ಜಿಲ್ಲಾ ಸುದ್ದಿ

ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ  ‘ಪಾಪ್ಯುಲರ್ ಫ್ರಂಟ್ ಡೇ’ ಕಾರ್ಯಕ್ರಮ​

ಮಂಗಳೂರು ಫೆ. 17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 11ನೇ ವರ್ಷಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಮಂಗಳೂರಿನ ಸ್ಟೇಟ್ ಬ್ಯಾಂಕ್ ನೆಲ್ಲಿಕಾಯಿ ರಸ್ತೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫೀಸು ಎದುರು ದ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮ ಇಂದು  ಬೆಳಗ್ಗೆ ನಡೆಯಿತು.

       

ಮಂಗಳೂರು ಜಿಲ್ಲಾಧ್ಯಕ್ಷ ನವಾಜ್ ಉಳ್ಳಾಲ ದ್ವಜರೋಹನ ನೆರವೇರಿಸಿದರು.ಸಂದೇಶ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಜಾಕ್ ಕೆಮ್ಮಾರ , ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ನ್ಯಾಯ, ರಕ್ಷಣೆ, ಸಮಾನತೆ ಖಾತರಿ ಪಡಿಸುವ ಸಂವಿಧಾನ ಅಸ್ಥಿತ್ವದಲ್ಲಿ ಇದ್ದರೂ ದೇಶದ ಅರ್ಧದಷ್ಟು ಜನರು ಬಡತನದಿಂದ, ಭೀತಿಯಿಂದ ಜೀವಿಸುತ್ತಿದ್ದಾರೆ. ದಿನನಿತ್ಯ ಅಲ್ಪಸಂಖ್ಯಾತ ಸಮುದಾಯ ತನ್ನ ಅಸ್ಥಿತವನ್ನೇ ಪ್ರಶ್ನಿಸಲ್ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಮನಿಸಲ್ಪಟ್ಟು ಮೂಲೆಗೆಸೆಯಲ್ಪಟ್ಟ ಸಮುದಾಯವನ್ನು ಮುಖ್ಯವಾಹಿಣಿಗೆ ತರುವ ಪ್ರಯತ್ನ ಕಳೆದ ಹಲವಾರು ವರ್ಷಗಳಿಂದ ಪಾಪ್ಯುಲರ್ ಫ್ರಂಟ್ ನಡೆಸುತ್ತಾ ಬಂದಿದೆ. ಹಕ್ಕುಗಳು ಮತ್ತು ನ್ಯಾಯವನ್ನು ಕೇಳಿದ ಹೋರಾಟಗಾರರನ್ನು ಗುರಿ ಮಾಡುವ ಮೂಲಕ ಹೋರಾಟವನ್ನು ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ನೋವುಂಡವರ ಧ್ವನಿಯಾಗಿದೆ. ಇಂದಿನ ಫ್ಯಾಶಿಷ್ಟ್ ಸರ್ಕಾರವನ್ನು ಎದುರಿಸಲು ಇಲ್ಲಿನ ಹಿಂದುಳಿದ, ಅಲ್ಪಸಂಖ್ಯಾತ,ದಲಿತ ವರ್ಗವು ಪಾಪುಲರ್ ಫ್ರಂಟ್ ನೊಂದಿಗೆ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ  ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಎಸ್ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕ್ರಷ್ಣಾಪುರ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಕುಳಾಯಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಜಿ, ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಅಲ್ ಹಕ್ ಫೌಂಡೇಷನ್ ನ ಲತೀಫ್ ಕುದ್ರೋಳಿ ಈ ಸಂದರ್ಭ ಉಪಸ್ಥಿತರಿದ್ದರು. ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಹಾರಿಸ್  ಮಲಾರ್ ಕಾರ್ಯಕ್ರಮ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group