ಸುತ್ತ-ಮುತ್ತ

ಅಮೆಮಾರ್ ಜಮಾಲುದ್ದೀನ್ ಫೈಝಿ ನಿಧನ: ಇಮಾಂ ಕೌನ್ಸಿಲ್ ಸಂತಾಪ

ಪರಂಗಿಪೇಟೆ ಪೆ 3: ಜಿಲ್ಲಾ ಫೈಝೀಸ್ ಉಪಾಧ್ಯಕ್ಷರೂ,ಸಮಸ್ತ ದಕ್ಷಿಣ ಕರ್ನಾಟಕದ ಮುಶಾವರ ಸದಸ್ಯರೂ ಆಗಿದ್ದ ಜಮಾಲುದ್ದೀನ್ ಫೈಝಿ (62) ನಿಧನರಾದರು. ಅಮೆಮಾರ್,ತುಂಬೆ, ಮಿತ್ತಬೈಲ್, ಅಕ್ಕರಂಗಡಿ ಸಹಿತ ಹಲವಾರು ಮೊಹಲ್ಲಾಗಳಲ್ಲಿ ಮುದರ್ರಿಸ್ ಖತೀಬಾಗಿ ಸೇವೆ ಸಲ್ಲಿಸಿರುವ ಅವರ ಸ್ವಂತ ಊರು ಕಿಲ್ತಾನ್ ದ್ವೀಪವಾಗಿತ್ತು*.ಹಲವಾರು ಶಿಷ್ಯರುಗಳನ್ನು ಹೊಂದಿರುವ ಅವರು ನಾಲ್ಕು ಪುತ್ರರು ಎರಡು ಪುತ್ರಿಯರನ್ನು ಅಗಲಿದ್ದಾರೆ,
ಅವರ ನಿದನಕ್ಕೆ ಸಮಸ್ತ ಮುಶಾವರ ಕೇಂದ್ರ ಸಮಿತಿ ಉಪಾದ್ಯಕ್ಷ ಜಬ್ಬಾರ್ ಹಾಜಿ ಮಿತ್ತಬೈಲ್, ಅಮೆಮಾರ್ ಬದ್ರಿಯಾ ಜುಮ್ಮಾ ಮಸ್ಜಿದ್ ಮುದರಿಸ್ ಅಬೂಸ್ವಾಲಿಹ್ ಫೈಝಿ, ಅದ್ಯಕ್ಷ ಉಮರಬ್ಬ ಎಸ್.ಎಸ್.ಬಿ, ಪ್ರದಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ. ಪ್ರಸ್ತುತ ಫರಂಗಿಪೇಟೆ ಅಮೆಮಾರ್ ನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು

 ಇಮಾಂ ಕೌನ್ಸಿಲ್ ಸಂತಾಪ : 

ಹಿರಿಯ ಮುಸ್ಲಿಂ ವಿದ್ವಾಂಸ,ಹಲವಾರು‌ ಮೊಹಲ್ಲಾಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಮಾದರಿ ಪುರುಷರಾಗಿ ಪ್ರಜ್ವಲಿಸುತ್ತಿದ್ದ ಜಮಾಲುದ್ದೀನ್ ಫೈಝಿ ಅಮ್ಮೆಮಾರ್ ಅವರು ನಮ್ಮನ್ನಗಲಿದ್ದಾರೆ.
ಬದುಕಿನುದ್ದಕ್ಕೂ ಪಾರದರ್ಶಕತೆಯನ್ನು ಕಾಪಾಡಿಕೊಂಡು ಎಲ್ಲಾ ವರ್ಗದ‌ ಜನರ ನೆಚ್ಚಿನ ಉಸ್ತಾದ್ ಆಗಿ ಇದೀಗ ಅವರು ನಮ್ಮನ್ನಗಲಿರುವುದು ದೊಡ್ಡ ನಷ್ಟವಾಗಿದೆ.
ವಿದ್ವಾಂಸರ ಮರಣ ,ಜಗತ್ತಿನ ಮರಣ ಎಂಬಂತೆ ಅವರ ಮರಣ ಹಲವಾರು ಮಂದಿಯನ್ನು ದುಃಖ ತಪ್ತರನ್ನಾಗಿಸಿದೆ.
ಫೈಝಿ ಉಸ್ತಾದ್ ಅವರ ವಿಯೋಗದ ದುಃಖ ವನ್ನು ಸಹಿಸುವ‌ ಶಕ್ತಿಯನ್ನು ಕುಟುಂಬಕ್ಕೆ ಹಾಗೂ ಇತರರಿಗೆ ಅಲ್ಲಾಹು ನೀಡಲಿ ಎಂದು
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾದ್ಯಕ್ಷ ರಫೀಕ್ ದಾರಿಮಿ ಸಂತಾಪ ವ್ಯಕ್ತಪಡಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group