ಜಿಲ್ಲಾ ಸುದ್ದಿ

ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಸಾಬೀತು ಪಡಿಸಿದರೆ ಎಲ್ಲಾ ನಾಮ ಪತ್ರಗಳನ್ನು ಹಿಂಪಡೆಯಲಾಗುವುದು : ಎಸ್ ಡಿ ಪಿ ಐ ಬಹಿರಂಗ ಸವಾಲು

ಪರಂಗಿಪೇಟೆ ಪೆ 11:    ಕಾಂಗ್ರೆಸ್ ಪಕ್ಷದ ನಾಯಕರು ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಭ್ರಮನಿರಸರಾಗಿದ್ದಾರೆ. ಆದ್ದರಿಂದ ಎಸ್ ಡಿ ಪಿ ಐ ಪಕ್ಷದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್ ಡಿ ಪಿ ಐ ಪಕ್ಷವು ಬಿಜೆಪಿ ಮತ್ತು ಸಂಘ ಪರಿವಾರದ ವಿನಾಶಕ್ಕಾಗಿ ಜನ್ಮ ತಾಳಿರುವಾಗ ನಾವು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಣ್ಣ ಮಕ್ಕಳಿಗೂ ತಿಳಿದಿರುವ ಸತ್ಯವಾಗಿರುವಾಗ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾತ್ರ ಈ ವಿಚಾರ ತಿಳಿಯದಿರುವುದು ವಿಪರ್ಯಾಸವಾಗಿರುತ್ತದೆ.

ಆದರೆ ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಬಿಜೆಪಿ ಜೊತೆ ನಂಟಿರುವುದನ್ನು ಕಾಣಲು ಸಾಧ್ಯ ಇದೆ. ಡಿಬಿ ಚಂದ್ರೇ ಗೌಡರಿಂದ ಎಸ್ ಎಂ ಕೃಷ್ಣ ರವರೆಗೆ ದೊಡ್ಡ ದಂಡೇ ನಮ್ಮ ನಡಿಗೆ ಬಿಜೆಪಿ ಕಡೆಗೆ ಎಂದು ಪ್ರಯಾಣ ಬೆಳೆಸಿದ್ದಾರೆ. ಮುಂಬೈಯ ಗೊಂಡಿಯಾ ಜಿಲ್ಲಾ ಪರಿಷತ್ ನಿಂದ ಇತ್ತೀಚೆಗೆ ಮೈಸೂರು ನಗರ ಪಾಲಿಕೆಯ ವರೆಗಿನ ಒಳ ಒಪ್ಪಂದಗಳು, ಪುದು ಗ್ರಾಮ ಪಂಚಾಯತ್ ನ ವಾರ್ಡ್ ಸಂಖ್ಯೆ 1 ರಲ್ಲಿ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಬಿಜೆಪಿ ಯಲ್ಲಿ ಈ ರೀತಿಯ ಅಕ್ರಮ ಸಂಬಂಧಗಳನ್ನಿಟ್ಟು ಕೊಂಡು ಎಸ್ ಡಿ ಪಿ ಐ ಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ರಿಯಾ‌ಝ್ ಫರಂಗಿಪೇಟೆ ಯವರು ಪ್ರತಿಕ್ರಿಯಿಸಿರುತ್ತಾರೆ.
ನಾವು ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ನಾವು ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಲ್ಲಿಸಿರುವ ಎಲ್ಲಾ ನಾಮ ಪತ್ರ ಗಳನ್ನು ಹಿಂಪಡೆಯುತ್ತೇವೆ ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲಿ ಹಾಗೂ ಬಿಜೆಪಿಯಿಂದ ಒಂದು ರೂಪಾಯಿ ಪಡೆದು ಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಇಲ್ಲವಾದಲ್ಲಿ ಫಾರೂಕ್ ರವರು ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿರುತ್ತಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group