ಕೋಮುಗಲಭೆ ನಡೆಸುವುದೇ ಅಮಿತ್ ಷಾ ಸ್ಟಾಂಡರ್ಡ್: ಸಿದ್ದರಾಮಯ್ಯ

ವರದಿಗಾರ (ಜ.4): ‘ಕೋಮುಗಲಭೆ ನಡೆಸುವುದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಟಾಂಡರ್ಡ್ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿ ಕೋಮುಗಲಭೆ ನಡೆಸುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಅಮಿತ್ ಷಾ ಮೋದಿ ಅವರಂತಲ್ಲ. ಅವರ ತಂತ್ರ ಕೋಮುಗಲಭೆ ನಡೆಸುವುದಾಗಿದ್ದು, ಅವರು ರಾಜ್ಯಕ್ಕೆ ಬಂದು ಹೋದಗಲೆಲ್ಲಾ ಗಲಭೆ ನಡೆದಿದೆ. ಅವರು ಗಲಾಟೆಗೆ ಸೂಚನೆ ನೀಡುತ್ತಾರೆ ಎನ್ನುವುದಕ್ಕೆ ಸಂಸದ ಪ್ರತಾಪ್ ಸಿಂಹ ರ ವೈರಲ್ ಆಗಿರುವ ವಿಡಿಯೋ ಹೇಳಿಕೆಯೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
‘ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆನೂ ಬರುವುದಿಲ್ಲ. ಸುಳ್ಳು ಹೇಳುವುದೇ ಬಿಜೆಪಿಯ ಜೀವನವಾಗಿದೆ. ತೆರಿಗೆ ವಿಚಾರದಲ್ಲೂ ಬಿಜೆಪಿ ಸುಳ್ಳನ್ನೇ ಹೇಳಿದೆ. ಬಿಜೆಪಿಯವರು ಏನೂ ಹೇಳಿದರು ರಾಜ್ಯದ ಜನತೆ ಅವರನ್ನು ನಂಬುವುದಿಲ್ಲ’ ಎಂದು ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಕೋಮುಗಲಭೆಗೆ ನಾವು ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
