ರಾಷ್ಟ್ರೀಯ ಸುದ್ದಿ

BSF ಮಾಜಿ ಯೋಧ ತೇಜ್ ಬಹಾದ್ದೂರ್ ವಿದೇಶಿ ಸಂಪರ್ಕದ ತನಿಖೆ ನಡೆಸಿದ NIA  ಬರಿಗೈಲಿ ವಾಪಾಸ್ !

ವರದಿಗಾರ (ಫೆ 2) :  ದೇಶದ ಗಡಿ ಕಾಯುವ ಸೈನಿಕರ ಕಷ್ಟಗಳು ಪ್ರಧಾನಿಯವರಿಗೆ ತಲುಪಲೆಂಬ ಉದ್ದೇಶದಿಂದ ಕಳೆದ ವರ್ಷ ಜನವರಿಯಲ್ಲಿ ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವುದರ ಕುರಿತು ವೀಡಿಯೋ ಮಾಡಿ, ಅದನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಸುದ್ದಿಯಾಗಿದ್ದ ಬಿ ಎಸ್ ಎಫ್ ಜವಾನ ತೇಜ್ ಬಹಾದ್ದೂರ್ ಯಾದವ್ ಅವರಿಗೆ ಇರಬಹುದಾದ ವಿದೇಶಿ ಸಂಪರ್ಕಗಳ ಕುರಿತು ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (NIA) ಬರಿಗೈಲಿ ವಾಪಾಸಾಗಿದೆ. ಸೇನೆಯಲ್ಲಿರುವ ಭ್ರಷ್ಟಾಚಾರಗಳನ್ನು ಬಯಲು  ಮಾಡಿದ್ದಕ್ಕಾಗಿ ತೇಜ್ ಬಹಾದ್ದೂರ್ ಸೇವೆಯಿಂದ ವಜಾಗೊಂಡಿದ್ದಾರೆ. ತನ್ನ ವಜಾವನ್ನು ಪ್ರಶ್ನಿಸಿ ಬಹಾದ್ದೂರ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

ಕಳೆದ ಜನವರಿ 18ರಂದು ಬಿ ಎಸ್ ಎಫ್ ಡೈರೆಕ್ಟರ್ ಜನರಲ್ ಕೆ ಕೆ ಶರ್ಮಾ ಅವರು NIA ತನಿಖೆಗೆ ವಿನಂತಿಸಿದ್ದರು. ರಾಷ್ಟ್ರೀಯ ತನಿಖಾ ದಳ, ಬಹಾದ್ದೂರ್ ನ ಸಾಮಾಜಿಕ ತಾಣಗಳ ಖಾತೆಗಳು  ಹಾಗೂ ಆತನ ಕರೆ ದಾಖಲೆಗಳನ್ನು ತನಿಖೆಗೊಳಪಡಿಸಿತ್ತು. ಆ ಮೂಲಕ ಬಹಾದ್ದೂರ್ ತಾನು ಮಾಡಿದ್ದ ವೀಡಿಯೋವನ್ನು ಸಾಮಾಜಿಕ ತಾಣಗಳಿಗೆ ಅಪ್ಲೋಡ್ ಮಾಡಲು ಯಾವುದೇ ವಿದೇಶಿ ಶಕ್ತಿಗಳು ಸಹಾಯ ಮಾಡಿತ್ತೇ ಎನ್ನುವ ದಿಕ್ಕಿನಲ್ಲಿ ತನಿಖೆ ನಡೆಸಿದ ತನಿಖಾ ದಳಕ್ಕೆ ಆ ರೀತಿಯ ಯಾವುದೇ ಅಂಶಗಳು ಪತ್ತೆಯಾಗಿಲ್ಲವೆನ್ನಲಾಗಿದೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ತನ್ನ ವಜಾ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯೊಂದಿಗೆ ರಾಷ್ಟ್ರೀಯ ತನಿಖಾ ದಳ ನಡೆಸಿದ ತನಿಖಾ ವರದಿಯನ್ನು ಕೂಡಾ ತೇಜ್ ಬಹಾದ್ದೂರ್ ಲಗತ್ತಿಸಿದ್ದಾನೆ ಎಂದು ‘ಇಂಡಿಯನ್ ಎಕ್ಸ್’ಪ್ರೆಸ್’ ವರದಿ ತಿಳಿಸಿದೆ. ಹೈಕೋರ್ಟಿನಲ್ಲಿ ಕಳೆದ ಮಂಗಳವಾರ ಅದರ ವಿಚಾರಣೆ ನಡೆದಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಬಿ ಭಜಂತ್ರಿಯವರು, ಕೇಂದ್ರ ಸರಕಾರ, ಬಿ ಎಸ್ ಎಫ್ ಡೈರೆಕ್ಟರ್ ಜನರಲ್ ಹಾಗೂ ಇತರರಿಗೆ ನೋಟೀಸು ಕಳಿಸಿದ್ದಾರೆ.

ತನ್ನ ವೀಡಿಯೋದಲ್ಲಿ ಬಹಾದೂರ್, ಸೇನೆಯಲ್ಲಿರುವ ಸೈನಿಕರಿಗೆ ಕಳಪೆ ಮಟ್ಟದ ಆಹಾರಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲೇ ಮಲಗಬೇಕಾಗುತ್ತದೆ ಎಂದು ತನ್ನ ಸೇವಾ ರೈಫಲನ್ನು ಹಿಡಿದುಕೊಂಡು ಹೇಳಿದ್ದರು. ಕೇಂದ್ರದಲ್ಲಿ ನೀಡುವ ಕಳಪೆ ಆಹಾರವನ್ನು ಕೂಡಾ ತನ್ನ ವೀಡಿಯೋದಲ್ಲಿ ತೋರಿಸಿದ್ದರು. ಆದರೆ ಅರ್ಜಿಯಲ್ಲಿ ಬಹಾದ್ದೂರ್, ”ನಮಗೆ ಪೂರೈಕೆ ಮಾಡುವ ಕಳಪೆ ಆಹಾರಗಳನ್ನು ಅಧಿಕಾರಿಗಳಿಗೆ ಸಾಕ್ಷ್ಯವಾಗಿ ತೋರಿಸಲು ವೀಡಿಯೋ ರೆಕಾರ್ಡ್ ಮಾಡಿದ್ದು, ಆದರೆ ಅದನ್ನು ಯಾವಾಗ ನನ್ನ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆಂದು ನನಗೆ ತಿಳಿದಿಲ್ಲ’ ಎಂದು ಹೇಳಿಕೊಂಡಿದ್ದಾರೆ.  ಮುಂದಿನ ವಿಚಾರಣೆ ಮೇ 28ಕ್ಕೆ ನಿಗದಿಪಡಿಸಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group