ಸುತ್ತ-ಮುತ್ತ

ಸೂರಿಂಜೆಯಲ್ಲಿ ಯಶಸ್ವಿಯಾಗಿ ನಡೆದ ಬೃಹತ್ ಸೌಹಾರ್ದ ರಕ್ತದಾನ ಶಿಬಿರ

ವರದಿಗಾರ (ಫೆ 26) :  ಸಿಯಾರ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ A J ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ‘ಸೌಹಾರ್ದ ರಕ್ತದಾನ’ ಶಿಬಿರ ಯಶಸ್ವಿಯಾಗಿ ನಡೆಯಿತು.

ಸೌಹಾರ್ದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ಜನಾಬ್ ಹೆಚ್ ಮಹಮ್ಮದ್ ಮುಸ್ತಾಫ ಕೋಟೆ ಸೂರಿಂಜೆ ( ಅಧ್ಯಕ್ಷರು ಸಿಯಾರ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ )ವಹಿಸಿದ್ದರೆ, ಕಾರ್ಯಕ್ರದಲ್ಲಿ ಇಂದಿನ ಕಾಲದಲ್ಲಿ ರಕ್ತದಾನ ಮಹತ್ತರವಾದ ಕಾರ್ಯವಾಗಿದೆ ಯಾಕೆಂದರೆ ನನ್ನ ಅನುಭವದಲ್ಲಿ ಅಂಥಹ ಒಂದು ಘಟನೆಯನ್ನು ಹೇಳಬೆಸುತ್ತನೆ. ನನ್ನ ಸಂಭಂದಿ ಒಬ್ಬರಿಗೆ ರಕ್ತದ ಅವಸ್ಯಕತೆ ಇದ್ದಾಗ ಇದೆ ಸಿಯಾರ ಸ್ಪೋರ್ಟ್ಸ್ ಕ್ಲಬ್ ನವರು ಸಹಕರಿದ್ದರು. ಆದರೆ ಕ್ಲಪ್ತ ಸಮಯಕ್ಕೆ ರಕ್ತ ಸಿಗದ ಕಾರಣ ಅವರ ಜೀವ ಉಳಿಸಲು ಸಾದ್ಯವಾಗಲಿಲ್ಲ.ಶಿಬಿರದಲ್ಲಿ ರಕ್ತ ನೀಡುದರ ಉದ್ದೇಶ ಸರಿಯಾದ ಸಮಯಕ್ಕೆ ರಕ್ತ ಸಿಕ್ಕಿದರೆ ಮಾತ್ರ ಒಂದು ಜೀವ ಉಳಿಸಬಹುದು . ಉದ್ಘಾಟನಾ ಬಾಷಣವನ್ನು ಜನಾಬ್ ಎಸ್ ಅಬ್ದುಲ್ ರಝಾಕ್ ( ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೂರಿಂಜೆ) ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ವಿನಯ ಕುಮಾರ್ ಸೂರಿಂಜೆ ನಿರ್ದೇಶಕರು ಎಸ್.ಇ. ಡಿ.ಸಿ.ಬ್ಯಾಂಕ್ ಸುರತ್ಕಲ್ ರಕ್ತದಾನದ ಕುರಿತು ಮಾಹಿತಿಗಳನ್ನು ಸಭಿಕರಿಗೆ ನೀಡಿದರು.  ವೇದಿಕೆಯಲ್ಲಿ ಸಿದ್ದೀಕ್ ಮಂಜೇಶ್ವರ (ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು). ಮಹಮ್ಮದ್ ಶರೀಫ್ (ಮೇಲ್ವಿಚಾರಕರು ಮುಹಮ್ಮದೀಯ ಮದರಸ ಕೋಟೆ ಸೂರಿಂಜೆ). ರಾಧಾಕೃಷ್ಣ ಬಂಡಾರ್ಕರ್ (ಸದಸ್ಯರು ಯುವಕ ಮಂಡಲ ಕೋಟೆ ಸೂರಿಂಜೆ). ಕೆ. ಹೆಚ್ ಲಿಯಾಕತ್ (ಸದಸ್ಯರು ಗ್ರಾಮ ಪಂಚಾಯತ್ ಸೂರಿಂಜೆ). ಸುಬ್ರಹ್ಮಣ್ಯ ಪ್ರಸಾದ್ (ಉದ್ಯಮಿ ಶಿಬರೂರು). ಮುಸ್ತಫಾ ಕೆ.ಸಿ ರೋಡ್ ಜೊತೆಕಾರ್ಯದರ್ಶಿ ಬ್ಲಡ್ ಡೋನೋರ್ಸ್ ಮಂಗಳೂರು). ದಾವೂದ್ ಸೂರಿಂಜೆ, ಲತೀಫ್ ಉಪ್ಪಿನಂಗಡಿ (ಕಾರ್ಯದರ್ಶಿ ಬ್ಲಡ್ ಡೊನಾರ್ಸ್ ಮಂಗಳೂರು) ಇಮ್ತಿಯಾಜ್ ಬಜೀಪೆ
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜನಾಬ್ ಎಸ್ ಅಬ್ದುಲ್ ರಝಾಕ್ ( ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೂರಿಂಜೆ) ,ರಾಧಾಕೃಷ್ಣ ಬಂಡಾರ್ಕರ್ ಹಾಗೂ ಶಾಹಿದ್ ಸೂರಿಂಜೆ ಇವರಿಗೆ ಸಿಯಾರ ಸ್ಪೋರ್ಟ್ಸ್ ಕ್ಲಬ್ ಕೋಟೆ ಸೂರಿಂಜೆ ತಂಡದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಶಿಬಿರದಲ್ಲಿ ನಮ್ಮ ನಿರೀಕ್ಷೆಗೂ ಹೆಚ್ಚು ರಕ್ತದಾನಿಗಳು ಆಗಮಿಸಿ ತಮ್ಮ ಅಮೂಲ್ಯ ರಕ್ತವನ್ನು ದಾನ ಮಾಡಿ ಸಹಕರಿಸಿದರು.

ವರದಿ: ಇಮ್ರಾನ್ ಇಮ್ಮು ಉಳ್ಳಾಲ್ ಹಾಗೂ ಮುಝಮ್ಮಿಲ್ ಷಾ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group