‘ಮುಂಬರುವ ಚುನಾವಣೆ ಅಲ್ಲಾಹ್ ಮತ್ತು ರಾಮನ ನಡುವಿನ ಸ್ಪರ್ಧೆ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕನಿಗೆ ಶರತ್ತು ಬದ್ಧ ಜಾಮೀನು

ವರದಿಗಾರ (ಫೆ.10): ಜನವರಿ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಿಜೆಪಿ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡುತ್ತಾ, ‘ಮುಂಬರುವ ಚುನಾವಣೆ ರಾಜೇಶ್ ನಾಯಕ್ ಹಾಗೂ ರಾಮನಾಥ ರೈ ನಡುವಿನ ಸ್ಪರ್ಧೆಯಲ್ಲ ಬದಲಾಗಿ, ‘ಅಲ್ಲಾಹ್ ಮತ್ತು ರಾಮನ ನಡುವಿನ ಸ್ಪರ್ಧೆ’ ಎಂಬ ಪ್ರಚೋದನಕಾರಿ ಹೇಳಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಷರತ್ತು ವಿಧಿಸಿರುವ ನ್ಯಾಯಾಲಯ, ಮುಂದಿನ ದಿನಗಳಲ್ಲಿ ಕೋಮು ಹಾಗೂ ಧಾರ್ಮಿಕ ಭಾವನೆಯನ್ನು ಪ್ರಚೋದಿಸುವ ಭಾಷಣ ಮಾಡದಂತೆ ಹೇಳಿದೆ.
ಬಿಜೆಪಿ ಶಾಸಕ ಸುನೀಲ್ ಕುಮಾರ್ ರವರ ಭಾಷಣ ಧಾರ್ಮಿಕ ಭಾವನೆ ಪ್ರಚೋದನೆ ಎಂದು ಕಾಂಗ್ರೆಸ್ ಕಾರ್ಯಕರ್ತ ಪ್ರಶಾಂತ್ ಕುಲಾಲ್ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಸುನೀಲ್ ಕುಮಾರ್ ನೀಡಿದ್ದ ಹೇಳಿಕೆ:
