ಸುತ್ತ-ಮುತ್ತ

ಜಾರ್ಖಂಡ್‍ನಲ್ಲಿ ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧ ಹಿಂಪಡೆಯಲು ವಿವಿಧ ನಾಯಕರ ಆಗ್ರಹ

ವರದಿಗಾರ (ಮಾ.03): ಪಾಪ್ಯುಲರ್ ಫ್ರಂಟ್‍ನ ಚಟುವಟಿಕೆಗಳನ್ನು ನಿಷೇಧಿಸಿ ಜಾರ್ಖಂಡ್ ಸರಕಾರ ಅಧಿಕೃತ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ ಬೆನ್ನಿಗೆ ಮನೆಗಳ ಮೇಲೆ ದಾಳಿ ನಡೆಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮಧ್ಯೆ ರಾಷ್ಟ್ರೀಯ ಮತ್ತು ರಾಜ್ಯದ ಪ್ರಗತಿಪರರು ಮತ್ತು ಹೋರಾಟಗಾರರು ಗುಂಪು ನಿಷೇಧವನ್ನು ಅಪ್ರಜಾಸತ್ತಾತ್ಮಕ ಎಂದು ಕರೆದಿದೆ ಮತ್ತು ನಿಷೇಧವನ್ನು ಹಿಂಪಡೆಯುವಂತೆ ಹೇಳಿಕೆಯಲ್ಲಿ ಒತ್ತಾಯಿಸಿರುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

1. ಪ್ರಕಾಶ್ ಅಂಬೇಡ್ಕರ್ ದಲಿತ ರಾಷ್ಟ್ರೀಯ ನಾಯಕರು (ಡಾ|ಬಿ.ಆರ್. ಅಂಬೇಡ್ಕರ್ ರವರ ಮೊಮ್ಮಗ)
2. ಬಿ.ಟಿ ಲಲಿತಾ ನಾಯಕ್, ಮಾಜಿ ಸಚಿವೆ
3. ಎ.ಕೆ ಸುಬ್ಬಯ್ಯ (ಹಿರಿಯ ನ್ಯಾಯವಾದಿ ಮತ್ತು ಮಾಜಿ ಶಾಸಕ)
4. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ ಮೈಸೂರು
5. ಎಸ್.ಬಾಲನ್, ಹೈಕೋರ್ಟ್‍ನ ಹಿರಿಯ ನ್ಯಾಯವಾದಿ
6. ಮನೋಹರ್ ಚಂದ್ರ ಪ್ರಸಾದ್, ದಲಿತ್ ಕ್ರೈಸ್ಟ್ ಮೂವ್‍ಮೆಂಟ್
7. ಮೋಹನ್ ಕುಮಾರ್ , ಹೈಕೋರ್ಟ್‍ನ ಹಿರಿಯ ನ್ಯಾಯವಾದಿ
8. ಬಿ.ಆರ್. ಭಾಸ್ಕರ್ ಪ್ರಸಾದ್, ದಲಿತ-ದಮನಿತರ ಸ್ವಾಭಿಮಾನ ವೇದಿಕೆ
9. ಮೋಹನ್ ರಾಜ್, ದಲಿತ ನಾಯಕರು
10. ಬಿ.ಟಿ ವೆಂಕಟೇಶ್, ನ್ಯಾಯವಾದಿಗಳು
11. ಸಿರಿಮನೆ ನಾಗರಾಜ್, ಪ್ರಗತಿಪರ ಹೋರಾಟಗಾರರು
12. ಯೋಗೇಶ್ ಮಾಸ್ಟರ್, ಚಲನಚಿತ್ರ ನಿರ್ದೇಶಕರು ಮತ್ತು ರಂಗಕರ್ಮಿ
13. ಪಾರ್ವತೀಶ, ಪತ್ರಕರ್ತ ಹಾಗೂ ಚಿಂತಕರು
14. ಮಸೂದ್ ಅಬ್ದುಲ್ ಖಾದರ್, ಅಧ್ಯಕ್ಷರು ಮುಸ್ಲಿಮ್ ಮುತ್ತಹಿದ ಮಹಾಝ್
15. ಅಬ್ದುಲ್ ಹನ್ನಾನ್, ರಾಜ್ಯಾಧ್ಯಕ್ಷರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

ಹೇಳಿಕೆಯು ಜಾರ್ಖಂಡ್ ಸರಕಾರ ಕೈಗೊಂಡಿರುವ ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧವನ್ನು ಬಲವಾಗಿ ಖಂಡಿಸಿದ್ದು, ಅದು ಈ ನೆಲದ ಕಾನೂನುಗಳನ್ನು ಅವಮಾನಿಸುತ್ತದೆ. ಮತ್ತು ಸಂವಿಧಾನದಿಂದ ಗೌರವಿಸಲ್ಪಟ್ಟ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ದಾರಿಯಾಗುತ್ತದೆ ಎಂದಿದೆ. “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಭಿವೃದ್ಧಿ ಕಾರ್ಯ, ಬಡವರು-ದಮನಿತರ ವಿಶೇಷವಾಗಿ ಮುಸ್ಲಿಮರ ಸಮಗ್ರ ಸಬಲೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಂದು ನವಸಾಮಾಜಿಕ ಚಳುವಳಿ ಎಂಬುವುದನ್ನು ನಾವು ಅರಿತಿದ್ದೇವೆ. ರಾಜ್ಯದಲ್ಲಿ ನಡೆದ ಅನೇಕ ಗುಂಪು ಹತ್ಯೆಗಳ ಬಗ್ಗೆ ಗಮನ ಸೆಳೆದಿರುವ ಪಾಪ್ಯುಲರ್ ಫ್ರಂಟ್‍ನ ಬಗ್ಗೆ ಜಾರ್ಖಂಡ್‍ನ ಹಿಂದುತ್ವ ಸರಕಾರ ಮತ್ತು ಪೊಲೀಸರು ಅತೃಪ್ತರಾಗಿರುವುದರಿಂದ ಅವರು ಸಂಘಟನೆಯ ಮೇಲೆ ಆರೋಪವನ್ನು ಹೊರಿಸುತ್ತಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧವು ಜನರಲ್ಲಿ ಭಯ ಹುಟ್ಟಿಸಲು ಮತ್ತು ಪ್ರಜಾಪ್ರಭುತ್ವದ ರೂಪಗಳಾಗಿರುವ ಪ್ರತಿಭಟನೆ, ಅಸಮ್ಮತಿಯನ್ನು ನಿಗ್ರಹಿಸಲು ಸರಕಾರ ಬಳಸಿದ ತಂತ್ರವಾಗಿದೆ”. ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಪ್ಯುಲರ್ ಫ್ರಂಟ್‍ನ ನಿಷೇಧವನ್ನು ಹಿಂಪಡೆಯಲಿಕ್ಕಾಗಿ ಮಾನವ ಹಕ್ಕುಗಳ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಒಂದಾಗಿ ಹೋರಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group