ಪ್ರಧಾನಿಗೆ ತಾಕತ್ತಿದ್ದರೆ ಸರಕಾರ ವಜಾ ಮಾಡಲಿ: ಕೆ.ಎನ್. ರಾಜಣ್ಣ ಸವಾಲು

ವರದಿಗಾರ (ಫೆ.8): ವಿಧಾನಸಭೆಯಲ್ಲಿ ಬುಧವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಕಾಂಗ್ರೆಸ್ನ ಕೆ.ಎನ್. ರಾಜಣ್ಣ, ‘ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಜಂಗಲ್ ರಾಜ್ ಇದೆ ಎಂದು ಪ್ರಧಾನಿ ಸಂಸತ್ನಲ್ಲಿ ಹೇಳಿದ್ದಾರೆ’. ಅವರ ಹೇಳಿಕೆಯನ್ನು ನಾನು ಪ್ರತಿಭಟಿಸುತ್ತೇನೆ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಳಿ ದಾಖಲೆ ಇದ್ದರೆ ಮುಖ್ಯಮಂತ್ರಿ ಸೇರಿದಂತೆ ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಲಿ’. ಪ್ರಧಾನಿಗೆ ತಾಕತ್ತಿದ್ದರೆ ರಾಜ್ಯ ಸರಕಾರ ವಜಾ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇಂತಹ ಹೇಳಿಕೆ ನೀಡುವ ಮೂಲಕ ಅವರು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಮತ್ತು ರಾಜ್ಯಕ್ಕೆ ಕಪ್ಪುಚುಕ್ಕಿ ಅಂಟಿಸಿದ್ದಾರೆ . ಬಂಡವಾಳ ಹೂಡಿಕೆದಾರರು ಬರದಂತೆ, ರಾಜ್ಯ ಉದ್ಧಾರಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿ ವರ್ತನೆ ನಾಚಿಕೆ ಗೇಡಿನ ಸಂಗತಿ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ.
