ನ್ಯಾ. ಲೋಯಾ ಹೃದಯಾಘಾತದಿಂದ ಮೃತಪಟ್ಟಿಲ್ಲ ! ಫೋರೆನ್ಸಿಕ್ ತಜ್ಞರ ಮಹತ್ವದ ಹೇಳಿಕೆ !!

ವರದಿಗಾರ (ಫೆ.11): ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬ್ರಿಜ್ ಗೋಪಾಲ್ ಹರ್ ಕಿಶನ್ ಲೋಯಾ ಅವರ ನಿಗೂಢ ಸಾವಿನ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದು, ನ್ಯಾಯಾಧೀಶ ಲೋಯಾ ಸಾವಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿರುವ ಭಾರತದ ಪ್ರಸಿದ್ಧ ಫೋರೆನ್ಸಿಕ್ ತಜ್ಞ ಡಾ.ಆರ್.ಕೆ.ಶರ್ಮಾ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿದ್ದು, ‘ವರದಿಯಲ್ಲಿ ಹೃದಯಾಘಾತದ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ವರದಿಯಲ್ಲಿ ಸಿಕ್ಕ ಮಾಹಿತಿಯನುಸಾರ ಹೃದಯಾಘಾತಕ್ಕೊಳಗಾದ ಬಗ್ಗೆ ಯಾವುದೇ ಮಾಹಿತಿಯಿಲ್ಲ’ ಎಂದು ಅವರು ಹೇಳಿದ್ದಾರೆ.
ನ್ಯಾಯಾಧೀಶ ಲೋಯಾರ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲ್ಪಟ್ಟ ಲೋಯಾರ ಒಳಾಂಗಗಳ ವರದಿಯನ್ನು ಪರೀಕ್ಷಿಸಿದ ಶರ್ಮಾ ಈ ಬಗ್ಗೆ ಮಾಹಿತಿ ನೀಡಿರುವುದಾಗಿ caravanmagazine.in ವರದಿ ಮಾಡಿದೆ. ಆರ್ ಟಿಐನಡಿ ಕೆಲವು ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಫೋರೆನ್ಸಿಕ್ ಮೆಡಿಸಿನ್ ಆ್ಯಂಡ್ ಟೋಕ್ಸಿಕಾಲಜಿ ಡಿಪಾರ್ಟ್ ಮೆಂಟ್ ಹಾಗೂ ದಿಲ್ಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಮಾಜಿ ಮುಖ್ಯಸ್ಥರಾಗಿರುವ ಡಾ,ಆರ್.ಕೆ. ಶರ್ಮಾ ಭಾರತದ ಪ್ರಖ್ಯಾತ ಫೊರೆನ್ಸಿಕ್ ತಜ್ಞರಾಗಿದ್ದಾರೆ.
