ಅನಿವಾಸಿ ಕನ್ನಡಿಗರ ವಿಶೇಷ

ಸೌದಿ ಅರೇಬಿಯಾ: Independence Cup-2017 ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ

ವರದಿಗಾರ-ಸೌದಿ ಅರೇಬಿಯಾ: ಇಲ್ಲಿನ ಜೀಝಾನ್ ಬೇಯ್ಶ್ ನಲ್ಲಿ  ಬಿನ್ ಫಹದ್ ಸ್ಪೋರ್ಟ್ಸ್ ಅಕಾಡಮಿ ವತಿಯಿಂದ  ನಡೆದ   “Independence Cup- 2017”  ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಬೇಯ್ಶ್ ನ ರಾಮಿ ಕ್ರೀಡಾಂಗಣದಲ್ಲಿ  ನಡೆಯಿತು.
ಪಂದ್ಯಾಟದಲ್ಲಿ ೧೬ ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಅಕಾ ತಂಡವು ಬಿನ್ ಫಹದ್  ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು, ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ  ಬ್ಯಾಟಿಂಗ್  ಹಾಗೂ ಬೌಲಿಂಗ್ ವಿಭಾಗದಲ್ಲಿ ಮಿಂಚಿ ಆಲ್ರೌಂಡ್ ಪ್ರದರ್ಶನ ನೀಡಿದ   ಬಿನ್ ಫಹದ್ ತಂಡದ ಅರ್ಷದ್ ಪಡುಬಿದ್ರಿ  ಹಾಗೂ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಶ್ರೀಜಿತ್ ಸರಣಿ ಶ್ರೇಷ್ಠ  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ 71ನೇ ಸ್ವಾತಂತ್ರೋತ್ಸವವನ್ನು ತ್ರಿವರ್ಣ ಧ್ವಜದ ಕೇಕ್ ಕತ್ತರಿಸುವ ಮೂಲಕ ಮತ್ತು ಭಾರತ ಮತ್ತು ಸೌದಿ ಅರೇಬಿಯಾದ ಧ್ವಜವನ್ನು ಆರೋಹಣ ಮಾಡುವ ಮೂಲಕ ಆಚರಿಸಲಾಯಿತು,  ಇಂಡಿಯನ್ ಸೋಶಿಯಲ್ ಫೋರಮ್ ನ ಸಲೀಂ ಗುರುವಾಯನಕೆರೆ ಸ್ವಾತಂತ್ರ್ಯ ಸಂದೇಶ ಭಾಷಣವನ್ನು ಮಾಡಿದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ನ ಸಲೀಂ ಗುರುವಾಯನಕೆರೆ, ಆರೀಸ್ ಉಳ್ಳಾಲ, ರಾಝಿಕ್ ಕುಂದಾಪುರ , ಶಫಾನ್ ಗಂಗೊಳ್ಳಿ  ಉಪಸ್ಥಿತರಿದ್ದರು   ಪಂದ್ಯಕೂಟದ ತೀರ್ಪುಗಾರರಾಗಿ ಮೆಹಬೂಬ್ ಮಡಿಕೇರಿ , ಸಿದ್ದಿಕ್ ಬುಲೆಟ್ , ನೌಫಾಲ್ ಕಂಚಿನಡ್ಕ  ಸಹಕರಿಸಿದರು. ಕ್ರೀಡಾಕೂಟವನ್ನು ಸಾಬಿಹ್ ದೇರಳಕಟ್ಟೆ, ಝಹೀರ್ ಉಡುಪಿ, ಅವ್ಫಾ  ಕೃಷ್ಣಾಪುರ, ನವಾಜ್ ಶಾಕೊ, ಅಜ್ಮಾನ್ ಸಾಗರ, ಮುಕ್ತಾರ್ ಪಡುಬಿದ್ರಿ ಕ್ರೀಡಾಕೂಟದ ನೇತೃತ್ವವನ್ನು ವಹಿಸಿಕೊಂಡಿದ್ದರು.   ನವಾಜ್ ಕಂಚಿನಡ್ಕ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group