ರಾಷ್ಟ್ರೀಯ ಸುದ್ದಿ

ಬಿಜೆಪಿಗೆ ಪ್ರಥಮ ‘ತ್ರಿವಳಿ ತಲಾಖ್’ ನೀಡಿದ ರಾಜಸ್ಥಾನ: ಬಿಜೆಪಿಯ ಹಿರಿಯ ನಾಯಕ ವ್ಯಂಗ್ಯ

ವರದಿಗಾರ (ಫೆ.3): ಬಿಜೆಪಿಗೆ ಪ್ರಥಮ ತ್ರಿವಳಿ ತಲಾಖ್ ನೀಡಿದ ರಾಜ್ಯ ರಾಜಸ್ಥಾನ ಎಂದು ಬಿಜೆಪಿಯ ಹಿರಿಯ ನಾಯಕ, ಸಂಸದ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗಷ್ಟೇ ರಾಜಸ್ಥಾನದ 1 ವಿಧಾನಸಭಾ ಕ್ಷೇತ್ರ  2 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿತ್ತು.

ರಾಜಸ್ಥಾನ ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಶತ್ರುಘ್ನ ಸಿನ್ಹಾ, ‘ಆಡಳಿತಾರೂಢ ಪಕ್ಷಕ್ಕೆ ಹಾನಿಕಾರಕ ಫಲಿತಾಂಶದ ಬ್ರೇಕಿಂಗ್ ಸುದ್ದಿ, ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ತ್ರಿವಳಿ ತಲಾಖ್. ಅಜ್ಮೀರ್: ತಲಾಖ್, ಅಲ್ವಾರ್: ತಲಾಖ್, ಮಂಡಲಗಡ:ತಲಾಖ್’ ಎಂದು ಇತ್ತೀಚೆಗೆ ಕೇಂದ್ರ ಸರಕಾರ ತ್ರಿವಳಿ ತಲಾಖ್ ಬಗ್ಗೆ ಕಾನೂನು ರೂಪಿಸಿರುವುದನ್ನು ರಾಜಸ್ತಾನದ ಬಿಜೆಪಿ ಫಲಿತಾಂಶಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:

ರಾಜಸ್ಥಾನ ಉಪಚುನಾವಣೆ : ಕಾಂಗ್ರೆಸ್ ಅಲೆಯೆದುರು ಕೊಚ್ಚಿ ಹೋದ ಆಡಳಿತಾರೂಢ ಬಿಜೆಪಿ !

Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group