ಬಾಗೇಪಲ್ಲಿ : ಬಹು ದಿನಗಳಿಂದ ಕುಡಿಯುವ ನೀರಿಗಾಗಿ ತತ್ತರಿಸಿದ್ದ ಬಾಗೇಪಲ್ಲಿ ಪಟ್ಟಣದ ಒಂದನೇಯ ವಾರ್ಡ್ ಮಹಿಳೆಯರು ಖಾಲಿ ಕೊಡಗಳೊಂದಿಗೆ ಬಾಗೇಪಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಒಂದನೇ ವಾರ್ಡ್’ನಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಹಾಗೂ ವಿದ್ಯುತ್ ದೀಪಗಳು ಉರಿಯುತ್ತಿಲ್ಲ ಎಂದು ಪುರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪುರಸಭೆ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ದೂರಿದರು.
ಪ್ರತಿಭಟನೆ ಸ್ಥಳಕ್ಕೆ ಪುರಸಭೆ ಸಹಾಯಕ ಇಂಜಿನಿಯರ್ ಚಕ್ರಪಾಣಿ ರವರು ಆಗಮಿಸಿ ಶೀಘ್ರವಾಗಿ ವಿದ್ಯುತ್ ದೀಪಗಳು ಸರಿಪಡಿಸಿ , ನೀರು ಪೂರೈಸುವುದಾಗಿ ಭರವಸೆ ನೀಡಿದ ಬಳಿಕ ಮಹಿಳೆಯರು ಧರಣಿಯನ್ನು ಹಿಂಪಡೆದರು. ಈ ಪ್ರತಿಭಟನೆಯಲ್ಲಿ ಲಲಿತಮ್ಮ, ವಾಣಿ, ಮಂಜುಳಮ್ಮ, ಮುಬೀನಾ, ಲಕ್ಷ್ಮಮ್ಮ, ಗಂಗರತ್ನಮ್ಮ, ಸುಬ್ಬಲಕ್ಷ್ಮಮ್ಮ ಸೇರಿದಂತೆ ಹಲವು ವಾರ್ಡ್ ನಿವಾಸಿಗಳು ಭಾಗವಹಿಸಿದ್ದರು.
ವರದಿ : ಪ್ರಶಾಂತ್ ಚಿಕ್ಕಬಳ್ಳಾಪುರ
