ರಾಜ್ಯ ಸುದ್ದಿ

ನರಸಿಂಹರಾಜ ಕ್ಷೇತ್ರದಲ್ಲಿ ಮಿಂಚಿನ ರಾಜಕೀಯ ಚಟುವಟಿಕೆ ! ಕಾಂಗ್ರೆಸ್ – ಜೆಡಿಎಸ್ ನಿಂದ ನೂರಕ್ಕೂ ಅಧಿಕ ಕಾರ್ಯಕರ್ತರು ಎಸ್ ಡಿ ಪಿ ಐ ಗೆ !

ವರದಿಗಾರ (ಫೆ 22) :  ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಮಿಂಚಿನ ರಾಜಕೀಯ ಬೆಳವಣಿಗೆಗಳು ಸಂಭವಿಸಿದ್ದು, ನೂರಕ್ಕೂ ಮಿಕ್ಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕಾರ್ಯಕರ್ತರು ಎಸ್ ಡಿ ಪಿ ಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಸೇರ್ಪಡೆಗೊಂಡವರಲ್ಲಿ ಜೆಡಿಎಸ್ ನ ಹಲವು ಘಟಕಗಳ ಮುಖಂಡರುಗಳು ಸಹ ಸೇರಿದ್ದು, ಕಾಂಗ್ರೆಸ್ಸಿನ ಕಟ್ಟಾಳುಗಳೂ ಸೇರ್ಪಡೆಗೊಂಡ ಪ್ರಮುಖರಲ್ಲಿ ಸೇರಿದ್ದಾರೆ.

ಇಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ, ನರಸಿಂಹರಾಜ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿಯೂ ಆಗಿರುವ ಅಬ್ದುಲ್ ಮಜೀದ್ ರವರ ಸಮ್ಮುಖದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೆಡಿಎಸ್ ನ ಎಸ್ ಸಿ ಎಸ್ ಟಿ ಅಧ್ಯಕ್ಷರಾದ ರಿತೇಶ್, ಯೂತ್ ಜೆಡಿಎಸ್ ನ ಉಪಾಧ್ಯಕ್ಷರಾದ ಶ್ರೀನಿವಾಸ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಮೇರಿ ಸೇರಿದಂತೆ ಹಲವು ಪ್ರಮುಖ ತಳಮಟ್ಟದ ಮುಖಂಡರುಗಳು ಜೆಡಿಎಸ್ ತೊರೆದು ಎಸ್ ಡಿ ಪಿ ಐ ಪಕ್ಷದ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ಸಿನ ಹಳೆ ಕಟ್ಟಾಳುಗಳಾಗಿರುವ ಪ್ರವೀಣ್, ಸೀನಪ್ಪ, ಅಪ್ಪು, ರಮೇಶ್, ಸಂತೋಷ್, ಪಿಂಟು, ರಾಖಿ ಸೇರಿದಂತೆ ಹಲವು ಕಾರ್ಯಕರ್ತರೂ ಕೂಡಾ ಎಸ್ ಡಿ ಪಿ ಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮೈಸೂರು ನಗರ ಕಾರ್ಯದರ್ಶಿ ಕೌಶಾನ್ ಬೇಗ್, ನಗರ ಸಮಿತಿ ಸದಸ್ಯರಾದ ಮತೀನ್ ಬೇಗ್, ತಬ್ರೇಝ್ ಸೇಠ್, ವಾರ್ಡ್ 51ರ ಕಾರ್ಪೊರೇಟರ್ ಗಳಾದ ಎಸ್ ಸ್ವಾಮಿ, ಪಕ್ಷದ ಮೈಸೂರು ಮುಖಂಡರಾದ ಕುಮಾರಸ್ವಾಮಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಯಾಗಿ ಗುರುತಿಸಿಕೊಂಡು ಕೊನೆ ಹಂತದಲ್ಲಿ ಕೂದಲೆಳೆಯ ಅಂತರದಿಂದ ಸೋಲೊಪ್ಪಿಕೊಂಡ ಸಾಮಾಜಿಕ ಚಳವಳಿಯ ಮುಂದಾಳು ಹಾಗೂ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಮಜೀದ್, ಚುನಾವಣೆಯಲ್ಲಿ ಸೋಲೊಪ್ಪಿದರೂ, ತನ್ನ ಜನಸೇವೆಯನ್ನು ಮಾತ್ರ ಚುನಾವಣಾ ಫಲಿತಾಂಶದ ಮರುದಿನದಿಂದಲೇ ಆರಂಭಿಸಿ, ಕ್ಷೇತ್ರದ ಪ್ರತಿಯೊಂದು ಪ್ರದೇಶಗಳಿಗೆ ನಿಯಮಿತವಾಗಿ ಭೇಟೀ ನೀಡುತ್ತಾ ಜನರ ಅಹವಾಲುಗಳನ್ನು ಆಲಿಸುತ್ತಾ ಕ್ಷೇತ್ರದ ಜನರ ಒಲವು ಗಳಿಸಿದ್ದಾರೆ.  ಈ ಬಾರಿ ಕೂಡಾ ಅವರೇ ಎಸ್ ಡಿ ಪಿ ಐ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಜಯಗಳಿಸುವ ಎಲ್ಲಾ ಪೂರಕ ವಾತಾವರಣವಿದ್ದು, ಅಬ್ದುಲ್ ಮಜೀದ್ ರಂತಹಾ ಹೋರಾಟಗಾರರು ವಿಧಾನಸಭೆಯನ್ನು ಪ್ರವೇಶಿಸಬೇಕೆಂಬುವುದು ಅಲ್ಲಿನ ಸಾಮಾನ್ಯ ಮತದಾರರ ಹಂಬಲವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group