ರಾಜ್ಯ ಸುದ್ದಿ

ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲಿರುವ ಕಾಂಗ್ರೆಸ್: C fore ಸಮೀಕ್ಷಾ ವರದಿ ಬಹಿರಂಗ

ವರದಿಗಾರ-ಬೆಂಗಳೂರು: ಜುಲೈ 19 ರಿಂದ ಅಗಸ್ಟ್ 10ರವರೆಗೆ ಕರ್ನಾಟಕದಲ್ಲಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ ಎಂದು C fore ಸಂಸ್ಥೆ ಹೇಳಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಮಾತನಾಡಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ರಾಜ್ಯಾದ್ಯಂತ 340 ನಗರ ಹಾಗೂ 540 ಗ್ರಾಮೀಣ ಭಾಗದ ಎಲ್ಲಾ ಧರ್ಮ, ಜಾತಿ, ಪಂಗಡ ಮತ್ತು ವರ್ಗಗಳ ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು ಎಂದು ಸಿ. ಫೋರ್ ಸಂಸ್ಥೆ ತಿಳಿಸಿದೆ.
2008 ಹಾಗೂ 2013 ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ.ಫೋರ್ ಸಂಸ್ಥೆ ನಡೆಸಿದ ಸಮೀಕ್ಷೆಯು ಶೇಕಡಾ.99% ಸತ್ಯತೆಯಿಂದ ಕೂಡಿತ್ತು.

ಕೇಂದ್ರದಲ್ಲಿರುವ ಬಿಜೆಪಿಯ ಹಲವು ಜನವಿರೋಧಿ ನೀತಿಗಳು ಮತ್ತು ರಾಜ್ಯ ಬಿಜೆಪಿಯ ಅಧಿಕಾರಕ್ಕಾಗಿನ ಒಳ ಜಗಳ ಹಾಗೂ ಸಿದ್ಧರಾಮಯ್ಯ ಸರ್ಕಾರದ ಹಲವು ಜನಪ್ರಿಯ ಕಾರ್ಯಕ್ರಮಗಳಾದ ಶಾದಿ ಭಾಗ್ಯ, ಅನ್ನ ಭಾಗ್ಯ, ಕ್ಷೀರ ಭಾಗ್ಯಗಳಿಗೆ ಒಲಿದಿರುವ ಮತದಾರ ಮುಂದಿನ ಬಾರಿಗೆ ಕಾಂಗ್ರೆಸ್ಸಿಗೇ “ಅಧಿಕಾರ ಭಾಗ್ಯ” ಕರುಣಿಸಲು ಮುಂದಾಗಿದ್ದಾನೆ. ಇದೇ ವೇಳೆ ಮುಂದಿನ ಬಾರಿಗೂ ಸಿದ್ಧರಾಮಯ್ಯರೇ ಮುಖ್ಯಮಂತ್ರಿಯಾಗಬೇಕೆಂಬುವುದು 46% ಮತದಾರರ ಅಭಿಪ್ರಾಯವಾಗಿದೆ.

C fore ಸಂಸ್ಥೆ ನಡೆಸಿದ ಸಮೀಕ್ಷಾ ವರದಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group