, ‘ಭಾರತ 1947ರಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ಗಳಿಸಿತು. 1977ರಲ್ಲಿ ಎರಡನೇ ಬಾರಿಗೆ ಸ್ವಾತಂತ್ರವಾಯಿತು(ತುರ್ತು ಪರಿಸ್ಥಿತಿ ನಂತರದ ಚುನಾವಣೆ), 2019ರಲ್ಲಿ ದೇಶ ಮೋದಿ ಮುಕ್ತವಾದರೆ, ನಮಗೆ ಮೂರನೇ ಬಾರಿ ಸ್ವಾತಂತ್ರ್ಯ ಸಿಕ್ಕಂತೆ’ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ‘ಕಾಂಗ್ರೆಸ್‌ ಮುಕ್ತ ಭಾರತ’ ಘೋಷಣೆಯನ್ನು ಸೇರಿದ್ದ ಜನರಿಗೆ ನೆನಪಿಸುತ್ತ, ‘ದೇಶವನ್ನು ಮೋದಿ ಮುಕ್ತ ಮಾಡಲು ಎಲ್ಲ ವಿರೋಧ ಪಕ್ಷಗಳು ಒಂದಾಗಿ ಎನ್‌ಡಿಎ ಸರ್ಕಾರದ ವಿರುದ್ಧ ಎದ್ದು ನಿಲ್ಲಬೇಕಾಗಿದೆ ಎಂದು ಇದೇ ಸಂದರ್ಭ ಅವರು ಕರೆ ನೀಡಿದ್ದಾರೆ. ‘ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಈಡೇರಿಸಲಾಗದ ಭರವಸೆಗಳಿಂದ ದೇಶದ ಜನರು ರೋಸಿ ಹೋಗಿದ್ದಾರೆ’ ಎಂದರು.

‘ಮೋದಿ ಸರ್ಕಾರ ಮಾಡಿದ ನೋಟು ಅಮಾನ್ಯೀಕರಣವನ್ನು ತನಿಖೆಗೆ ಒಳಪಡಿಸಿದ್ದೆ ಆದಲ್ಲಿ, ಸ್ವಾತಂತ್ರ್ಯ ನಂತರದ ಬಹುದೊಡ್ಡ ಹಗರಣ ಹೊರಬರಲಿದೆ’ ಎಂದು ಅವರು ಆರೋಪಿಸಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group