ಜಿಲ್ಲಾ ಸುದ್ದಿ

ಮಹಿಳೆಯರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣದತ್ತ ಒತ್ತುಕೊಡಬೇಕು: ಯಾಸ್ಮಿನ್ ಫಾರೂಖಿ

ವುಮೆನ್ ಇಂಡಿಯಾ ಮೂವ್‍ಮೆಂಟ್ (ವಿಮ್) ವತಿಯಂದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮ

ಮೈಸೂರು (ಮಾ.08): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಸ್.ಡಿ.ಪಿ.ಐ ಮಹಿಳಾ ಘಟಕ ವುಮೆನ್ ಇಂಡಿಯಾ ಮೂವ್‍ಮೆಂಟ್ (ವಿಮ್) ವತಿಯಂದ ಉದಯಗಿರಿಯ ಸಫಾ ಪಂಕ್ಷನ್ ಹಾಲ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 
 
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವುಮೆನ್ ಇಂಡಿಯಾ ಮೂವ್‍ಮೆಂಟ್ (ವಿಮ್) ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಫಾರೂಖಿ ಜೈಪುರ್, ಮಹಿಳೆಯರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣದತ್ತ ಒತ್ತುಕೊಡಬೇಕಾದ ಅವಶ್ಯಕತೆಯಿದೆ. ಇಲ್ಲದೇ ಹೋದಲ್ಲಿ ಮಹಿಳೆಯರ ಮೇಲಿನ ಶೋಷಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ರಾಜಕೀಯ ಸಬಲೀಕರಣವು ಮಹಿಳೆಯರಿಗೆ ನ್ಯಾಯ ಮತ್ತು ತಮ್ಮ ಮೂಲಭೂತ ಹಕ್ಕಗಳನ್ನು ಗಳಿಸಲು ಸಾಧ್ಯವೆಂದು ಅವರು ಹೇಳಿದರು. 
 
ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಡಾ. ಅಸ್ಮಾ ಝೆಹ್ರಾ ಮಾತನಾಡಿ, ಪ್ಯಾಶಿಸ್ಟ್ ಸರಕಾರವು ದೇÉಶದ ಜ್ವಲಂತ ಸಮಸ್ಯೆಯನ್ನು ಪರಿಹರಿಸುವ ಬದಲು ತಮ್ಮ ಸ್ವಾರ್ಥ ಹಿತಾಸಕ್ತಿ ಹಾಗೂ ಧಾರ್ಮಿಕ ಸ್ವಾತಂತ್ರ್ಯದಂತಹ ಸೂಕ್ಷ ವಿಚಾರಗಳತ್ತ ತಲೆ ಹಾಕುತ್ತಿರುವುದು ವಿಪರ್ಯಾಸ. ಇದರಿಂದ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಮುಸ್ಲಿಂ ವ್ಯಯಕ್ತಿಕ ಕಾನೂನು ಬಗ್ಗೆ ಸರಕಾರದ ಮಧ್ಯ ಪ್ರವೇಶªದ ವಿರುದ್ಧ ಮುಸ್ಲಿಂ ಸಮುದಾಯ ಹೋರಾಟವನ್ನು ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು. 
 
ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್‍ಡಬ್ಲ್ಯೂಎಫ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಸಿರಾಜ್ ಮಾತನಾಡುತ್ತಾ, ದೇಶದಲ್ಲಿ ಫ್ಯಾಶಿಸ್ಟ್ ನಿಲುವು ಸ್ರೀಯರನ್ನು ಕೆಳಮಟ್ಟದಲ್ಲಿರುವಂತೆ ಹಾಗೂ ವ್ಯಾಪಾರದ ಸರಕಾಗಿ ಪರಿಗಣಿಸಿದೆ. ದೇಶದಲ್ಲಿರುವ ಹಿಂದುತ್ವ ಫ್ಯಾಶಿಸಂ ಮನುವಾದವು ಮಹಿಳಾ ವಿರೋಧಿ ನಿಲುವನ್ನು ಹೊಂದಿದೆ ಎಂದು ಅವರು ಹೇಳಿದರು. 
 
ಫ್ಯಾಶಿಸಂ ಎಂದೂ ಮಾನವ ವಿರೋಧಿ ಸಿದ್ಧಾಂತವಾಗಿದ್ದು, ಮಹಿಳೆಯರು ಎಚ್ಚೆತ್ತುಕೊಳ್ಳುವ ಮೂಲಕ ಈ ಸಿದ್ಧಾಂತವನ್ನು ಎದುರಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಆರೆಸ್ಸೆಸ್ ಪ್ರೇರಿತ ಕೋಮುಗಲಭೆಗಳ ಸಮಯದಲ್ಲಿ ಮುಸ್ಲಿಂ, ಕ್ರೈಸ್ತ, ದಲಿತರು ಮತ್ತು ಆದಿವಾಸಿಗಳು ಪ್ರಮುಖ ಗುರಿಯಾಗಿರುತ್ತಾರೆ. ಅಲ್ಲದೆ ಅವರ ವಿರುದ್ಧ ಮಾತನಾಡುವ ಎಲ್ಲಾ ಶಕ್ತಿಗಳನ್ನು ತುಳಿಯಲಾಗುತ್ತಿದೆ ಎಂದು ಹೇಳಿದರು. 
 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಷಣ ಮಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡುತ್ತಾ, ದೇಶದಲ್ಲಿ ವರದಕ್ಷಿಣೆ ಎಂಬ ಪಿಡುಗಿನಿಂದ ಅತಿಹೆಚ್ಚು ಮಹಿಳೆಯರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಸಂಪೂರ್ಣ ಮದ್ಯಪಾನ ನಿಷೇಧ ಮತ್ತು ವರದಕ್ಷಿಣೆ ನಿರ್ಮೂಲನೆಯಿಂದ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯ. ಈ ಎರಡು ಪಿಡುಗುಳನ್ನು ತೊಡೆದು ಹಾಕಿ ಮಹಿಳೆಯರಿಂದ ಗೌರವ ಕಾಪಾಡಬೇಕೆಂದು ಅವರು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ನೀತಿ-2016 ಎಂಬ ನೀತಿಯಿದ್ದರೂ ಅದರ ಆಶಯಗಳು ಪಾಲನೆಯಾಗುತ್ತಿಲ್ಲ ಎಂದು ಅಬ್ದುಲ್ ಮಜೀದ್ ವಿಷಾದ ವ್ಯಕ್ತಪಡಿಸಿದರು. ರಾಜಕೀಯ ಪಕ್ಷಗಳು, ಜನಪರ ಹೋರಾಟಗಾರರು ಮತ್ತು ನಾಗರಿಕ ಸಮಾಜವು ರಾಷ್ಟ್ರೀಯ ನೀತಿಯ ಆಶಯಗಳನ್ನು ಜಾರಿಗೆ ತರುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸಬೇಕೆಂದು ಇದೇ ಸಂದರ್ಭ ಅವರು ಕರೆ ನೀಡಿದರು.
ಎಸ್.ಡಿ.ಪಿ.ಐ ಯು ಹೆಣ್ಣು ಭ್ರೂಣ ಹತ್ಯೆಯನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದು, ಮಹಿಳಾ ತಾರತಮ್ಯ ನೀತಿಯನ್ನು ಕೊನೆಗೊಳಿಸುವಂತೆ ಆಗ್ರಹಿಸುತ್ತದೆ. ಅದಲ್ಲದೆ ಆರೋಗ್ಯ, ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಮಹಿಳಾ ಸಬಲೀಕರಣಕ್ಕೆ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತದೆ ಮತ್ತು ಮಹಿಳೆಯರಿಗೆ ಗೌರವಯುತ ಜೀವನವನ್ನು ಖಾತರಿಪಡಿಸಲು ಎಸ್.ಡಿ.ಪಿ.ಐ ಕಠಿ ಬದ್ಧವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ  ವುಮೆನ್ ಇಂಡಿಯಾ ಮೂವ್‍ಮೆಂಟ್ ನ ರಾಜ್ಯ ಉಪಾಧ್ಯಕ್ಷೆ ಸಬೀರಾ ಬೇಗಂ, ನ್ಯಾಯವಾದಿ ಹೇಮಲತಾ, ಸೈಂಟ್ ಮೆರೀನಾ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಶಹತಾಜ್, ನ್ಯಾಷನಲ್ ವುಮೆನ್ಸ್ ಫ್ರಂಟ್  ಜಿಲ್ಲಾಧ್ಯಕ್ಷೆ ಝರೀನಾ ಬಾನು, ಎಸ್.ಡಿ.ಪಿ.ಐ ಮೈಸೂರು ಜಿಲ್ಲಾಧ್ಯಕ್ಷ ಅಝಾಂ ಪಾಶ, ನ್ಯಾಯವಾದಿ ಅಸ್ಮ ಮೈಸೂರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಮತ್ತಿತರು ಉಪಸ್ಥಿತರಿದ್ದರು. 
ಫೌಝಿಯಾ ಬೇಗಂ ಸ್ವಾಗತಿಸಿ, ಫರ್ಹಾ ಫಾರೂಖಿ ಕಾರ್ಯಕ್ರಮ ನಿರೂಪಿಸಿ, ಸಾಮಿಯಾ ಬಾನು ವಂದಿಸಿದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group