ವಿದೇಶ ಸುದ್ದಿ

ಪಾಕಿಸ್ತಾನದ ಪಾರ್ಲಿಮೆಂಟ್ ಮೇಲ್ಮನೆಗೆ ಚುನಾಯಿತರಾದ ದಲಿತ ಮಹಿಳೆ!!

ಕೃಷ್ಣಕುಮಾರಿ, ಪಾಕಿಸ್ತಾನದ ಪ್ರಪ್ರಥಮ ದಲಿತ ಮಹಿಳಾ ಸೆನೆಟರ್

ವರದಿಗಾರ(03-03-2018) : ಕೃಷ್ಣ ಕುಮಾರಿ ಕೋಹ್ಲಿ ಪಾಕಿಸ್ತಾನದ ಪ್ರಪ್ರಥಮ ದಲಿತ ಮಹಿಳಾ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ.

ಶನಿವಾರದಂದು ನಡೆದ ಚುನಾವಣೆಯಲ್ಲಿ 39 ವರ್ಷ ಪ್ರಾಯದ ಮಹಿಳೆ ಕೃಷ್ಣ ಕುಮಾರಿ ಪಾಕಿಸ್ತಾನದ ಪಾರ್ಲಿಮೆಂಟ್ ನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಸಿಂಧ್ ಪ್ರಾಂತ್ಯದಿಂದ ಬಿಲಾವಲ್ ಅಲಿ ಭುಟ್ಟೋ ಝರ್ದಾರಿಯವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP)ಯಿಂದ ಆಯ್ಕೆಯಾಗಿದ್ದಾರೆ.

ಬಡ ಕುಟುಂಬಕ್ಕೆ ಸೇರಿದ ಕೃಷ್ಣಕುಮಾರಿ ಜನಿಸಿದಾಗ ಅವರ ಕುಟುಂಬವು ಭೂಮಾಲಿಕನೊಬ್ಬನ ಬಳಿ ಮೂರು ವರ್ಷಗಳವರೆಗೆ ಜೀತದಾಳುಗಳಾಗಿದ್ದರು. ತನ್ನ 16ನೇ ವರ್ಷದಲ್ಲಿ ಮದುವೆಯಾದ ಕೃಷ್ಣ ಕುಮಾರಿ ಮದುವೆಯ ನಂತರವೂ ವ್ಯಾಸಂಗವನ್ನು ಮುಂದುವರೆಸಿ ಸಮಾಜಶಾಸ್ತ್ರದಲ್ಲಿ ಪದವಿಯನ್ನು ಪಡೆದರು.

ಸಮಾಜ ಸೇವಕಿಯಾಗಿದ್ದ ಕೃಷ್ಣಕುಮಾರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯನ್ನು ಸೇರಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಅವರ ಪೂರ್ವಜರು 1857ರ ಅವಿಭಜಿತ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದರು.

ಕೃಷ್ಣಕುಮಾರಿ ಪಾಕಿಸ್ತಾನದ ಪ್ರಪ್ರಥಮ ದಲಿತ ಮಹಿಳಾ ಸೆನೆಟರ್ ಆಗಿದ್ದು, ಎರಡನೆಯ ಹಿಂದೂ ಮಹಿಳಾ ಸೆನೆಟರ್ ಆಗಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group