ರಾಜ್ಯ ಸುದ್ದಿ

ತಮಾಷೆ ಮಾಡಲು ಅನಂತ್ ಕುಮಾರ್ ಹೆಗಡೆಗೆ ಮಾತ್ರವಲ್ಲ, ನಮಗೂ ಬರುತ್ತದೆ ಎಂಬುದನ್ನು ತೋರಿಸಿಕೊಡಿ: ಯುವಕರಿಗೆ ಪ್ರಕಾಶ್ ರೈ ಸಲಹೆ

ವರದಿಗಾರ (ಫೆ.17): ‘ನಿಮ್ಮ ರಕ್ತ ಯಾವುದು ಎಂದು ಅನಂತ್ ಕುಮಾರ್ ಹೆಗಡೆ ಪ್ರಶ್ನಿಸಿದರೆ, ನನ್ನದು ಕೆಂಪು ರಕ್ತ ಎನ್ನಿ, ಈ ಮಣ್ಣಿನಲ್ಲಿ ಜ್ಞಾನವಿದೆ ಎಂದು ಅವರು ಹೇಳಿದರೆ, ಹೋಗಿ ಅದನ್ನೇ ತಿನ್ನು ಎಂದು ಉತ್ತರಿಸಿ.ತಮಾಷೆ ಮಾಡಲು ಅನಂತ್ ಕುಮಾರ್ ಹೆಗಡೆಗೆ ಮಾತ್ರವಲ್ಲ, ನಮಗೂ ಬರುತ್ತದೆ ಎಂಬುದನ್ನು ತೋರಿಸಿಕೊಡಿ’ ಎಂದು ಬಹುಭಾಷಾ ನಟ ಪ್ರಕಾಶ್ ರೈ ಯುವಕರಿಗೆ ಸಲಹೆ ನೀಡಿದ್ದಾರೆ.

ಅವರು ಹುಬ್ಬಳ್ಳಿಯಲ್ಲಿ‘ವರ್ತಮಾನದೊಂದಿಗೆ ಮುಖಾಮುಖಿ’ ಕುರಿತ ಸಂವಾದದಲ್ಲಿ ಮಾತನಾಡುತ್ತಾ, ‘ಅನಂತ್ ಕುಮಾರ್ ಹೆಗಡೆಗೆ ಹೋದಲ್ಲೆಲ್ಲ, ಅಂಬಾ ಅಂಬಾ ಎಂದು ಕೂಗಿ’ ಎಂದೂ ಹೇಳಿದ್ದಾರೆ.

ಅದಲ್ಲದೆ ಮುಂದಿನ ಮಾರ್ಚ್‌ ತಿಂಗಳಲ್ಲಿ ಯುವಕರಲ್ಲಿ ಪ್ರಜ್ಞಾವಂತಿಕೆ ತುಂಬುವ ಮತ್ತು ಭಯವಿಲ್ಲದೆ ಪ್ರಶ್ನಿಸುವ ಮನೋಭಾವ ನೀಡುವ ‘#Justasking’ ನೂತನ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಅಭಿಯಾನದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ಅಭಿಯಾನದಲ್ಲಿ ಬೀದಿ ನಾಟಕ, ಮುಕ್ತ ಚರ್ಚೆ, ಹಾಡು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಯುವಕರನ್ನು ಪ್ರಶ್ನೆ ಕೇಳುವಂತೆ ಮಾಡುವುದೇ ಇದರ ಉದ್ದೇಶ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಪ್ರಕಾಶ್ ರೈ ಟಿಟ್ಟರ್ ನಲ್ಲಿ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸುವಂತೆ ಕೇಳಿಕೊಂಡಿದ್ದಾರೆ:

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group