‘ಕ್ಯಾನ್ಸರ್ ರೋಗ ಹಿರಿಯರ ಕರ್ಮದ ಪ್ರತಿಫಲ’ ಹೇಳಿಕೆ : ಬಾಬಾ ರಾಮ್ ದೇವ್ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದ ಪ್ರಾಯೋಜಕತ್ವದಿಂದ ಹಿಂದೆ ಸರಿದ ಅಮೆರಿಕಾದ ಕ್ಯಾನ್ಸರ್ ಸಂಸ್ಥೆ!

ವರದಿಗಾರ (ಫೆ 8) : ಐಐಟಿ ಮದ್ರಾಸ್ ವತಿಯಿಂದ ಆಯೋಜಿಸಿದ್ದ ಕ್ಯಾನ್ಸರ್ ಕುರಿತಾಗಿನ ಕಾರ್ಯಕ್ರಮದ ಮುಖ್ಯ ಅತಿಥಿ ಬಾಬಾ ರಾಮ್ ದೇವ್ ಎಂಬುವುದನ್ನು ಅರಿತ ಅಮೆರಿಕಾದ ಮುಖ್ಯ ಪ್ರಾಯೋಜಕ ಸಂಸ್ಥೆ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.
ಟೆಕ್ಸಾಸ್ ಮೂಲದ ಎಂ ಡಿ ಆಂಡರ್ಸನ್ ಕ್ಯಾನ್ಸರ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದು, ಸಂಘಟಕರು ಈ ಕಾರ್ಯಕ್ರಮದ ಪ್ರಚಾರದಿಂದ ತಮ್ಮ ಸಂಸ್ಥೆಯ ಲಾಂಛನ ಹಾಗೂ ಹೆಸರನ್ನು ತೆಗೆದು ಹಾಕುವಂತೆ ವಿನಂತಿಸಿದೆ. ಐಐಟಿ ಮದ್ರಾಸ್ ಫೆಬ್ರವರಿ 8ರಂದು ಆಯೋಜಿಸಿದ್ದ 7ನೇ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಮ್ಮೇಳನವು “ಕ್ಯಾನ್ಸರ್ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ; ಪ್ರಾಚೀನ ಪದ್ಧತಿಯಿಂದ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ” ಎಂಬ ವಿಷಯದ ಕುರಿತಾಗಿತ್ತು. ಇದರಲ್ಲಿ ಬಾಬಾ ರಾಮ್ ದೇವ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
In the past, MD Anderson has sponsored this conference through its Global Academic Program. But this year, we’re not a sponsor. Our name and logo are being used without permission, and we’ve requested they be removed from promotional materials. (1/2)
— MD Anderson Cancer Center (@MDAndersonNews) February 4, 2018
ಎಂ ಡಿ ಆಂಡರ್ಸನ್ ತನ್ನ ಟ್ವೀಟಿನಲ್ಲಿ, “ಕಳೆದ ಎಲ್ಲಾ ಕಾರ್ಯಕ್ರಮಗಳನ್ನು ನಾವು ಪ್ರಾಯೋಜಿಸಿದ್ದೆವು. ಆದರೆ ಈ ವರ್ಷ ನಾವು ಪ್ರಾಯೋಜಿಸುತ್ತಿಲ್ಲ. ನಮ್ಮ ಅನುಮತಿಯಿಲ್ಲದೆ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳಲ್ಲಿ ನಮ್ಮ ಲಾಂಛನ ಹಾಗೂ ಹೆಸರನ್ನು ಹಾಕಲಾಗಿದ್ದು, ಅದನ್ನು ತೆಗೆದು ಹಾಕುವಂತೆ ಸಂಘಟಕರನ್ನು ವಿನಂತಿಸುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
2016 ರ ಕಾರ್ಯಕ್ರಮಕ್ಕೆ ಎಂ ಡಿ ಆಂಡರ್ಸನ್ ಪ್ರಾಯೋಜಕತ್ವ ನೀಡಿತ್ತು. ಆದರೆ ಕಳೆದ ವರ್ಷ ಅಸ್ಸಾಮಿನ ಸಚಿವ ಹಿಮಾಂತ್ ಬಿಸ್ವಾ ಅವರು “ಕ್ಯಾನ್ಸರ್ ರೋಗ ನಮ್ಮ ಹಿರಿಯರು ಮಾಡಿರುವ ಕರ್ಮದ ಪ್ರತಿಫಲ” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಾಬಾ ರಾಮ್ ದೇವ್ ಕೂಡಾ ಬೆಂಬಲಿಸಿದ್ದರು. ಈ ಕುರಿತಾಗಿನ ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿಯನ್ನು ಉಲ್ಲೇಖಿಸಿ ಇವಾನ್ ಒರಾನ್ಸ್ಕಿ ಎನ್ನುವ ಪತ್ರಕರ್ತರೊಬ್ಬರು ಎಂ ಡಿ ಆಂಡರ್ಸನ್ ಸಂಸ್ಥೆಗೆ ಈ ಕುರಿತಾಗಿ ಟ್ವೀಟ್ ಮಾಡಿದ್ದರು. ‘ಇಂಡಿಯನ್ ಎಕ್ಸ್’ಪ್ರೆಸ್’ ವರದಿಯಲ್ಲಿ ಬಾಬಾ ರಾಮ್ ದೇವ್, ಹಿಮಾಂತ್ ಬಿಸ್ವಾಸ್ ಹೇಳಿಕೆಯನ್ನು ಬೆಂಬಲಿಸಿದ ಕುರಿತು ವರದಿಗಳಿತ್ತು. ಇದನ್ನು ಇವಾನ್ ಒರಾನ್ಸ್ಕಿ, ಆಂಡರ್ಸನ್ ಸಂಸ್ಥೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಆಂಡಸನ್ ಸಂಸ್ಥೆ, ನಾವು ಈ ವರ್ಷ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡುವುದಿಲ್ಲವೆಂದು ಹೇಳಿ ಕಾರ್ಯಕ್ರಮದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.
