ರಾಜ್ಯ ಸುದ್ದಿ

ಬುಡಕಟ್ಟು ಯುವಕ ಮಧು ಹತ್ಯೆ ದೇಶದ ಸದ್ಯದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ : ಅಬ್ದುಲ್ ಮಜೀದ್

ವರದಿಗಾರ (ಫೆ 26) :  ಕೇರಳದ ಪಾಣಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಗ್ರಾಮದಲ್ಲಿ 27ರ ಹರೆಯದ ಬುಡಕಟ್ಟು ಸಮುದಾಯದ ಯುವಕ ಮಧು ಎಂಬಾತನ ಹತ್ಯೆಯು ಅತ್ಯಂತ ಖಂಡನೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುಂತಹ ಕೃತ್ಯ. ಇದು ದೇಶಾದ್ಯಂತ ನಡೆಯುತ್ತಿರುವ ಆಹಾರಕ್ಕೆ ಸಂಬಂಧಿಸಿದ ಹತ್ಯೆಯ ಮುಂದುವರಿದ ಭಾಗವಾಗಿದೆ. ಬುಡಕಟ್ಟು ಯುವಕ ಹಸಿವಿನ ಸಂತ್ರಸ್ತ. ಹಸಿವು ನೀಗಿಸಲು ಹಲವು ಸಮಯದಿಂದ ಅಲೆದಾಡುತ್ತಿದ್ದ ಬುಡಕಟ್ಟು ಯುವಕನಿಗೆ ನಾಗರಿಕ ಸಮಾಜವು ಹಸಿವು ನೀಗಿಸುವ ಕಾರ್ಯವನ್ನು ಕೈಗೊಳ್ಳುವ ಬದಲು ಬಡಪಾಯಿಯನ್ನು ಸಾರ್ವಜನಿಕವಾಗಿ ಮರ್ದಿಸಿ ಬರ್ಬರವಾಗಿ ಹತ್ಯೆಗೈದಿರುವುದು ಘೋರ ಅಪರಾಧವಾಗಿದೆ. ಕಾನೂನು ಕೈಗೆತ್ತಿಕೊಂಡು ಸಮಾಜಕ್ಕೆ ಕಂಟಕವಾಗಿರುವ ಇಂತಹ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ಯಾವುದೇ ಶಕ್ತಿಗೆ ಮಣಿಯದೆ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕಾನೂನು ವ್ಯವಸ್ಥೆ ಕಾರ್ಯವೆಸಗಬೇಕು.

ದೇಶದಲ್ಲಿ ಆದಿವಾಸಿಗಳು, ಬುಡಕಟ್ಟು ಜನಾಂಗ, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಆಹಾರ ಮತ್ತು ಭದ್ರತೆಯ ಲೋಪದಿಂದ ಹತ್ಯೆಗೀಡಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಮನಿತ, ಹಿಂದುಳಿದ ಸಮುದಾಯಗಳು ಹಸಿವು ಮುಕ್ತ ಮತ್ತು ಭಯ ಮುಕ್ತ ವಾತಾವರಣದಲ್ಲಿ ಜೀವಿಸುವಂತಾಗಬೇಕು. ಇಂತಹ ಸಮಾಜ ನಿರ್ಮಾಣವಾದರೆ ಮಾತ್ರ ಸಾಮಾಜಿಕ ನ್ಯಾಯ ನೆಲೆಗೊಳ್ಳಲಿದೆ. ಕೇರಳದಲ್ಲಿ ನಡೆದ ಬುಡಕಟ್ಟು ಯುವಕನ ಹತ್ಯೆಯೊಂದಿಗೆ ಸಮುದಾಯದ ಪರಿಸ್ಥಿತಿ ಅನಾವರಣಗೊಂಡಿದೆ. ಕೇರಳ ಸರಕಾರವು ಸಂವಿಧಾನದ ಆಶಯದಂತೆ ಎಲ್ಲ ಜನರು ಸಮಾನ ಹಕ್ಕು ಅವಕಾಶಗಳೊಂದಿಗೆ ಭಯ ಮುಕ್ತ ಮತ್ತು ಹಸಿವು ಮುಕ್ತರಾಗಿ ಜೀವಿಸುವಂತಾಗಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸುತ್ತದೆ ಎಂದು ಪಕ್ಷದ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group