ವರದಿಗಾರ(06-03-2018): ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾದಲ್ಲಿ ಬಿಜೆಪಿಯ ಐತಿಹಾಸಿಕ ಚುನಾವಣಾ ವಿಜಯದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ವರದಿಯಾಗಿದೆ.
ರಾಜ್ಯದ ಹಲವೆಡೆಗಳಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತರು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಬಿಶಾಲ್ ಘರ್, ಖೋವೈ, ಮೋಹನ್ ಪುರ, ಸಬ್ರೂಮ್, ಖೋಮ್ಲಂಗ್, ಮೆಲಾಘರ್, ಜಿರಾನಿಯಾ, ಬೆಲೋನಿಯಾ ಹಾಗೂ ರಾಮನಗರ ಸೇರಿದಂತೆ ರಾಜಧಾನಿ ಅಗರ್ತಲಾದಲ್ಲಿ ಹಲವೆಡೆ ಹಿಂಸಾಚಾರಗಳು ವರದಿಯಾಗಿವೆ.
BJP-IPFT terror gripped Tripura.
Attacks-Vandalising are continued at Pramodenagar, Takarjala. @cpimspeak @SitaramYechury @CPIM_WESTBENGAL @PTI_News @ANI @aajtak @htTweets @ndtv pic.twitter.com/sjkUubxwCW— CPI(M) West Tripura (@CPIMWestTripura) March 4, 2018
BJP-IPFT terror gripped Tripura. CPI(M) Local Office vandalised at East Ramchandraghat, Khowai @cpimspeak @SitaramYechury @CPIM_WESTBENGAL pic.twitter.com/xOfLzfWTDA
— CPI(M) West Tripura (@CPIMWestTripura) March 4, 2018
BJP-IPFT terror gripped Tripura. House of Com. Ganesh Debbarma burned by the goons of BJP-IPFT @cpimspeak @SitaramYechury @CPIM_WESTBENGAL @PTI_News @ndtv @ANI @htTweets @IndianExpress pic.twitter.com/y7oLNx87d5
— CPI(M) West Tripura (@CPIMWestTripura) March 4, 2018
“ರಾಜ್ಯದ ಹಲವು ಭಾಗಗಳಲ್ಲಿ ನಮ್ಮ ಕಾರ್ಯಕರ್ತರು, ಮನೆ-ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ” ಎಂದು ಸಂಸದ ಶಂಕರ್ ಪ್ರಸಾದ್ ದತ್ತಾ ಹೇಳಿದ್ದಾರೆ.
Widespread attacks are being reported on our comrades & party offices from various parts of #Tripura. The dark days of the late 80s and 90s are being sought to be recreated. Let us make it clear that we will resist and fight back and we will continue raising voices of the people. pic.twitter.com/Ts5XHYIz73
— CPI (M) (@cpimspeak) March 4, 2018
ಶನಿವಾರದಿಂದ ಪಕ್ಷದ ವಿರುದ್ಧ 200 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಸಂಸದ ಜಿತೇಂದ್ರ ಚೌಧರಿ ಹೇಳಿದ್ದಾರೆ.
ಕಮ್ಯೂನಿಸ್ಟ್ ಪಕ್ಷದ ನಾಯಕರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿಯಾಗಿ ಹಿಂಸಾನಿರತರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ಪೊಲೀಸ್ ಮಹಾ ನಿರ್ದೇಶಕರು ಹಿಂಸಾನಿರತ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ರಾಜ್ಯದಲ್ಲಿ ಶಾಂತಿ – ಸುವ್ಯವಸ್ಥೆ ಕಾಪಾಡಿಕೊಳ್ಳುವ ಭರವಸೆ ನೀಡಿದರು.
ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ಶಾಂತವಾಗುವಂತೆ ಕೇಳಿಕೊಂಡಿದ್ದಾರೆ.
