ಸಾಮಾಜಿಕ ತಾಣ

‘ಕಳಪೆ ಗುಣಮಟ್ಟದ ಹಾಗೂ ಮಿತದರದ ಆರೋಗ್ಯ ಸೌಲಭ್ಯ ನೀಡಲು ನಾವೆಲ್ಲರೂ ಕೈಜೋಡಿಸೋಣ’ ಎಂದ ಮೋದಿಗೆ ಟ್ವಿಟ್ಟರಿಗರ ಖಡಕ್ ಉತ್ತರ !

ವರದಿಗಾರ (ಫೆ 9) :  ಕಳಪೆ ಗುಣಮಟ್ಟದ ಹಾಗೂ ಮಿತ ದರದ ಆರೋಗ್ಯ ಸೌಲಭ್ಯ ನೀಡಲು ನಾವೆಲ್ಲರೂ ಕೈ ಜೋಡಿಸೋಣ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮೋದಿಯವರು ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ನಂತರ ಸದನವನ್ನುದ್ದೇಶಿಸಿ ಮಾತನಾಡಿದ ಸಂದರ್ಭದ ಭಾಷಣವನ್ನು ಟ್ವಿಟ್ಟರಿನಲ್ಲಿ ಹಾಕುವಾಗ ಎಡವಟ್ಟು ಸಂಭವಿಸಿದ್ದು, ಅದರಲ್ಲಿ “ಬಡವರಿಗೆ, ಗುಣಮಟ್ಟದ ಹಾಗೂ ಮಿತದರದಲ್ಲಿ ಆರೋಗ್ಯ ಸೌಲಭ್ಯ ನೀಡಲು ಕೈಜೋಡಿಸೋಣ” ಎಂದು ಬರೆಯಲು ಉದ್ದೇಶಿಸಿದ್ದು ಅದರಲ್ಲಿ ತಪ್ಪು ಸಂಭವಿಸಿದೆ. ಆದರೆ ಆ ಟ್ವೀಟನ್ನು ಇನ್ನೂ ಕೂಡ ಅಳಿಸಿ ಹಾಕದೆ ಉಳಿಸಿಕೊಂಡಿದ್ದಾರೆ.  ಆದರೆ ಮೋದಿಯವರ ತಂಡದ ಈ ಎಡವಟ್ಟಿಗೆ ಟ್ವಿಟ್ಟರಿಗರಲ್ಲಿ ಕೆಲವರು ಖಾರವಾಗಿ ಪ್ರತಿಕ್ರಿಯಿಸಿದರೆ ಇನ್ನು ಕೆಲವರು ಸಿಕ್ಕ ಅವಕಾಶದಲ್ಲಿ ಮೋದಿಯವರನ್ನು ಸರಿಯಾಗಿಯೇ ಕಾಲೆಳೆದಿದ್ದಾರೆ.

ಅದರ ಕೆಲವೊಂದು ಸ್ಯಾಂಪಲ್ ಗಳು ಇಲ್ಲಿವೆ. ಒಬ್ಬಾಕೆ “ಮೋದಿಯವರೇ, ನಿಮ್ಮಂತಹಾ ಪ್ರಧಾನಮಂತ್ರಿಗಳು ಕಳಪೆ ಗುಣಮಟ್ಟ ಆರೋಗ್ಯ ಸೌಲಭ್ಯ ಕೊಡುವವರೆಂದು ನಮಗೆ ಗೊತ್ತು. ಆದರೆ ನಿಮ್ಮ ಟ್ವಿಟ್ಟರ್ ಹೇಳಿಕೆಯಲ್ಲಿ ಕೊಮಾ ಹಾಕಿ ವ್ಯಾಕರಣ ಸರಿಪಡಿಸಿ” ಎಂದು ಸಲಹೆ ನೀಡಿದ್ದಾಳೆ.

ಇನ್ನೊಬ್ಬ “”ಕೊನೆಗೂ ಸತ್ಯ ಹೇಳಲು ನೀವು ಧೈರ್ಯ ತೋರಿಸಿದ್ದೀರಿ. ನಿಮ್ಮ ಆಡಳಿತದಲ್ಲಿ ಆರೋಗ್ಯ ಸೌಲಭ್ಯಗಳೂ ಕಳಪೆ ಗುಣಮಟ್ಟದ್ದೆಂದು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು” ಎಂದಿದ್ದಾನೆ. ಮತ್ತೊಬ್ಬ ಮೋದಿಯವರ ಈ ತಪ್ಪು ಹೇಳಿಕೆಗಳನ್ನು ಕಣ್ಣು ಮುಚ್ಚಿ ಬೆಂಬಲಿಸುವ ಅವರ ಬೆಂಬಲಿಗರನ್ನು ಟೀಕಿಸುತ್ತಾ, “ಅಂಧ ಪ್ರಾಯೋಜಿತ ಬೆಂಬಲಿಗರು” ಎಂದು ಬರೆದುಕೊಂಡಿದ್ದಾನೆ.

ಇನ್ನು ಕೆಲವೊಂದು ಸ್ವಾರಸ್ಯಕರ ಉತ್ತರಗಳಲ್ಲಿ, “ಬಿಜೆಪಿಗರನ್ನು ಕೂಡಲೇ ಶಾಲೆಗೆ ಸೇರಿಸಬೇಕು, ಮೋದಿಯವರ ಮನದಲ್ಲಿದ್ದ ಮಾತು (ಮನ್ ಕೀ ಬಾತ್) ಹೊರ ಬಂದಿದೆ, ಇದೊಂದು ರಾಷ್ಟ್ರೀಯ ನಾಚಿಕೆಗೇಡು ಹಾಗೂ ನಿಮ್ಮೆಲ್ಲಾ ಕಾರ್ಯಗಳಲ್ಲಿ ನೀವು ಕಳಪೆ ಗುಣಮಟ್ಟವನ್ನೇ ತೋರಿಸಿದ್ದೀರಿ ” ಎಂದು ಟ್ವೀಟ್ ಉತ್ತರ ಮಾಡಿದ್ದಾರೆ.

ಮತ್ತೆ ಕೆಲವರು ಮೋದಿಯವರ ಶೈಕ್ಷಣಿಕ ಹಿನ್ನೆಲೆಯ ಕುರಿತು ಛೇಡಿಸಿದ್ದಾರೆ. “ಇದು ರಾಜಕೀಯ ಶಾಸ್ತ್ರದಲ್ಲಿ ಪಡೆದ ಪದವಿಯನ್ನು ಎತ್ತಿ ತೋರಿಸುತ್ತಿದೆ” ಎಂದು ಓರ್ವ ಟ್ವಿಟ್ಟರಿಗ ಬರೆದಿದ್ದಾನೆ.

“ಕಳಪೆ ಗುಣಮಟ್ಟದ ಆರೋಗ್ಯ ಸೌಲಭ್ಯ? ಖಂಡಿತವಾಗಿಯೂ ಇದು ನನಗೆ ಅಚ್ಚರಿ ತಂದಿಲ್ಲ. ಇದು ಪಕೋಡಾ ಸರ್ಕಾರದ ಮಹಿಮೆ” ಎಂದು ಒಬ್ಬಾಕೆ ಕಾಲೆಳೆದರೆ, ಅದಕ್ಕುತ್ತರಿಸಿದ್ದ ಮತ್ತೊಬ್ಬ “ಹೌದು, ಇದೇ ಪ್ರಧಾನಿಯವರು ಪಕೋಡಾ ಕಾಯಿಸಲು ಸಲಹೆ ನೀಡಿರುವುದು ಎಂದು ಉತ್ತರಿಸಿದ್ದಾನೆ.

“ಮೋದಿಯವರೇ, ನಿಮ್ಮ ಟ್ವಿಟ್ಟರ್ ಖಾತೆಯನ್ನು ನೀವೇ ನಿರ್ವಹಿಸುತ್ತಿದ್ದೀರೆಂದು ನನಗೆ  ಖಂಡಿತವಾಗಿಯೂ ಗೊತ್ತು” ಎಂದು ಇನ್ನೊಬ್ಬ ಸ್ವಾರಸ್ಯಕರವಾಗಿ ಉತ್ತರಿಸಿದ್ದಾನೆ.

“ಮೋದಿಯವರೇ, ವ್ಯಾಕರಣ ದೋಷವಿರುವ ನಿಮ್ಮ ಟ್ವೀಟಿಗೆ ಕೊಮಾ ಹಾಕಲು ಶಶಿ ತರೂರ್ ರವರನ್ನು ಕರೆ ತರಲೇ?”  ಎಂದು ಮತ್ತೊಬ್ಬ ಟ್ವಿಟ್ಟರಿಗ ಇಂಗ್ಲಿಷ್ ಭಾಷೆಯಲ್ಲಿ ಶಶಿ ತರೂರ್ ರವರಿಗೆ ಇರುವ ಜ್ಞಾನವನ್ನು ಮೋದಿಯವರೊಂದಿಗೆ ಹೋಲಿಕೆ ಮಾಡುವ ಪ್ರಯತ್ನ ನಡೆಸಿದ್ದಾನೆ.

ಒಟ್ಟಿನಲ್ಲಿ ಮೋದಿಯವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜನರು ಅಪಾರ್ಥ ಕಲ್ಪಿಸುವ ಈ ಟ್ವೀಟ್ ಇನ್ನೂ ಹಾಗೇನೇ ಇದ್ದು, ಟ್ವಿಟ್ಟರಿಗರು ಮಾತ್ರ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸುತ್ತಲೇ ಇದ್ದಾರೆ. ಈ ಖಾತೆಯ ನಿರ್ವಾಹಕರು ಇಷ್ಟೆಲ್ಲಾ ಟೀಕೆಗಳು ಬಂದ ಮೇಲೂ ಅದನ್ನು ಅಳಿಸಿ ಹಾಕುವ ಪ್ರಯತ್ನ ನಡೆಸದಿರುವುದು ಮಾತ್ರ ಸೋಜಿಗವೆನಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group