ಗುಟ್ಟು

ಪ್ರತಿದಿನ ಕೊನೆಗೊಳ್ಳುತ್ತಿವೆ 550 ಉದ್ಯೋಗಗಳು; ಭಾರತದಲ್ಲಿ 12 ಕೋಟಿ ನಿರುದ್ಯೋಗಿಗಳು: ಬೆಚ್ಚಿ ಬೀಳಿಸುವ ಸರಕಾರಿ ಅಂಕಿ-ಅಂಶಗಳು

ವರದಿಗಾರ(10-02-018): ನಮಗೆಲ್ಲರಿಗೂ ತಿಳಿದಿರುವಂತೆ ನಿರುದ್ಯೋಗವು ಭಾರತದ ಅತೀ ದೊಡ್ಡ ಸಮಸ್ಯೆಗಳಲ್ಲೊಂದಾಗಿದೆ. ಉದ್ಯೋಗದ ಕನಸಿನಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ನೀಡಿ ವಿಜಯಗೊಳಿಸಿದ ಯುವಜನತೆಗೆ ಸರಕಾರದಿಂದ ನಿರೀಕ್ಷಿಸಿದಂತೆ ಯಾವುದೇ ತೃಪ್ತಿಕರ ಕಾರ್ಯಗಳು ನಡೆದಿಲ್ಲ.
ನಿರುದ್ಯೋಗಿಗಳಾದ ಯುವಜನತೆ ಪಕೋಡಾ ಮಾರಾಟವನ್ನು ಆರಿಸಿಕೊಳ್ಳಬಹುದೆಂಬ ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ!!

ದೇಶದಾದ್ಯಂತ ಪ್ರಧಾನ ಮಂತ್ರಿಯವರ ‘ಪಕೋಡಾ’ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿರುವಾಗಲೇ ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುವ ಸರಕಾರಿ ಅಂಕಿ-ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹೌದು ಸ್ವಾಮಿ, ಸರಕಾರಿ ಅಂಕಿ-ಅಂಶ!! ಇನ್ಯಾವುದೋ ಸ್ವತಂತ್ರ ಸಂಸ್ಥೆ ನಡೆಸಿದ ಅಧ್ಯಯನವಾಗಿದ್ದರೆ ಅವರನ್ನು ದೇಶದ್ರೋಹಿಗಳೆಂದು ಕರೆದು ಸುಮ್ಮನಾಗಬಹುದಿತ್ತು!

ಲೇಬರ್ ಬ್ಯೂರೋದಿಂದ ಪಡೆದ ಅಂಕಿ-ಅಂಶಗಳು ಇಂತಿವೆ,

– ಅಂಕಿ-ಅಂಶಗಳ ಪ್ರಕಾರ ಭಾರತವು ಜಗತ್ತಿನ ಅತೀ ಹೆಚ್ಚು ನಿರುದ್ಯೋಗಿಗಳ ದೇಶವಾಗಿದೆ.

– ಭಾರತದಲ್ಲಿ ಸರಿಸುಮಾರು 12 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಅಂದರೆ ಭಾರತದ ಜನಸಂಖ್ಯೆಯ 11% ಜನರು ನಿರುದ್ಯೋಗಿಗಳಾಗಿದ್ದಾರೆ.

– 2015-16ರಲ್ಲಿ ನಿರುದ್ಯೋಗವು 5 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

– 12 ಕೋಟಿ ಜನರು ನಿರುದ್ಯೋಗಿಗಳಿರುವ ದೇಶದಲ್ಲಿ, 2015ರಲ್ಲಿ ಕೇವಲ 1,35,000 (ಒಂದು ಲಕ್ಷದ ಮೂವತ್ತೈದು ಸಾವಿರ) ಜನರಿಗೆ ಉದ್ಯೋಗ ದೊರಕಿದೆ!
( ನಾವು ಪ್ರಕಟಿಸುವಾಗ ತಪ್ಪಾಗಿ ಒಂದೆರಡು ಸೊನ್ನೆ ಬಿಟ್ಟು ಹೋಗಿರಬಹುದೆಂದು ಭಾವಿಸಬಾರದು, ಅದಕ್ಕಾಗಿ ಅಕ್ಷರದಲ್ಲೂ ಪ್ರಕಟಿಸಿದ್ದೇವೆ)

– ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ 550 ಉದ್ಯೋಗಗಳು ಕೊನೆಗೊಳ್ಳುತ್ತಿವೆ.

– ಸ್ವಯಂ ಉದ್ಯೋಗಾವಕಾಶಗಳೂ ಕಡಿಮೆಯಾಗಿವೆ.

ವಿದ್ಯಾವಂತ ನಿರುದ್ಯೋಗಿಗಳು:
ಅವಿದ್ಯಾವಂತರು ನಿರುದ್ಯೋಗಿಗಳಾಗಿರುತ್ತಾರೆ ಎನ್ನುವುದು ಹೆಚ್ಚಿನವರ ಅನಿಸಿಕೆ. ಆದರೆ, ನಿರುದ್ಯೋಗಿಗಳಲ್ಲಿ ವಿದ್ಯಾವಂತರ ಪಾಲೇ ಹೆಚ್ಚು.
ನಿರುದ್ಯೋಗಿಗಳಲ್ಲಿ 25 ಪ್ರತಿಶತ 20ರಿಂದ 24 ವಯಸ್ಸಿನವರಾಗಿದ್ದಾರೆ.
15 ಪ್ರತಿಶತ 25ರಿಂದ 29 ವಯಸ್ಸಿನವರಾಗಿದ್ದಾರೆ.
ವರದಿಯೊಂದರ ಪ್ರಕಾರ ಇದೀಗ 20 ವರ್ಷಕ್ಕಿಂತ ಮೇಲಿರುವ 14.30 ಕೋಟಿ ಜನರು ಉದ್ಯೋಗದ ಹುಡುಕಾಟದಲ್ಲಿದ್ದಾರೆ.

ವಿಶ್ವ ಸಂಸ್ಥೆಯ ಕಾರ್ಮಿಕ ಸಂಘಟನೆಯ ವರದಿ ಪ್ರಕಾರ 2018ರಲ್ಲಿ ಭಾರತದ ನಿರುದ್ಯೋಗ ಸಮಸ್ಯೆಯು ಇನ್ನೂ ಹೆಚ್ಚಾಗಲಿದೆ. ಇದು ನಿರುದ್ಯೋಗಿ ಯುವಕರಿಗೆ ಅಪಾಯದ ಮುನ್ಸೂಚನೆಯಾಗಿದೆ..

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group