ವರದಿಗಾರ-ಉತ್ತರಪ್ರದೇಶ: ಹದಿನೈದು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆಯು ಇಲ್ಲಿನ ಬಲ್ಲಿಯಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಅತ್ಯಾಚಾರ ವಿಷಯ ತಿಳಿದ ಬಾಲಕಿಯ ತಂದೆ, ಪೊಲೀಸ್ ಪೇದೆಯ ಅಮಾನವೀಯ ಕೃತ್ಯಕ್ಕೆ ಆಘಾತಗೊಂಡು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮ್ ಎಂಬ ಪೊಲೀಸ್ ಪೇದೆ ಈ ಕೃತ್ಯ ಎಸಗಿದ್ದಾನೆ. ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಕಾಮುಕ ಪೇದೆ ಬಾಲಕಿಯನ್ನು ಆಪಹರಿಸಿ ಆತ್ಯಾಚಾರ ಎಸಗಿದ್ದಾನೆ. ನೆಡೆದ ವಿಷಯವನ್ನು ಮನೆಗೆ ಬಂದು ತಿಳಿಸಿದ್ದಾಳೆ. ಅಷ್ಟರಲ್ಲೇ ಆಘಾತಗೊಂಡ ಬಾಲಕಿಯ ತಂದೆ ಕೊನೆಯುಸಿರೆಳೆದಿದ್ದಾರೆ.
ಗೋಪಾಲನಗರ ವ್ಯಾಪ್ತಿಯ ರೇವತಿ ಪೊಲೀಸ್ ಠಾಣೆಯಲ್ಲಿ ಈ ಪೊಲೀಸ್ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಘಟನೆಯು ಸುದ್ದಿಯಾಗುತ್ತಿದ್ದಂತೆಯೇ ಕೆಲಸದಿಂದ, ಅಲ್ಲಿನ ಎಸ್.ಪಿ. ಸುಜಾತ ಸಿಂಗ್ ಅಮಾನತು ಮಾಡಿ ಆದೇಶಿಸಿದ್ದಾರೆ. ಕಾಮುಕ ಪೊಲೀಸ್ ಪೇದೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ಪೊಲೀಸ್ ಪೇದೆಯ ಅಮಾನವೀಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
