ದಲಿತ ವಿದ್ಯಾರ್ಥಿಯನ್ನು ನಡುಬೀದಿಯಲ್ಲೇ ಹತ್ಯೆಗೈದ ರಾಕ್ಷಸರು!

ವರದಿಗಾರ (ಫೆ.12): ದಲಿತ ವಿದ್ಯಾರ್ಥಿಯೋರ್ವನನ್ನು ನಡುಬೀದಿಯಲ್ಲೇ ಹಾಕಿ ಸ್ಟಿಕ್ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ ನರರಾಕ್ಷಸರು ಯುವಕನನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ನಿಂದ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಅಲಹಾಬಾದ್ ಡಿಗ್ರಿ ಕಾಲೇಜಿನ ಕಾನೂನು ವಿದ್ಯಾರ್ಥಿ ದಿಲೀಪ್ ಸರೋಜ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಸುಕೃತಿ ಮಾಧವ್, ‘ಸಿಸಿಟಿವಿ ಫೂಟೇಜ್ ಗಳ ಮೂಲಕ ನಮಗೆ ದುಷ್ಕರ್ಮಿಗಳನ್ನು ನೋಡಲು ಸಾಧ್ಯವಾಗಿದೆ. ಆದರೆ ಪ್ರಮುಖ ಆರೋಪಿ ವಿಜಯ್ ಶಂಕರ್ ನನ್ನು ಹೊರತುಪಡಿಸಿ ಉಳಿದವರ ಗುರುತು ಪತ್ತೆಯಾಗಿಲ್ಲ’ ಎಂದು ಹೇಳಿದ್ದಾರೆ.
ದಿಲೀಪ್ ಸಹೋದರನ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲೀಪ್ ಹಾಗು ಆತನ ಗೆಳೆಯರು ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಅಲ್ಲಿ ದುಷ್ಕರ್ಮಿಗಳ ಜೊತೆ ಮಾತಿಕ ಚಕಮಕಿ ನಡೆದಿತ್ತು. ಇದೇ ವಿಚಾರವಾಗಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಇದರ ಆಧಾರದಲ್ಲಿ ವಿಜಯ್ ಶಂಕರ್ ಎಂಬಾತ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
