ರಾಜ್ಯ ಸುದ್ದಿ

ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಪ್ರಸನ್ನ ಚಕ್ರವರ್ತಿ ಎಸ್ ಡಿ ಪಿ ಐ ಪಕ್ಷಕ್ಕೆ ಸೇರ್ಪಡೆ

ಮೈಸೂರು (ಫೆ 27): ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಮಜೀದ್ ರವರ ಸಮ್ಮುಖದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತತ್ವ ಸಿದ್ಧಾಂತಗಳಿಗೆ ಪ್ರಭಾವಿತರಾಗಿ ಇಂದು ಮಾದಿಗ ಸಮುದಾಯದ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು.


ಯುವ ಹೋರಾಟಗಾರರಾದ ಪ್ರವಿಣ್, ಸೀನಪ್ಪ, ಅಪ್ಪು, ರಮೇಶ್, ಸಂತೋಷ್, ಪಿಂಟು, ರಾಖಿ, ದಾಸ, ಇನ್ನಿತರರು ಸೇರಿದಂತೆ ಯುವಕರು ಎಸ್.ಡಿ.ಪಿ.ಐ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಪ್ರಸನ್ನರವರು ಶೋಷಿತ ಸಮುದಾಯದ ಮತಗಳನ್ನು ಪಡೆಯಲು ದಲಿತರ ಮನೆಯಲ್ಲಿ ವಾಸ್ತವ್ಯ ಎಂಬ ಕಪಟ ನಾಟಕವನ್ನು ಆಡುವ ಮೂಲಕ ಇಲ್ಲಿಯವರೆಗೂ ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಮೋಸ ಮಾಡಿವೆ. ಆದರೆ ನಾನು ಕಂಡಂತೆ ಎಸ್.ಡಿ.ಪಿ.ಐ ಯಾವುದೇ ರಾಜಕೀಯ ಲಾಭವಿಲ್ಲದೇ ದಲಿತರ ಪರ ಧ್ವನಿ ಎತ್ತಿದೆ. ಅಂದರೆ ಶೋಷಿತ ಸಮುದಾಯದ ಧ್ವನಿಯಾಗಿ ಅದರಲ್ಲೂ ನರಸಿಂಹರಾಜ ಕ್ಷೇತ್ರದ ಎಂ.ಎಲ್.ಎ ಅಭ್ಯರ್ಥಿ ಅಬ್ದುಲ್ ಮಜೀದ್ ರವರು ದಲಿತರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಒಬ್ಬ ಹೋರಾಟಗಾರರು. ಇದು ನನಗೆ ಮಾತ್ರವಲ್ಲ ನಮ್ಮ ಸಮುದಾಯದವರಿಗೆ ಬಹಳ ಹೆಮ್ಮೆಯ ವಿಷಯ ಎಂದು ತಮ್ಮ ಮನದಾಳದ ಮಾತನ್ನು ಆಡಿದರು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷರಾದ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಲತೀಫ್, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಮೈಸೂರು ನಗರ ಸಮಿತಿ ಉಪಾಧ್ಯಕ್ಷರಾದ ಆಲೂರು ಮಲ್ಲಣ, ನಗರ ಸಮಿತಿ ಖಜಾಂಚಿ ಅಮ್ಜದ್ ಖಾನ್ ವಾರ್ಡ್ ಸಂಖ್ಯೆ 51 ರ ಪಾಲಿಕೆ ಸದಸ್ಯರಾದ ಎಸ್. ಸ್ವಾಮಿ, ಎಸ್.ಡಿ.ಪಿ.ಐ , ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group