ಗುಜರಾತಿನ ಮಾಜಿ ಪೋಲೀಸ್ ಅಧಿಕಾರಿ, ಸುಪ್ರೀಂ ಕೋರ್ಟಿನಲ್ಲಿ ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ವಿರುದ್ಧ ಅಫಿದವಿಟ್ ಸಲ್ಲಿಸಿ ಸುದ್ದಿಯಲ್ಲಿದ್ದ ಸಂಜೀವ್ ಭಟ್ ತ್ರಿವಳಿ ತಲಾಖಿನ ಬಗ್ಗೆ ಹಾಕಿದ್ದ ಟ್ವೀಟ್ ವೈರಲ್ ಆಗಿದೆ.
ಅವರು ಹೇಳುತ್ತಾರೆ, ನನಗೆ ಹಲವಾರು ಮುಸ್ಲಿಂ ಸ್ನೇಹಿತರಿದ್ದಾರೆ, ಆದರೆ ನಾನು ಇದುವರೆಗೂ ನಾಲ್ಕು ಮದುವೆಯಾದ ಮುಸ್ಲಿಂ ಗಂಡಸನ್ನೋ ಅಥವಾ ತ್ರಿವಳಿ ತಲಾಖ್ ಹೇಳಲ್ಪಟ್ಟ ಮುಸ್ಲಿಂ ಮಹಿಳೆಯನ್ನೋ ಕಂಡಿಲ್ಲ.
ತ್ರಿವಳಿ ತಲಾಖಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು ನೀಡಬಹುದು.
2014 ರ ಲೋಕಸಭಾ ಚುನಾವಣೆಯ ಬಳಿಕ ಬಹುಪತ್ನಿತ್ವ ಹಾಗೂ ತ್ರಿವಳಿ ತಲಾಖ್ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಮುಸ್ಲಿಮರಿಗಿಲ್ಲದಷ್ಟು ಕಾಳಜಿ ಸಂಘಪರಿವಾರದವರಿಗಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ.
