ಮೋದಿಯವರ ಪರಿತ್ಯಕ್ತ ಪತ್ನಿ ಜಶೋದಾಬೆನ್ ಇದ್ದ ಕಾರು ಅಪಘಾತ !

ವರದಿಗಾರ (ಫೆ 7): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರಿತ್ಯಕ್ತ ಪತ್ನಿ ಜಶೋದಾಬೆನ್ ಇದ್ದ ಕಾರು ಚಿತ್ತೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಅವರು ತನ್ನ ಕುಟುಂಬದೊಂದಿಗೆ ಚಿತ್ತೂರಿನಿಂದ ಗುಜರಾತಿಗೆ ವಾಪಾಸಾಗುತ್ತಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಶೋದಾಬೆನ್ ರವರು ಆಂಬ್ಯುಲನ್ಸ್ ನಿಂದ ಇಳಿದು ಆಸ್ಪತ್ರೆಗೆ ನಡೆದುಕೊಂಡೇ ಹೋಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.
