ಜಿಲ್ಲಾ ಸುದ್ದಿ

ಚಿಕ್ಕಬಳ್ಳಾಪುರ: ಸಣ್ಣ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಮಟ್ಟದ ರಾಜಕೀಯ!

ಚಿಕ್ಕಬಳ್ಳಾಪುರ/ಗುಡಿಬಂಡೆ : ತಿರುಮಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ಕಳೆದೊಂದು ವಾರದಿಂದ ಜಿದ್ದಾ ಜಿದ್ದಿಯಾಗಿದ್ದ ಅಧ್ಯಕ್ಷ ಸ್ಥಾನ ಸೋಮವಾರ ನಡೆದ ಚುನಾವಣೆಯಲ್ಲಿ ನರಸಮ್ಮ-7 ಮತಗಳು ಮತ್ತು ಮಹದೇವಪ್ಪ-8 ಮತಗಳು ಪಡೆದಿದ್ದು ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ತಿರುಮಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಒಂದು ಮತದ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ತಿಳಿಸಿದರು.

ತಾಲ್ಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜ 25. ರಂದು ಹಿಂದಿನ ಅಧ್ಯಕ್ಷ ರಾಮಾಂಜಿ ರಾಜಿನಾಮೆ ನೀಡಿದ್ದರು. ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯರ್ರಲಕ್ಕೇನಹಳ್ಳಿ ನರಸಮ್ಮ ಮತ್ತು ಸಿಪಿಎಂ ಬೆಂಬಲಿತ ಅಭ್ಯರ್ಥಿ ತಿರುಮಣಿ ಮಹದೇವಪ್ಪ ನಾಮ ಪತ್ರಗಳನ್ನು ಸಲ್ಲಿಸಿದ್ದರು. ಒಟ್ಟು 17 ಸದಸ್ಯರಿದ್ದು,ಇದರಲ್ಲಿ ಎರಡು ಸಿಪಿಎಂ ಬೆಂಬಲಿತ ಅಭ್ಯರ್ಥಿಗಳಾದ ದಿನ್ನಹಳ್ಳಿ ಭಾಗ್ಯಮ್ಮ ಮತ್ತು ತಿರುಮಣಿ ವೆಂಕಟಲಕ್ಷ್ಮಮ್ಮ ಗೈರು ಹಾಜರಾಗಿದ್ದರು. ಇನ್ನು 15 ಸದಸ್ಯರು ಹಾಜರಿದ್ದು ಇದರಲ್ಲಿ ಮಹದೇವಪ್ಪ ಪರವಾಗಿ 8 ಮತಗಳು ಮತ್ತು ನರಸಮ್ಮ ಪರವಾಗಿ 7 ಮತಗಳು ಚಲಾವಣೆಯಾಗಿದ್ದು, ಒಂದೇ ಒಂದು ಮತದ ಅಂತರದಿಂದ ಮಹದೇವಪ್ಪ ಜಯಗಳಿಸಿದರು.

ಪ್ರವಾಸ ಕರೆದುಕೊಂಡು ಹೋದರೂ ಮತ ಹಾಕದ ಸದಸ್ಯರು

ಯರ್ರಲಕ್ಕೇನಹಳ್ಳಿ ನರಸಮ್ಮ ಎಂಬುವರ ಪರವಾಗಿ ಕಾಂಗ್ರೆಸ್ ಬೆಂಬಲಿಗರಾದ 9 ಸದಸ್ಯರನ್ನು ಒಂದು ವಾರ ಕಾಲ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಪ್ರವಾಸದಿಂದ ನೇರವಾಗಿ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಕರೆದುಕೊಂಡು ಬಂದಿದ್ದು, ಕೊನೆಯ ಗಳಿಗೆಯವರೆಗೂ ಎಲ್ಲಾ ಕಾಂಗ್ರೆಸ್ ಮುಖಂಡರು ಸಂತಸದಿಂದ ಇದ್ದರು, ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿಗರಾದ ಸದಸ್ಯರು ಸಿಪಿಎಂ ಅಭ್ಯರ್ಥಿಯ ಪರವಾಗಿ ಮತ ನೀಡಿದ್ದು, ಒಂದೇ ಒಂದು ಮತದಿಂದ ಸೋತ ನರಸಮ್ಮ ಪ್ರವಾಸಕ್ಕೆ ಬಂದಿದ್ದ ಸದಸ್ಯರ ವಿರುದ್ಧ ಆಕ್ರೊಶಗೊಂಡು ನೋವಿನಿಂದ ಮನೆಗೆ ವಾಪಸ್ಸಾದರು.

ಕಾಂಗ್ರೆಸ್ ಮುಖಂಡರಿಗೆ ಮುಖಭಂಗ :

ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು 9 ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಎಲ್ಲರು ಅವರ ಪರವಾಗಿಯೇ ಇದ್ದಾರೆ ಹಾಗೂ ಸಿಪಿಎಂ ಪಕ್ಷದ ಇಬ್ಬರು ಗೈರು ಹಾಜರಿದ್ದಾರೆ, ಕಡಾಕಂಡಿತವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆಂದು ತಾಲ್ಲೂಕಿನ ಕಾಂಗ್ರೇಸ್‍ನ ಪ್ರಮುಖ ಮುಖಂಡರು ಪಟಾಕಿ, ಹೂವಿನ ಹಾರಗಳು ತೆಗೆದುಕೊಂಡು ಸಂಭ್ರಮಿಸಬೇಕೆಂದು ತಂದಿದ್ದು, ಆದರೆ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದ 5 ನಿಮಿಷಕ್ಕೆ ಎಲ್ಲಾ ಕಾಂಗ್ರೇಸ್ ಮುಖಂಡರಿಗೆ ಮುಖಭಂಗವಾಗಿ ನೀರಸದಿಂದ ಹೊರಟು ಹೋದರು.

ಸಿಪಿಎಂ ನಿಂದ ಸಂಭ್ರಮಾಚಾರಣೆ :

ಚುನಾವಣಾ ನಡೆಯುವ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಕೆಲವೇ ಕೆಲವು ತಾಲ್ಲೂಕು ಮುಖಂಡರು ಮಾತ್ರ ಇದ್ದರು. ಸಿಪಿಎಂ ಪಕ್ಷ ಗೆಲುವು ಸಾಧಿಸಿದೆ ಎಂದು ತಿಳಿದ ಕೂಡಲೇ ಆಗಮಿಸಿದ ಸಿಪಿಎಂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ವರದಿ : ರಾಮಾಂಜಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group