ಜಿಲ್ಲಾ ಸುದ್ದಿ

ದೊಡ್ಡಬಳ್ಳಾಪುರ: ಡಿ. ಕೊಂಗಾಡಿಯಪ್ಪನವರ ೧೫೮ನೇ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: ನಗರದ ಅಭಿವೃ­ದ್ದಿಯಲ್ಲಿ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪನವರ ಸೇವೆ ಸ್ಮರ­ಣಿಯ ಎಂದು ನಗರಸಭಾ ಅಧ್ಯಕ್ಷರಾದ ಶ್ರೀ. ತ.ನ.ಪ್ರಭುದೇವ್ ಅವರು ನಗರದ ನಡೆದ ಕೊಂಗಾಡಿಯಪ್ಪನವರ ೧೫೮ನೇ ಜನ್ಮದಿನಾಚರಣೆ ಕಾರ್ಯ­ಕ್ರಮದಲ್ಲಿ ಮಾತನಾಡಿದರು.

ದೊಡ್ಡಬಳ್ಳಾಪುರಕ್ಕೆ ವಿದ್ಯುತ್‌, ಕೊಳವೆ ಬಾವಿ, ಪ್ರೌಢಶಾಲೆ, ಆಸ್ಪತ್ರೆ, ಪಶು ವೈದ್ಯಶಾಲೆ, ಕೈಮಗ್ಗ ಮತ್ತು ಗೃಹ ಕೈಗಾರಿಕಾ ತರಬೇತಿ ಶಾಲೆಯನ್ನು ಮಂಜೂರು ಮಾಡಿಸಿ ಕೊಂಗಾಡಿ­ಯಪ್ಪನವರು ಊರಿನ ಯಾವ ಸಮಸ್ಯೆಯನ್ನಾಗಲೀ ಬಗೆ ಹರಿಸಲು ದುಡಿಯುತ್ತಿದ್ದರು ಎಂದರು.

ಸರಳತನ ಮತ್ತು ಸಜ್ಜನಿಕೆಯನ್ನು ಹೊಂದಿದ್ದ ಕೊಂಗಾಡಿಯಪ್ಪ ಅವರು ದೊಡ್ಡಬಳ್ಳಾಪುರಕ್ಕೆ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳನ್ನು ಅಧಿಕಾ­ರಿಗಳಿಂದ ಸುಗಮವಾಗಿ ಮಾಡಿ­ಸುತ್ತಿ­ದ್ದರು. ಪ್ರಾಥಮಿಕ ಶಾಲಾ ಶಿಕ್ಷಕ­ರಾಗಿದ್ದ ಕೊಂಗಾಡಿಯಪ್ಪ ಅವರು ತಮ್ಮ ಸೇವಾ ಮನೋಭಾವದಿಂದ ಅವರ ಮನೆಯನ್ನು ವಿದ್ಯಾರ್ಥಿ ನಿಲಯವಾಗಿ ಮಾಡಿದ್ದರು. ಜಾತಿ ತಾರತಮ್ಯಗಳಿಲ್ಲದೆ ಬಡ ವಿದ್ಯಾರ್ಥಿ­ಗಳು ಅವರ ಮನೆಯಲ್ಲಿದ್ದು ವಿದ್ಯಾ­ಭ್ಯಾಸ ಮಾಡುತ್ತಿದ್ದರು. ಕೊಂಗಾಡಿ­ಯ­ಪ್ಪ­ನವರ ನಿಸ್ವಾರ್ಥ ಸೇವಾ ಗುಣ­ಗಳನ್ನು ಮೈಗೂಡಿಸಿಕೊಂಡರೆ, ಪ್ರತಿ­ಯೊ­­ಬ್ಬರು ಸಹ ಸಮಾಜವನ್ನು ಕಾಣುವ ದೃಷ್ಟಿಕೋನ ಬದಲಾಯಿ­ಸಿಕೊಳ್ಳಬಹುದಾಗಿದೆ ಎಂದರು. ಈ ಸಂಧರ್ಭದಲ್ಲಿ ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್. ಶಿವಶಂಕರ್ ರವರು ಮತ್ತು ಎಲ್ಲಾ ನಗರಸಭಾ ಸದಸ್ಯರು ಹಾಗೂ ನಗರಸಭಾ ಅಧಿಕಾರಿಗಳು ಭಾಗವಹಿಸಿದರು.

ವರದಿ: ಪ್ರಶಾಂತ್ ಚಿಕ್ಕಬಳ್ಳಾಪುರ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group