ಜಿಲ್ಲಾ ಸುದ್ದಿ

ಜನಪ್ರತಿನಿಧಿಗಳೇ ಎಲ್ಲಿದ್ದೀರಿ? ಅವ್ಯವಸ್ಥೆಯ ವಿರುದ್ಧ ಸಾಮಾಜಿಕ ತಾಣದಲ್ಲಿ ಪ್ರಶ್ನಿಸಿದ ಎ.ಕೆ. ಕುಕ್ಕಿಲ

ವರದಿಗಾರ- ಸಾಮಾಜಿಕ ತಾಣ ಹೈಲೈಟ್ಸ್: ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಸರಕಾರ, ಜನರು ಆಧಾರ್ ಕಾರ್ಡ್ ಪಡೆದುಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ ದೇಶದ ಮೂಲೆ ಮೂಲೆಗಳಲ್ಲೂ ನಿರ್ಮಾಣಗೊಂಡಿದೆ. ಇದರ ಭಾಗವೆಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಜನರು ಪರದಾಡುತ್ತಿದ್ದಾರೆ. ಸಮರ್ಪಕವಾದ ವ್ಯವಸ್ಥೆಗಳಿಲ್ಲದೆ ಜನರು ಸಾಲು-ಸಾಲು ತನ್ನ ಸರದಿಗಾಗಿ ಕಾಯುತ್ತಾ ನಿಂತುಕೊಂಡಿರುವುದು ಕಾಣ ಸಿಗುತ್ತಿದೆ.  ಜನತೆ ಹಿಡಿಶಾಪವನ್ನು ಹಾಕಲು ಪ್ರಾರಂಭಿಸಿದ್ದಾರೆ. ಆದರೆ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಗಮನವೇ ಇಲ್ಲದೇ ಹೋಗಿರುವುದು ವಿಪರ್ಯಾಸ.

ಆಧಾರ್ ಕಾರ್ಡ್ ನಲ್ಲಿರುವ ಲೋಪದೋಷಗಳನ್ನು ತಿದ್ದಲು ಹೋದಂತಹ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರು, ಖ್ಯಾತ ಬರಹಗಾರರಾದ ಎ.ಕೆ. ಕುಕ್ಕಿಲ ರವರು ತಾನು ಅನುಭವಿಸಿದ ಕಷ್ಟಗಳನ್ನು, ಮತ್ತು ಜನತೆ ಎದುರಿಸುತ್ತಿರುವ ಸಂಕಷ್ಟಗಳನ್ನು ಫೇಸ್ಬುಕ್ ನ ತನ್ನ ವಾಲ್ ನಲ್ಲಿ ಈ ರೀತಿಯಲ್ಲಿ ಜನಪ್ರತಿನಿಧಿಗಳೊಂದಿಗೆ ಪ್ರಶ್ನಿಸಿದ್ದಾರೆ.

 

ಇವತ್ತು ( ಆಗಸ್ಟ್ 21, 2017) 2 ಗಂಟೆಗಳ ಕಾಲ ಸರತಿ ಸಾಲಲ್ಲಿ ನಿಂತು ಕೂಪನ್ ಪಡಕೊಂಡೆ. ಇದನ್ನು ಹಿಡಿದುಕೊಂಡು 2018 ಫೆ. 7 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಟ್ಟಡದಲ್ಲಿರುವ ಆಧಾರ್ ನೋಂದಣಿ ಕಚೇರಿಗೆ ಹೋಗಬೇಕು. ನನ್ನ ಮಗನ ಆಧಾರ್ ಚೀಟಿಯಲ್ಲಿ ತಪ್ಪಾಗಿ ಉಲ್ಲೇಖವಾಗಿರುವ ಜನನ ದಿನಾಂಕವನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು ಬರೋಬ್ಬರಿ 6 ತಿಂಗಳವರೆಗೆ ಕಾಯಬೇಕಾಗಿದೆ. ಇವತ್ತು ಬೆಳಗ್ಗೆ 9:30 ರ ವೇಳೆಗೆ ಆಧಾರ್ ಕಚೇರಿಯಿರುವ ಪ್ರಥಮ ಅಂತಸ್ತಿನಿಂದ ಆರಂಭವಾದ ಜನರ ಸಾಲು ಜಿಲ್ಲಾಧಿಕಾರಿ ಕಚೇರಿಯ ಪ್ರವೇಶದ್ವಾರದ ಪ್ರತಿಭಟನಾ ಸ್ಥಳದವರೆಗೂ ತಲುಪಿತ್ತು. ಒಂದು ಕಡೆ ಪಾನ್ಕಾರ್ಡ್, ಮೊಬೈಲ್ ಸಿಮ್ ಗೂ ಆಧಾರ್ ಕಡ್ಡಾಯವೆಂದು ಸಾರುತ್ತಲೇ ಇನ್ನೊಂದು ಕಡೆ ಅದಕ್ಕಾಗಿ ಜನರನ್ನು ಬಿಸಿಲು, ಮಳೆಯಲ್ಲಿ ನೆನೆಸಿ, ಕಾಯಿಸಿ ದುಡಿಮೆಗೂ ಕತ್ತರಿಹಾಕುವ ಕ್ರೌರ್ಯವೂ ನಡೆಯುತ್ತಿದೆ. ಇದರ ಬದಲು ಇನ್ನಷ್ಟು ಆಧಾರ್ ಕೇಂದ್ರಗಳನ್ನು ತೆರೆಯಬಾರದೇ?ಜಿಲ್ಲಾಧಿಕಾರಿ ಕಟ್ಟಡವನ್ನು ಬಿಟ್ಟರೆ ಉಳಿದಂತೆ ಮಂಗಳೂರಿನಲ್ಲಿ ತಾಲೂಕು ಕಚೇರಿ ಮತ್ತು ಮಂಗಳೂರು ಒನ್ ನಲ್ಲಿ ಆಧಾರ್ ಗೆ ಅವಕಾಶ ಇದೆ. ಆದರೆ ಇವು ಕೂಪನ್ ಕೊಡುವುದು ಡಿಸಂಬರ್ ನಲ್ಲಿ. ಅಲ್ಲಿವರೆಗೆ ಅವು ಬಿಝಿ. ಮಂಗಳೂರಿನಿಂದ 10 ಕಿ. ಮೀಟರ್ ದೂರದ ತೊಕ್ಕೊಟ್ಟಿನಲ್ಲೂ ಇದೇ ಸ್ಥಿತಿ.
ನೋಟು ಅಮಾನ್ಯದ ಸಂದರ್ಭದಲ್ಲಿ ನಾನು ಇಂಥ ಸರತಿಯನ್ನು ಕಂಡಿದ್ದೆ. ಈಗ ಇದು. ಯಾಕೆ ಹೀಗೆ? ಜನಪ್ರತಿನಿಧಿಗಳೇ ಎಲ್ಲಿದ್ದೀರಿ?

 

ಜನಪ್ರತಿನಿಧಿಗಳೇ, ಈ ಬಗ್ಗೆ ಎಚ್ಚೆತ್ತುಕೊಳ್ಳುವಿರಾ?

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group