ಪುದು ಗ್ರಾಮ ಪಂಚಾಯತ್ ನಲ್ಲಿ ಸರ್ವಾಧಿಕಾರ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸುವುದೇ ಎಸ್.ಡಿ.ಪಿ.ಐ ಮುಖ್ಯ ಗುರಿ : ರಿಯಾಝ್ ಫರಂಗಿಪೇಟೆ

ಪರಂಗಿಪೇಟೆ ಪೆ 3: ಪೆಬ್ರವರಿ 18 ರಂದು ನಡೆಯಲಿರುವ ಪುದು ಗ್ರಾಮ ಪಂಚಾಯತ್ ಚುನಾವಣೆ ಸಂಭಂದುಸಿದಂತೆ ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರ ಸಭೆಯೂ ಪರಂಗಿಪೇಟೆಯ ವಿಶ್ವಾಸ್ ಸಭಾಂಗಣದಲ್ಲಿ ಶುಕ್ರವಾರ ಜರಗಿತು
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಪಕ್ಷದ ಬೆಂಬಳಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾತ್ರಿ ಹಗಲು ಕೆಲಸ ಮಾಡಬೇಕಾಗಿ ಕರೆ ನೀಡಿದರು. ಈ ಸಲ ನಾವು ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳ ಗೆಲುವು ಜನತೆಯ ಗೆಲುವು ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಲಿದ್ದು , ನ್ಯಾಯ ವಂಚಿತ, ಅಧಿಕಾರ ವಂಚಿತ ಸಮುದಾಯಕ್ಕೆ ಪುದು ಪಂಚಾಯತ್ ನಲ್ಲಿ ಸಮುದಾಯದ ಪರವಾಗಿರುವ ದ್ವನಿಗಳ ಅವಶ್ಯಕತೆ ಇದ್ದು ಅದಕ್ಕಾಗಿ ಸಚ್ಚಾರಿತ್ರ್ಯ ಹೊಂದಿರುವ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪುದು ಗ್ರಾಮ ಪಂಚಾಯತ್ ನ ಸರ್ವಾಧಿಕಾರಿ ಮತ್ತು ಭ್ರಷ್ಟಾಚಾರವನ್ನು ಮುಕ್ತಗೊಳಿಸುವುದೇ ನಮ್ಮ ಮುಖ್ಯ ಗುರಿಯಾಗಿರುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿಯಾಗಿರುವ ಶಾಹುಲ್ ಎಸ್.ಎಚ್ ರವರು ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಪ್ರಕಾರ ಕುಂಪನನಜಲ್ – ಸಿರಾಜಿ ಮತ್ತು ಶೆರೀಫ್, ಅಮೆಮಾರ್ ಕೆಳಗೆ- ಮೊಹಮ್ಮದ್ ಶಾಫಿ, ಅಮೆಮಾರ್ ಮೇಲೆ- ಸುಲೈಮಾನ್ ಮತ್ತು ಶಾಕಿರ್, ಕುಂಜತ್ಕಳ- ನಝಿರ್ ಹತ್ತನೇಮೈಲ್ ಕಲ್ಲು, ಪೇರಿಮಾರ್- ಇಬ್ರಾಹಿಮ್ ಮಾರಿಪ್ಪಳ್ಳ, ಲತೀಫ್ ಮತ್ತು ಜಮೀಲ, ಸುಜೀರ್- ಅಶ್ರಫ್, ಪರಂಗಿಪೇಟೆ ಸಾಜಿದ್ ಎಂಬವರನ್ನು ಘೋಷಣೆ ಮಾಡಲಾಯಿತು. ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಗ್ರಾಮ ಸಮಿತಿ ಅದ್ಯಕ್ಷರಾದ ಇಕ್ಬಾಲ್, ವಲಯಾದ್ಯಕ್ಷರಾದ ಸುಲೈಮಾನ್ ಉಸ್ತಾದ್, ಚುನಾವಣಾ ಸಹ ಉಸ್ತುವಾರಿಯಾದ ಸೆಲೀಮ್ ಕುಂಪನಮಜಲ್ ಮತ್ತು ಜಿಲ್ಲಾ ಕೋಶಾಧಿಕಾರಿ ಐ.ಎಮ್.ಆರ್. ಉಪಸ್ಥಿತರಿದ್ದರು ಹಾಗೂ ಸಭೆಯಲ್ಲಿ 350 ರಷ್ಟು ಕಾರ್ಯಕರ್ತರು ಉಪಸ್ಥಿತರಿದ್ದರು
