ರಾಜ್ಯ ಸುದ್ದಿ

ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಕ್ಷೇತ್ರಗಳ ಪಟ್ಟಿ ಬಿಡುಗಡೆಗೊಳಿಸಿದ ಎಸ್ ಡಿ ಪಿ ಐ

ವರದಿಗಾರ (ಫೆ 5) :  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯೂ ಪುತ್ತೂರಿನ ಫ್ರೀಡಂ ಹಾಲ್ ನಲ್ಲಿ  ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ  ಸ್ಪರ್ಧಿಸುವ ಎರಡನೇ ಹಂತದ 19 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಳೆದ ರಾಜ್ಯ ಸಮಿತಿ ತೀರ್ಮಾನದಂತೆ   ಈಗಾಗಲೇ ಬೆಂಗಳೂರಿನ ಸರ್ವಜ್ಞ ನಗರ, ಚಿಕ್ಕಪೇಟೆ, ಹೆಬ್ಬಾಳ್, ಮೈಸೂರಿನ ನರಸಿಂಹರಾಜ, ಮಂಗಳೂರಿನ ಬಂಟ್ವಾಳ ಹಾಗೂ ಗುಲ್ಬರ್ಗಾ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಸದರಿ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ನಡೆಯುತ್ತಿರುವ  ಕೆಲಸ ಕಾರ್ಯಗಳ ಕುರಿತು ಅವಲೋಕನ ಮಾಡಲಾಯಿತು.   ಉಳಿದ ಕ್ಷೇತ್ರಗಳ ಕುರಿತು ಬಹಳ ಗಂಭೀರವಾಗಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಹಾಜರಿದ್ದ ರಾಜ್ಯದ ವಿವಿಧ ಜಿಲ್ಲಾಧ್ಯಕ್ಷರ ಅಭಿಪ್ರಾಯಗಳನ್ನು ಪಡೆದು, ಕೂಲಂಕೂಷವಾಗಿ ಚರ್ಚಿಸಿ ಹತ್ತೊಂಬತ್ತು ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೂಳಿಸಲಾಯಿತು. ಪಕ್ಷ ತೀರ್ಮಾನಿಸಿದ ಹತ್ತೊಂಬತ್ತು ಕ್ಷೇತ್ರಗಳಂದರೆ ಹುಬ್ಬಳ್ಳಿ, ರಾಯಚೂರು, ದೇವದುರ್ಗ, ಶಹಾಪೂರ, ಸಿಂದಗಿ, ಸಿರಸಿ, ಶಿವಮೊಗ್ಗ, ಕಾಪು, ಮೂಡಿಗೆರೆ, ಮೂಡಬಿದರೆ, ಹಾಸನ, ಪುತ್ತೂರು, ಸುಳ್ಯ, ಮಡಿಕೇರಿ, ವಿರಾಜಪೇಟೆ, ಪುಲಿಕೇಶಿನಗರ, ತುಮಕೂರು, ಕೋಲಾರ ಹಾಗೂ ಮುಳಬಾಗಿಲು ಆಗಿದ್ದು,  ರಾಜ್ಯ ಸಮಿತಿ ತೀರ್ಮಾನದಂತೆ   ಈ ಎಲ್ಲಾ ಕ್ಷೇತ್ರಗಳಲ್ಲಿ    ಶೀಘ್ರವಾಗಿ ಅಭ್ಯರ್ಥಿಗಳ ಹೆಸರನ್ನು  ಪ್ರಕಟಿಸಲಾಗುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಮುಂಬುರುವ ವಿಧಾನ ಸಭಾ ಚುನಾವಣೆ, ಮಹಾದಾಯಿ ಸಮಸ್ಯೆ ಹಾಗೂ ತ್ರಿವಳಿ ತಲಾಖ್ ಕುರಿತು ಚರ್ಚಿಸಲಾಯಿತು. ಮಹಾದಾಯಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ತನ್ನ ಕುತಂತ್ರ ರಾಜಕಾರಣ ಬದಿಗಿಟ್ಟು ಪ್ರಾಮಾಣಿಕ ಪ್ರಯತ್ನ ಮಾಡ ಬೇಕಾಗಿದೆ ಎಂಬುದಾಗಿ ಸಭೆ ಅಭಿಪ್ರಾಯಿಸಿತಲ್ಲದೇ, ಮಹಾದಾಯಿ ಹೋರಾಟಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ತೀರ್ಮಾನಕ್ಕೆ ಬಂದಿತು. ವೈಯಕ್ತಿಕ ಕಾನೂನನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಲಾಖ್ ಬಿಲ್ ಅಸಂವಿಧಾನಿಕ ಕ್ರಮವಾಗಿದ್ದು, ಇದನ್ನು ಒತ್ತಾಯ ಪೂರ್ವಕವಾಗಿ ಮುಸ್ಲಿಂ ಸಮುದಾಯದ ಮೇಲೆ  ಹೇರುವ ಹುನ್ನಾರ ಆಗಿದೆ. ಇದರ ವಿರುದ್ಧ ಜನ ಜಾಗೃತಿ ಅಭಿಯಾನವನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷದ ವತಿಯಿಂದ ನಡೆಯಲಿದೆ ಇದರ ಅಂಗವಾಗಿ ರಾಜ್ಯದಲ್ಲೂ ಇದೇ  ಫೆಬ್ರವರಿ ತಿಂಗಳಿನಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಎಂದು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಇಲ್ಯಾಸ್ ತುಂಬೆ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಅಬ್ದುಲ್ ಮಜೀದ್, ಅಬ್ದುಲ್ ಲತೀಫ್ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಅಲ್ಫಾನ್ಸೋ ಫ್ರಾಂಕೋ, ಅಕ್ರಮ್ ಹಸನ್, ಅಫ್ಸರ್ ಕೂಡ್ಲಿಪೇಟೆ, ರಹೀಮ್ ಪಟೇಲ್ ಮತ್ತು ರಿಯಾಜ್ ಫರಂಗಿಪೇಟೆ ಹಾಜರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group