ಸುತ್ತ-ಮುತ್ತ

ಬ್ಲಡ್ ಡೋನರ್ಸ್ ಸಹಯೋಗದೊಂದಿಗೆ ಬೆಂಗ್ರೆಯಲ್ಲಿ ಯಶಸ್ವಿಯಾದ ರಕ್ತದಾನ ಶಿಬಿರ

ವರದಿಗಾರ (ಮಾ 12) : ಕಸಬ ಬೆಂಗ್ರೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ದಿನಾಂಕ 11- 3-2018. ರಂದು ನಡೆಯಿತು

ಈ ಶಿಬಿರವನ್ನು ಉದ್ಘಾಟಿಸಿ ಮಾತಾಡಿದ ಬೆಂಗ್ರೆ ಮಸೀದಿ ಖತೀಬರಾದ ಅಬ್ದುಲ್ಲಾ ರಹ್ಮಾನಿ ಬಾಂಬಿಲ ಇವರು ರಕ್ತದಾನವು ಅತ್ಯಂತ ಶ್ರೇಷ್ಠದಾನವೂ ಆಗಿದೆ ಮತ್ತು ರಕ್ತಕ್ಕೆ ಸಮಾನಾಗಿ ಯಾವುದೇ ದಾನವೂ ಇರಲಾರದು. ಅದೂ ಅಲ್ಲದೆ ರಕ್ತವನ್ನು ಗುಂಪುಗಳಾಗಿ ವಿಂಗಡಿಸಿದ್ದಾರೆ ಹೊರತು ಜಾತಿ ಆದಾರದ ಮೇಲಲ್ಲ. ಹಿಂದೂ ಧರ್ಮದವರ ರಕ್ತ ಮುಸಲ್ಮಾನರಿಗೂ,ಮುಸಲ್ಮಾನರ ರಕ್ತ ಹಿಂದೂಗಳಿಗೂ ನೀಡುತ್ತಾರಾದರೆ ಮತ್ತೆ ರಕ್ತಕ್ಕಿಲ್ಲದ ಜಾತಿ ನಮ್ಮ ಮನಸ್ಸಲ್ಲೂ ಇರಬಾರದು ಎಂದು ಹೇಳುತ್ತಾ ಒಂದು ಉತ್ತಮ ಉದಾಹರಣೆಯಾಗಿ ಸೊಳ್ಳೆ ರಕ್ತ ಹೀರಲೆಂದೇ ಬದುಕುತ್ತೇ ಆದರೆ ಅದು ಜಾತಿ ನೋಡಿ ರಕ್ತ ಹೀರಲ್ಲ ಬದಲಾಗಿ ಅದು ರಕ್ತವನ್ನು ಮಾತ್ರ ನೋಡುತ್ತೇ ಎಂದು ಹೇಳಿದರು

ಅದೇ ರೀತಿ ಅಧ್ಯಕ್ಷತೆ ವಹಿಸಿದ ಮಾನ್ಯ ಶಾಸಕರಾದ ಲೋಬೋರವರು ರಕ್ತದ ಬೆಲೆ ಅರಿಯಬೇಕಾದರೆ ಸ್ವತಹಾ ನಮಗೂ ರಕ್ತದ ಅವಶ್ಯಕತೆ ಬೀಳಬೇಕು. ಅವಾಗಲೇ ರಕ್ತದ ಮಹತ್ವ ಅರಿಯಲು ಸಾಧ್ಯ. ಅದೇ ರೀತಿ ರಕ್ತದಾನ ಮಾಡಲು ಮನಸ್ಸಿದ್ದು ರಕ್ತದಾನ ಮಾಡಲಾಗದ ವಯಸ್ಕರು ಹಾಗೂ ಅನಾರೋಗ್ಯವಂತರ ನಡುವೆ ರಕ್ತದಾನ ಮಾಡುವ ಭಾಗ್ಯ ಸಿಗುವ ಆರೋಗ್ಯವಂತ ಯುವಕರೇ ಭಾಗ್ಯವಂತರು ಎಂದು ನುಡಿದರು

ಮುಂದಕ್ಕೆ ಮಾತಾಡಿದ ನೂತನ ಉಪ ಮೇಯರ್ ಆದಂತ ಮಾನ್ಯ ಮುಹಮ್ಮದ್ ರವರು ಮಾತಾಡುತ್ತಾ, ರಕ್ತದಾನದಂತ ಶಿಬಿರಗಳನ್ನು ಆಯೋಜಿಸುವುದರಿಂದ ನಾಡಿನಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಸಾದ್ಯವಾಗುತ್ತೆ ಎಂದರು. ಅದೇ ರೀತಿ ಸಂಘಟಕರ ಪರಿಶ್ರಮದ ಫಲವಾಗಿ ನೂರಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಯಾಗಿಸಿದರು

ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ಲಾ ರಹ್ಮಾನಿ ಬಾಂಬಿಲ ಖತೀಬರು ಬೆಂಗ್ರೆ ಜುಮ್ಮಾ ಮಸೀದಿ ,  ಅಧ್ಯಕ್ಷತೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧ್ಯಕ್ಷರಾದ MLA ಲೋಬೊ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ಮೇಯರ್ ಮುಹಮ್ಮದ್, ಪೋಲೀಸ್ ಇನ್ಸ್ಪೆಕ್ಟರ್ ರಫೀಕ್, ಬೆಂಗರೆ SDPI ಸಂಚಾಲಕರಾದ ಮುನೀಬ್,  ಬೆಂಗರೆ PFI ಯ ಅಧ್ಯಕ್ಷರಾದ ಆಸಿಪ್, Kasaba Social Group ಅಧ್ಯಕ್ಷರಾದ ಹಮಿದಾಕ, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಲತೀಪ್ ಕಂದಕ್,  ಜಮಾಅತ್ ಅದ್ಯಕ್ಷರಾದ ಅಸ್ಲಾಂ, ನೌಷಾದ್ DYFI, ಮುಸ್ತಫಾ ಕೆಸಿ ರೋಡ್ ಜೊತೆ ಕಾರ್ಯದರ್ಶಿ ಬ್ಲಡ್ ಡೋನರ್ಸ್ ಮಂಗಳೂರು ಮುಂತಾವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಪೀಕ್ ಅಜ್ಜಾವರ ವಂದಿಸಿದರು


ವರದಿ : ಮುಝಮ್ಮಿಲ್ ಷಾ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group