ರಾಷ್ಟ್ರೀಯ ಸುದ್ದಿ

ಆರೆಸ್ಸೆಸ್ ಶಾಖೆಯಲ್ಲಿರುವವರು ರಾಷ್ಟ್ರೀಯವಾದಿಗಳು; ಆರೆಸ್ಸೆಸ್ ಶಾಖೆಗೆ ಹೋಗದವರು ಹಿಂದೂಗಳಲ್ಲ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ವರದಿಗಾರ (ಫೆ.6): ಆರೆಸ್ಸೆಸ್ ಶಾಖೆಯಲ್ಲಿರುವವರು ರಾಷ್ಟ್ರೀಯವಾದಿಗಳು; ಆರೆಸ್ಸೆಸ್ ಶಾಖೆಗೆ ಹೋಗದವರು ಹಿಂದೂಗಳಲ್ಲ ಎಂದು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ಹೈದರಾಬಾದ್ ತೆಲಂಗಾಣದನ ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಇತ್ತೀಚೆಗಷ್ಟೇ ‘ಇತರ ಸಮುದಾಯವರು ಏನಾದರೂ ತಪ್ಪು ಮಾಡಿದರೆ ಹಿಂದೂಗಳು ಲಾಠಿಯಂತಹ ಆಯುಧಗಳಿಂದ ಅವರ ಮೇಲೆ ದಾಳಿ ನಡೆಸಬೇಕು’ ಎಂದು ಹೇಳಿಕೆ ನೀಡಿ ಮೊಕದ್ದಮೆ ದಾಖಲಾಗಿರುವ ಕೆಲದಿನಗಳಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ರಾಜಾಸಿಂಗ್ ಭೋಪಾಲ್ ನ ನೀಮುಚ್ ನಲ್ಲಿ ಹಿಂದೂ ಉತ್ಸವ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

‘ಪ್ರತಿಯೊಬ್ಬ ಹಿಂದೂ ಆರೆಸ್ಸೆಸ್ ಶಾಖೆಗೆ ಸೇರಬೇಕು’ ಎಂದು ಫರ್ಮಾನು ಹೊರಡಿಸಿದ್ದಾರೆ. ‘ಆರೆಸ್ಸೆಸ್ ಶಾಖೆಯಲ್ಲಿರುವವರು ದೇಶದ ಹಾಗೂ ಧರ್ಮದ ಒಳಿತಿಗಾಗಿಯೂ ಕೆಲಸ ಮಾಡುತ್ತಾರೆ ಎಂದು ನಾನು ನಂಬುತ್ತೇನೆ’ಎಂದು ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿಕೊಂಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಕ್ಷಿ ಮಹಾರಾಜ್ ಮಾತನಾಡಿ, ಇಲ್ಲಿ ಹಲವು ರಾಜಕೀಯ ಪಕ್ಷಗಳಿದ್ದು, ಸಿದ್ಧಾಂತಗಳಲ್ಲಿ ವ್ಯತ್ಯಾಸಗಳಿವೆ ಎಂದು ಹೇಳಿದ್ದಾರೆ. ಆದರೆ ನಾವೆಲ್ಲಾ ಹಿಂದೂಗಳು. ನಿಮಗೆ ಶಾಸಕರ, ಸಂಸದರ ಮೇಲೆ ಕೋಪವಿರಬಹುದು. ಆದರೆ ಅದಕ್ಕಾಗಿ ಭಾರತ ಮಾತೆ ಮತ್ತು ಪ್ರಧಾನಿ ಮೋದಿಯವನ್ನು ಶಿಕ್ಷಿಸಬೇಡಿ ಎಂದು ಹೇಳಿಕೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group